ವಾರ್ಷಿಕ ನಿರ್ವಹಣೆ : ಬೆಂಗಳೂರು ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ | JANATA NEWS
ಬೆಂಗಳೂರು : ವಾರ್ಷಿಕ ನಿರ್ವಹಣೆ ಕೆಲಸದ ನಿಮಿತ್ತ ರಾಜಧಾನಿ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.
ಬರುವ ರವಿವಾರ 11.08.2024 ರಂದು 10:00ಗಂಟೆಗಳಿಂದ 16:00ಗಂಟೆಗಳವರೆಗೆ 2ನೇ ರನ್ 11ಕೆವಿ 1000ಚದುರಮಿಮಿ ಕೇಬಲ್ TR-1 ರಿಂದ ಬ್ಯಾಂಕ್-1 ಮತ್ತು TR-2 ರಿಂದ ಬ್ಯಾಂಕ್-2 ಗೆ ಐಸೊಲೇಟರ್ ಕೆಲಸ ಮತ್ತು ವಾರ್ಷಿಕ ನಿರ್ವಹಣೆಗಾಗಿ, 11kv ಬ್ರೇಕರ್ , ಬಸ್ ಜಿಒಎಸ್ ನಿರ್ವಹಣೆ. ಆದ್ದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ರಾಘವೇಂದ್ರ ಲೇಔಟ್, ಕಮ್ಮಗೊಂಡನಹಳ್ಳಿ, ಧನಪಾಲ್ ಲೇಔಟ್, ಶೆಟ್ಟಿಹಳ್ಳಿ, ಲಕ್ಷ್ಮೀಪುರ ಕ್ರಾಸ್, ಲಕ್ಷ್ಮೀಪುರ ಗ್ರಾಮ, ಶ್ರೀರಾಮ್ ಸಮೀಕ್ಷಾ ಅಪಾರ್ಟ್‌ಮೆಂಟ್, ಸಿಂಗಾಪುರ, ಭದ್ರಸ್ವಾಮಿ ಲೇಔಟ್, ಸಿಂಗಾಪುರ ಗಾರ್ಡನ್, ಅಬ್ಬಿಗೆರೆ ಗ್ರಾಮ, ನಿಸರ್ಗ ಲೇಔಟ್, ಲಕ್ಷ್ಮಿ ದೇವಸ್ಥಾನ ರಸ್ತೆ, ಕೆಂಪೇಗೌಡ ಉದ್ಯಾನ, ಕುವೆಂಪುನಗರ, ವೀಶ್ವಯ್ಯಗೌಡರಳ್ಳಿ, ಹೆಚ್.ವಿ. , ಕಾನ್ಶಿರಾಮನಗರ, ನೇತಾಜಿ ಲೇಔಟ್, ಸೆವೆನ್ ಹಿಲ್ಸ್ ಕೌಂಟಿ, ಲಕ್ಷ್ಮೀಪುರ ಮುಖ್ಯ ರಸ್ತೆ, ಬ್ರಿಗೇಡ್ ಅಪಾರ್ಟ್‌ಮೆಂಟ್, ಐಸಿಟಿಎಸ್, ಕೆರೆಗುಡ್ಡದಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸಕಂ ಪ್ರಕಟಣೆ ಹೊರಡಿಸಿದೆ.