Wed,Jul15,2026
ಕನ್ನಡ / English

ರಾಜ್ಯಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ : ಮೇಲ್ಮನೆಯಲ್ಲಿ ಮೊದಲ ಭಾರಿಗೆ ಬಹುಮತ ಸಾಧಿಸಿದ ಎನ್‌ಡಿಎ | JANATA NEWS

28 Aug 2024

ನವದೆಹಲಿ : ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. 12 ಸದಸ್ಯರು ರಾಜ್ಯಸಭೆಗೆ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮೇಲ್ಮನೆಯಲ್ಲಿ ಮೊದಲ ಭಾರಿಗೆ ಬಹುಮತವನ್ನು ಪಡೆದಿದೆ.

ಉಪಚುನಾವಣೆಯಿಂದ ಬಿಜೆಪಿಗೆ ಬಂದಿರುವ ಬಹುಮತವು ರಾಜ್ಯಸಭೆಯಲ್ಲಿ ವಿವಾದಾತ್ಮಕ ಮಸೂದೆಗಳ ಹಾದಿಯನ್ನು ಸುಗಮಗೊಳಿಸುತ್ತದೆ.

ರಾಜ್ಯಸಭೆ ಉಪಚುನಾವಣೆಯಲ್ಲಿ ಬಿಜೆಪಿ 9 ಸ್ಥಾನ ಗೆದ್ದಿದ್ದು, ಎನ್‌ಡಿಎ ಮಿತ್ರ ಪಕ್ಷಗಳಾದ ಎನ್‌ಸಿಪಿ(ಅಜಿತ್‌ ಪವಾರ್‌ ಬಣ) ಮತ್ತು ರಾಷ್ಟ್ರೀಯ ಲೋಕ ಮಂಚ್‌(ಆರ್.ಎಲ್.ಎಂ)ನ ತಲಾ ಒಬ್ಬರು ಕ್ರಮವಾಗಿ ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ತೆಲಂಗಾಣದಿಂದ ಒಂದು ಸ್ಥಾನವನ್ನು ಗೆದ್ದುಕೊಂಡಿದೆ.

ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಹರಿಯಾಣ, ಅಸ್ಸಾಂ ಮತ್ತು ಮಹಾರಾಷ್ಟ್ರದ ರಾಜ್ಯಸಭಾ ಸ್ಥಾನಗಳನ್ನು ಸಂಪೂರ್ಣವಾಗಿ ಬಿಜೆಪಿ ಗೆದ್ದಿದೆ.

ಕೇಂದ್ರ ಸಚಿವರಾಗಿದ್ದ ಜಾರ್ಜ್‌ ಕುರಿಯನ್‌ (ಮಧ್ಯಪ್ರದೇಶದಿಂದ) ಮತ್ತು ರವನೀತ್‌ ಸಿಂಗ್‌ ಬಿಟ್ಟೂ (ರಾಜಸ್ಥಾನದಿಂದ) ಜೂನ್‌ನಲ್ಲಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡಾಗ ಇಬ್ಬರೂ ಸಂಸದರಾಗಿರಲಿಲ್ಲ. ಮಂತ್ರಿಯಾದ 6 ತಿಂಗಳ ಒಳಗಡೆ ಸಂಸದರಾಗಬೇಕಾಗಿರುವ ಕಾರಣ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ.

ರಾಜ್ಯಸಭೆಯ 10 ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಆರ್‌ಎಸ್‌ನ ಕೇಶವ ರಾವ್‌ ಹಾಗೂ ಬಿಜೆಡಿಯ ಮಮತಾ ಮೊಹಾಂತ ಅವರು ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರುವ ಮುನ್ನ ರಾಜೀನಾಮೆ ನೀಡಿದ್ದರಿಂದ 12 ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು.

ಈ ಮಧ್ಯೆ, ರಾಷ್ಟ್ರಪತಿಗಳ ಕೋಟಾದ 4 ನಾಮನಿರ್ದೇಶಿತ ಸ್ಥಾನಗಳು ಇನ್ನೂ ಖಾಲಿಯಿದ್ದು ಅದು ಎನ್‌ಡಿಎಗೆ ಹೋಗುತ್ತದೆ.

English summary :BJP landslide victory in Rajya Sabha by-elections: NDA wins majority in upper house for the first time

ಅಪರೂಪದ ಭೂಮಿ-ಮುಕ್ತ ವಿದ್ಯುತ್ ಮೋಟಾರ್ ತಂತ್ರಜ್ಞಾನ ಬೆಂಗಳೂರು ಸ್ಟಾರ್ಟ್ಅಪ್ ದಿಂದ ಅನಾವರಣ
ಅಪರೂಪದ ಭೂಮಿ-ಮುಕ್ತ ವಿದ್ಯುತ್ ಮೋಟಾರ್ ತಂತ್ರಜ್ಞಾನ ಬೆಂಗಳೂರು ಸ್ಟಾರ್ಟ್ಅಪ್ ದಿಂದ ಅನಾವರಣ
2028–29 ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಅಭಿಯಾನ ಪ್ರಾರಂಭಿಸಿದ ಭಾರತ
2028–29 ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಅಭಿಯಾನ ಪ್ರಾರಂಭಿಸಿದ ಭಾರತ
ಬಿಡದಿಯಲ್ಲಿ ಭೂ ಸಮೀಕ್ಷೆಗೆ ಅಡ್ಡಿಪಡಿಸಿದ ಮಹಿಳಾ ರೈತರು, ಅಧಿಕಾರಿಗಳ ಮೇಲೆ ಪೊರಕೆಗಳಿಂದ ಹಲ್ಲೆ
ಬಿಡದಿಯಲ್ಲಿ ಭೂ ಸಮೀಕ್ಷೆಗೆ ಅಡ್ಡಿಪಡಿಸಿದ ಮಹಿಳಾ ರೈತರು, ಅಧಿಕಾರಿಗಳ ಮೇಲೆ ಪೊರಕೆಗಳಿಂದ ಹಲ್ಲೆ
ಭಾರತವು ತ್ವರಿತ ಅಮೆರಿಕದ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ವರದಿಗಳನ್ನು  ತಳ್ಳಿಹಾಕಿದ ಪಿಯೂಷ್ ಗೋಯಲ್
ಭಾರತವು ತ್ವರಿತ ಅಮೆರಿಕದ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಪಿಯೂಷ್ ಗೋಯಲ್
 ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 27 ಸಾವು, 22 ಗಾಯ
ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 27 ಸಾವು, 22 ಗಾಯ
ಶ್ರೀ ರಾಮ ಮಂದಿರದಲ್ಲಿ ದೇಣಿಗೆ ಅಕ್ರಮ :  ಪ್ರಸ್ತುತ ಎಸ್ಐಟಿ ಮತ್ತು ಪೊಲೀಸ್ ಕ್ರಮದ ಬಗ್ಗೆ ವಿಶ್ವಾಸ - ಆರಎಸ್ಎಸ್
ಶ್ರೀ ರಾಮ ಮಂದಿರದಲ್ಲಿ ದೇಣಿಗೆ ಅಕ್ರಮ : ಪ್ರಸ್ತುತ ಎಸ್ಐಟಿ ಮತ್ತು ಪೊಲೀಸ್ ಕ್ರಮದ ಬಗ್ಗೆ ವಿಶ್ವಾಸ - ಆರಎಸ್ಎಸ್
 ಜಾಗತಿಕ ಇಂಧನ ವ್ಯಾಪಾರದ ಬದಲಾವಣೆ : ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ಭಾರತ
ಜಾಗತಿಕ ಇಂಧನ ವ್ಯಾಪಾರದ ಬದಲಾವಣೆ : ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ಭಾರತ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು

ನ್ಯೂಸ್ MORE NEWS...