Mon,Dec15,2025
ಕನ್ನಡ / English

ವಯನಾಡ್ ಭೂಕುಸಿತ ದುರಂತವು ಮಾನವ ನಿರ್ಮಿತ ದುರಂತ ಮತಬ್ಯಾಂಕ್ ರಾಜಕಾರಣ ಇದಕ್ಕೆ ಕಾರಣ - ಸಂಸದ ಸೂರ್ಯ | JANATA NEWS

01 Aug 2024

ನವದೆಹಲಿ : ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬುಧವಾರ ವಯನಾಡ್ ಭೂಕುಸಿತದ ಕುರಿತು ವಯನಾಡ್ ಮಾಜಿ ಸಂಸದ ಮತ್ತು ಲೋಪಿ ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಸಂಸದ ಸೂರ್ಯ, 'ರಾಹುಲ್ ಗಾಂಧಿ ವಯನಾಡ್ ಸಂಸದರಾಗಿದ್ದಾಗಿನಿಂದ ಕಳೆದ 1,800 ದಿನಗಳಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಒಮ್ಮೆಯೂ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ಪ್ರಸ್ತಾಪಿಸಿಲ್ಲ' ಎಂದು ಹೇಳಿದರು.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ಮಾತನಾಡಿ, ವಯನಾಡ್ ಭೂಕುಸಿತ ದುರಂತವು ಮಾನವ ನಿರ್ಮಿತ ದುರಂತವಾಗಿದ್ದು, ಪರಿಸರ ಸೂಕ್ಷ್ಮ ಪ್ರದೇಶದ ಅತಿಕ್ರಮಣ ಮತ್ತು ವಾಣಿಜ್ಯ ಶೋಷಣೆಗೆ ಅವಕಾಶ ನೀಡಿದ ಕೇರಳ ಸರ್ಕಾರದ "ಮತಬ್ಯಾಂಕ್ ರಾಜಕಾರಣ" ಇದಕ್ಕೆ ಕಾರಣ ಎಂದು ಹೇಳಿದರು.

ವಯನಾಡಿನ ಮಾಜಿ ಸಂಸದರು ಈ ಹಿಂದೆ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಒಮ್ಮೆಯೂ ಸಂಸತ್ತಿನಲ್ಲಿ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಸೂರ್ಯ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ ಸೂರ್ಯ, ಕಾಂಗ್ರೆಸ್ ನ ಮಾಜಿ ಸಂಸದ ಪಿ.ಟಿ. ಥಾಮಸ್ ಪಶ್ಚಿಮಘಟ್ಟ ಸಂರಕ್ಷಣೆಯಲ್ಲಿ ದಿಟ್ಟ ನಿಲುವು ತಳೆದಿದ್ದ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಇಡುಕ್ಕಿಯಿಂದ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದೆ, ಎಂದು ಆರೋಪಿಸಿದ್ದಾರೆ.

"ಐಐಟಿ ದೆಹಲಿ ವರದಿಯು, ಜನವರಿ 2024 ರಲ್ಲಿ, ವಯನಾಡ್‌ನ 58.2 ಪ್ರತಿಶತ ಪ್ರದೇಶವು 'ಹೆಚ್ಚರಿಂದ ಅತಿಹೆಚ್ಚು' ಅಪಾಯದ ವರ್ಗಕ್ಕೆ ಸೇರಿದೆ ಎಂದು ಗುರುತಿಸಿದೆ ಮತ್ತು ಸ್ಥಳಾಂತರಿಸಲು ಶಿಫಾರಸು ಮಾಡಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2020 ರಲ್ಲಿ ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಿಂದ ವಿಶೇಷವಾಗಿ ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರಿನಲ್ಲಿರುವ 4,000 ಕುಟುಂಬಗಳನ್ನು ಸ್ಥಳಾಂತರಿಸಲು ಸಲಹೆ ನೀಡಿದೆ. 2011 ಮತ್ತು 2013 ರಲ್ಲಿ ಎರಡು ತಜ್ಞರ ಸಮಿತಿಯ ವರದಿಗಳು ಇಂದು ದುರಂತ ಸಂಭವಿಸಿದ ಪ್ರದೇಶವನ್ನು ಪರಿಸರ-ಸೂಕ್ಷ್ಮ ವಲಯಗಳ ಪಟ್ಟಿಗೆ ಸೇರಿಸಬೇಕು ಮತ್ತು ಪ್ರದೇಶದ ಮತ್ತಷ್ಟು ವಾಣಿಜ್ಯೀಕರಣವನ್ನು ನಿಲ್ಲಿಸಬೇಕು ಎಂದು ಶಿಫಾರಸು ಮಾಡಿದೆ. ಆದರೆ ವಿವಿಧ ಧಾರ್ಮಿಕ ಸಂಘಟನೆಗಳ ಒತ್ತಡಕ್ಕೆ ಮಣಿದು ಈ ಪ್ರದೇಶದಲ್ಲಿ ಯಾವುದೇ ಅಕ್ರಮ ಒತ್ತುವರಿಗಳನ್ನು ತೆಗೆದುಹಾಕಿಲ್ಲ ಅಥವಾ ಅತಿರೇಕದ ನಿರ್ಮಾಣ ಅಥವಾ ಗಣಿಗಾರಿಕೆಯನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸೂರ್ಯ ಆರೋಪಿಸಿದ್ದಾರೆ.

English summary :Wayanad landslide disaster is a man-made disaster due to vote bank politics - MP Surya

 ಆಸ್ಟ್ರೇಲಿಯಾ ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕ ದಾಳಿಗೆ ಕನಿಷ್ಟ 12 ಸಾವು
ಆಸ್ಟ್ರೇಲಿಯಾ ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕ ದಾಳಿಗೆ ಕನಿಷ್ಟ 12 ಸಾವು
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
 ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
 ಎಸ್ಐಆರ್, ಸಂಚಾರ ಸಾಥಿ -  ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಎಸ್ಐಆರ್, ಸಂಚಾರ ಸಾಥಿ - ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು

ನ್ಯೂಸ್ MORE NEWS...