ಕರ್ನಾಟಕ-ಗೋವಾ ರಾಜ್ಯಗಳ ಸಂಪರ್ಕ ಸೇತುವೆಯಾಗಿದ್ದ, ಹಳೆಯ ಕಾಳಿ ಸೇತುವೆ ಈಗ ಇತಿಹಾಸ | JANATA NEWS
ಕಾರವಾರ : ದಶಕಗಳಿಂದ ಕರ್ನಾಟಕ ಹಾಗೂ ಗೋವಾ ರಾಜ್ಯಗಳನ್ನು ಸಂಪರ್ಕಿಸಲು ಸೇತುವೆಯಾಗಿದ್ದ, ಕಾಳಿ ನದಿ ಸೇತುವೆ, ಇಂದು ಬೆಳಗಿನ ಜಾವ 1:30 ರ ಸುಮಾರಿಗೆ ಕುಸಿದು ಬಿದ್ದಿದೆ.
ಈ ಘಟನೆಯಲ್ಲಿ ಒಂದು ಲಾರಿಯೊಂದು ನದಿಗೆ ಬಿದ್ದಿದ್ದು, ಗಾಯಗೊಂಡ ವ್ಯಕ್ತಿಯನ್ನು ಲಾರಿ ಚಾಲಕ ತಮಿಳುನಾಡಿನ ಧರ್ಮಪುರಿಯ 37 ವರ್ಷದ ಬಾಲಮುರುಗನ್ ಎಂದು ಗುರುತಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಸುರಕ್ಷಿತವಾಗಿದ್ದಾರೆ.
ಸುಮಾರು 45 ವರ್ಷಗಳ ಆಸುಪಾಸಿನಷ್ಟು ಹಳಿಯದಾದ ಈ ಸೇತುವೆಯ ಸುತ್ತಮುತ್ತ ಅನೇಕ ಚಿತ್ರಗಳ ಚಿತ್ರೀಕರಣ ನಡೆದು ಪ್ರವಾಸಿತಾಣದ ರೀತಿ ಸುಪ್ರಸಿದ್ಧಿ ಪಡೆದಿದ್ದು, ಈಗ ಇತಿಹಾಸ ಸೇರಿದೆ.
ಸೇತುವೆ ಕುರಿತು ತಕ್ಷಣ ಕಾರ್ಯಚರಣೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹೆಚ್ಚುವರಿಯಾಗಿ, ಸೇತುವೆಯ ಬಲವತ್ತತೆಯ ಪರಿಶೀಲನೆಗಾಗಿ ಮತ್ತು ಪ್ರದೇಶದಲ್ಲಿನ ಎಲ್ಲಾ ಸೇತುವೆಗಳ ಸುರಕ್ಷತೆಯನ್ನು ಖಚಿತಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಅಧಿಕೃತ ಪತ್ರವನ್ನು ಕಳುಹಿಸಲಾಗಿದೆ.
ಕರಾವಳಿಯ ಹೆದ್ದಾರಿ ವಲಯಗಳಲ್ಲಿ ಇತ್ತೀಚಿನ ದುರಂತಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಮತ್ತು ಸಾಧ್ಯವಾದರೆ ಈ ಪ್ರದೇಶದಲ್ಲಿ ಪ್ರಯಾಣಿಸುವುದನ್ನು ತಪ್ಪಿಸುವುದು ಸೂಕ್ತವೆನಿಸಿದೆ.