ಬಾಂಗ್ಲಾದೇಶದ ರೀತಿ ಗವರ್ನರ್ ಆಫೀಸಿಗೆ ಗವರ್ನರ್ ಮನೆಗೆ ನುಗ್ಗುತ್ತೇವೆ ಕಾಂಗ್ರೆಸಿಗರು - ಕಾಂಗ್ರೆಸ್ ಎಂಎಲ್ಸಿ ಡಿಸೋಜಾ | JANATA NEWS
ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಆದೇಶ ನೀಡಿದ ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ರಾಷ್ಟ್ರಪತಿಗಳು ಹಿಂದಕ್ಕೆ ಕಳಿಸದಿದ್ದರೆ ಬಾಂಗ್ಲಾದೇಶದಲ್ಲಿ ಆದ ಸ್ಥಿತಿಯಂತೆ ನಾವು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡ ಐವಾನ್ ಡಿಸೋಜ ಎಚ್ಚರಿಕೆ ನೀಡುವ ಮೂಲಕ ಹೊಸ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿಗೆ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು, ಈ ವೇಳೆ ಬಸ್ ಗಳ ಮೇಲೆ ಕಲ್ಲು ತೂರಾಟ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿ ಗಳಿಗೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದೆ.
ಪ್ರತಿಭಟನೆ ನಿರತ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಈ ಸಂದರ್ಭದಲ್ಲಿ ಮಾತನಾಡಿ, ಯಾವ ರೀತಿ ಬಾಂಗ್ಲಾದೇಶದಲ್ಲಿ ಆಯಿತೋ(ದಂಗೆ, ಕೊಲೆ, ಸುಲಿಗೆ) ಅದೇ ರೀತಿ ಗವರ್ನರ್ ಆಫೀಸಿಗೆ ಗವರ್ನರ್ ಮನೆಗೆ ನುಗ್ಗುವಂತ ಕೆಲಸವನ್ನು ನಾವು ಕಾಂಗ್ರೆಸ್ಸಿಗರು ಮಾಡಿಯೇ ಮಾಡುತ್ತೇವೆ", ಎಂದು ಸ್ಪಷ್ಟವಾಗಿ ರಾಜ್ಯಪಾಲರಿಗೆ ಎಚ್ಚರಿಕೆ ನೀಡುವ ಮೂಲಕ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ.
ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಈ ವಿಡಿಯೋ ವನ್ನು ಹಚ್ಚಿಕೊಂಡು, "ಸಿದ್ದರಾಮಯ್ಯ ನವರ ಅಕ್ರಮ ನಿವೇಶನ ಪಡೆದಿರುವ ಪ್ರಕರಣದಲ್ಲಿ ತನಿಖೆ ಮಾಡುವುದಕ್ಕೆ ತನಿಖಾ ಸಂಸ್ಥೆಗಳಿವೆ, ತೀರ್ಪು ನೀಡುವುದಕ್ಕೆ ನ್ಯಾಯಾಲಯವಿದೆ. ಪ್ರಶ್ನೆ ಕೇಳುವುದಕ್ಕೆ ಮಾಧ್ಯಮಗಳಿವೆ. ಇವೆಲ್ಲ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳು. ಇದನ್ನು ಬಿಟ್ಟು ಅರಾಜಕತೆ, ದೊಂಬಿ, ಕಚೇರಿಯೊಳಗೆ ನುಗ್ಗುತ್ತೇವೆ, ಬಾಂಗ್ಲಾ ಅಧ್ಯಕ್ಷೆಗೆ ಆದ ಪರಿಸ್ಥಿತಿ ನಿಮಗೆ ಬರುತ್ತದೆ ಎಂಬ ಅನಾಗರೀಕ, ದ್ವೇಷಪೂರಿತ ಮಾತುಗಳನ್ನು ಆಡಿದ ಕಾಂಗ್ರೆಸ್ ನಾಯಕ ಐವನ್ ಡಿಸೋಜ ಅವರ ಮಾತುಗಳು ಅವರ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಕೂಡದೆ ಡಿಸೋಜ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.", ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ನವರ ಅಕ್ರಮ ನಿವೇಶನ ಪಡೆದಿರುವ ಪ್ರಕರಣದಲ್ಲಿ ತನಿಖೆ ಮಾಡುವುದಕ್ಕೆ ತನಿಖಾ ಸಂಸ್ಥೆಗಳಿವೆ, ತೀರ್ಪು ನೀಡುವುದಕ್ಕೆ ನ್ಯಾಯಾಲಯವಿದೆ. ಪ್ರಶ್ನೆ ಕೇಳುವುದಕ್ಕೆ ಮಾಧ್ಯಮಗಳಿವೆ. ಇವೆಲ್ಲ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳು. ಇದನ್ನು ಬಿಟ್ಟು ಅರಾಜಕತೆ, ದೊಂಬಿ, ಕಚೇರಿಯೊಳಗೆ ನುಗ್ಗುತ್ತೇವೆ, ಬಾಂಗ್ಲಾ ಅಧ್ಯಕ್ಷೆಗೆ ಆದ ಪರಿಸ್ಥಿತಿ… pic.twitter.com/43y25JKpUC
— Basanagouda R Patil (Yatnal) (@BasanagoudaBJP) August 19, 2024