ಜಯಾ ಅಮಿತಾಭ್ ಬಚ್ಚನ್ ಎಂದು ಸಂಬೋಧಿಸಿದ ಕಾರಣ ಆಕ್ರೋಶ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ಸಂಸದೆ | JANATA NEWS
ನವದೆಹಲಿ : ರಾಜ್ಯಸಭಾ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕಲಾಪದ ವೇಳೆ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರನ್ನು 'ಜಯಾ ಅಮಿತಾಭ್ ಬಚ್ಚನ್' ಎಂದು ಸಂಬೋಧಿಸಿದ ಕಾರಣ ಸಂಸದೆ ಜಯಾ ಅವರು ಆಕ್ರೋಶ ವ್ಯಕ್ತಪಡಿಸಿದ ವಿಶೇಷ ಘಟನೆ ಸಂಭವಿಸಿದೆ.
ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಪತ್ನಿ ಮತ್ತು ನಟಿ ಜಯಾ ಬಚ್ಚನ್ ರಾಜ್ಯಸಭೆಯಲ್ಲಿ ಮಾತನಾಡುತ್ತಾ, "ಇದೊಂದು ಹೊಸ ವಿಧಾನವಾಗಿದೆ, ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ, ಮಹಿಳೆಯರಿಗೆ ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳಿಲ್ಲವೇ?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಾಮೆಂಟ್‌ಗೆ ತಕ್ಷಣವೇ ಉತ್ತರಿಸಿದ ರಾಜ್ಯಸಭಾ ಉಪಾಧ್ಯಕ್ಷರು, "ಏಕೆಂದರೆ ಸಂಸತ್ತಿನ ದಾಖಲೆಗಳಲ್ಲಿ ನಿಮ್ಮ ಹೆಸರನ್ನು ಅಧಿಕೃತವಾಗಿ ಜಯಾ ಅಮಿತಾಬ್ ಬಚ್ಚನ್ ಎಂದು ನೋಂದಾಯಿಸಲಾಗಿದೆ" ಎಂದು ಹೇಳಿದರು.