ಬಾಂಗ್ಲಾದೇಶ ಮಾದರಿಯ(ಹಿಂಸಾಚಾರ) ಹೋರಾಟ ಅವತ್ತೇ ಮಾಡಿ ಮುಗಿಸುತ್ತಿದ್ದೆವು..ಆಗಿಲ್ಲ, ಈಗ ಮಾಡುತ್ತೇವೆ - ರೈತ ಮುಖಂಡ | JANATA NEWS
ಮೀರತ್ : 2021 ರ ರೈತರ ಗಣರಾಜ್ಯೋತ್ಸವದ ಪ್ರತಿಭಟನೆ ಪಾರ್ಲಿಮೆಂಟ್ ಕಡೆಗೆ ಹೋಗಿದ್ದರೆ ಬಾಂಗ್ಲಾದೇಶ ಹಿಂಸಾಚಾರ ಮಾದರಿಯ ಸ್ಥಿತಿ ನಿರ್ಮಾಣ ಮಾಡುವ ಕೆಲಸ ಅವತ್ತೇ ಮಾಡಿ ಮುಗಿಸಿ ಬಿಡುತ್ತಿದ್ದೆವು. ಈಗ ಮಾಡಿಯೇ ಮಾಡುವ ಗಂಭೀರ ಬೆದರಿಕೆಯನ್ನು ರೈತರ ಮುಖಂಡ ಎನ್ನಲಾದ ರಾಕೇಶ್ ತಿಕಾಯತ ಕೇಂದ್ರ ಸರ್ಕಾರಕ್ಕೆ ಹಾಕಿದ್ದಾರೆ.
ದೆಹಲಿಯಲ್ಲಿ ರೈತರ ಗಣರಾಜ್ಯೋತ್ಸವದ ಪ್ರತಿಭಟನೆ ಹೆಸರಿನಲ್ಲಿ, 26 ಜನವರಿ 2021 ರಂದು ಪಂಜಾಬನ ನಿರ್ದಿಷ್ಟ ರೈತರು ಪ್ರತಿಭಟನೆ ನಡೆಸಲು ಟ್ಟ್ರ್ಯಾಕ್ಟರ್ ನಲ್ಲಿ ದೆಹಲಿಗೆ ಬಂದಿದ್ದರು. ಪ್ರತಿಭಟನಾಕಾರರ ಗುಂಪು ಮೆರವಣಿಗೆಯಿಂದ ವಿಮುಖವಾಗಿ ಕೆಂಪು ಕೋಟೆಗೆ ನುಗ್ಗಿ ಅಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆಸಿತ್ತು.
ಸುದ್ದಿ ಮಾಧ್ಯಮ ಎಬಿಪಿ ನ್ಯೂಸ್ ನೊಂದಿಗೆ ಕೋಲ್ಕತಾ ಹಿಂಸಾಚಾರ ಕುರಿತು ಮಾತನಾಡಿದ ರಾಕೇಶ್ ತಿಕಾಯತ ಅವರು, "ಕೊಲೆ, ಅತ್ಯಾಚಾರ ಆಗಿದ್ದರೆ ಅದಕ್ಕೆ ದೇಶದಲ್ಲಿ ಕಾನೂನು ಇದೆ. ಅದನ್ನು ದೇಶಾದ್ಯಂತ ಪ್ರಚಾರ ಮಾಡುವ ಅಗತ್ಯ ಏನಿದೆ? ಹೀಗೆ ಮಾಡುವುದರಿಂದ ಸರ್ಕಾರದ(ಮಮತಾ ಬ್ಯಾನರ್ಜಿ) ಹೆಸರು ಹಾಳು ಮಾಡಲಾಗಿದೆ... ಕೆಲವು ಹತ್ತು ದಿನಗಳಿಂದ ಅದೇ 10 ಅದೇ ವಿಷಯವನ್ನು ಎತ್ತುವುದು ಏಕೆ? ರಾಜ್ಯ ಸರ್ಕಾರದ ವೈಫಲ್ಯ ಎತ್ತಿ? ಹಿಡಿಯುವುದಕ್ಕೆ? ರಾಷ್ಟ್ರಪತಿ ಶಾಸನ ಹಾಕುವುದಕ್ಕೆ?" ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸ್ಥಿತಿಯ ಬಗ್ಗೆ ಮಾತನಾಡಿದ ತಿಕಾಯತ ಅವರು "ಅದೇ ರೀತಿ ಇಲ್ಲೂ ಕೂಡ ಆಗಲಿದೆ.. ಜನರು ತುಂಬಾ ಸಿಟ್ಟಿನಲ್ಲಿ ಇದ್ದಾರೆ." ಎಂದು ಬೆದರಿಕೆ ಹಾಕಿದ್ದಾರೆ.
ತಮ್ಮ ಮಾತು ಮುಂದಿವರಿಸಿದ ತಿಕಾಯತ ಅವರು, "ಆ ದಿನ ಟ್ರಾಕ್ಟರ್ ಗಳನ್ನು ತೆಗೆದುಕೊಂಡು ಡೆಲ್ಲಿಗೆ ಹೋಗಿದ್ದವರು, ತಪ್ಪಾಗಿ ಕೆಂಪು ಕೋಟೆಯ ಕಡೆಗೆ ತಿರುಗಿದರು, ಅದೇನಾದರೂ ಪಾರ್ಲಿಮೆಂಟ್ ಕಡೆಗೆ ಹೋಗಿದ್ದರೆ.. ಜನವರಿ 26 ಆಗಿತ್ತು.. 25,000 ಲಕ್ಷ ಜನರಿದ್ದರು, ಇದೆಲ್ಲ ಅಷ್ಟೂ ಕೆಲಸ(ಬಾಂಗ್ಲಾದೇಶ ಹಿಂಸಾಚಾರ ಮಾದರಿ) ಅವತ್ತೇ ಮಾಡಿ ಮುಗಿಸಿ ಬಿಡುತ್ತಿದ್ದೆವು.. ಗುರಿ ತಪ್ಪಿದೆ.. ಆದರೆ ಈಗ ತಯಾರಿ ಸರಿ ಇದೆ... ಜನರ ಚಿಂತೆ ಮಾಡಬೇಡಿ ದೊಡ್ಡ ಆಂದೋಲನ ನಡೆಸಿ ನಡೆಸುತ್ತೇವೆ", ಎಂದು ಗಂಭೀರ ಬೆದರಿಕೆಯನ್ನು ರಾಕೇಶ್ ತಿಕಾಯತ ನೀಡಿದ್ದಾರೆ.
अभिव्यक्ति की आजादी का असली मजा यही ले रहे हैं l pic.twitter.com/TFMMYD69mA
— Kanchan Ugursandi 🇮🇳 (@BikerGirlkancha) August 20, 2024