ಈ ಪ್ರವಾಸವು ವೈಯಕ್ತಿಕ : ರಾಹುಲ್ ಗಾಂಧಿ, ಸ್ಟಾಲಿನ್ ಬೆನ್ನಲ್ಲೇ ಅಮೆರಿಕ ಪ್ರವಾಸ ಕೈಗೊಂಡ ಡಿಕೆಶಿ ಸ್ಪಷ್ಟನೆ | JANATA NEWS
ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಅವರು ತಮ್ಮ ಅಮೆರಿಕ ಪ್ರವಾಸ ವೈಯಕ್ತಿಕ ಎಂದು ಪ್ರಕಟಣೆ ಹೊರಡಿಸಿದ್ದಾರೆ.
"ಡಿಸಿಎಂ ಡಿಕೆ.ಶಿವಕುಮಾರ ಅವರನ್ನು ಕಮಲಾ ಹ್ಯಾರಿಸ್ ಅವರು ಆಹ್ವಾನಿಸಿದ್ದಾರೆ. ಡಿಸಿಎಂ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಲಿದ್ದಾರೆ" ಎಂದು ಕೆಲವು ರಾಷ್ಟ್ರೀಯ ಸುದ್ಧಿ ವಾಹಿನಿಗಳು ಸುದ್ದಿ ಪ್ರಸಾರ ಮಾಡಿತ್ತು.
"ನಾನು ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನನ್ನ ಸ್ಪಷ್ಟನೆ ಇದು. ಈ ಪ್ರವಾಸವು ವೈಯಕ್ತಿಕವಾಗಿದ್ದು, ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದಂತೆ ವಿನಂತಿಸುತ್ತೇನೆ.", ಎಂದು ಡಿಸಿಎಂ ಡಿಕೆಶಿವಕುಮಾರ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಈಗಾಗಲೇ ಅಮೆರಿಕ ಪ್ರವಾಸದಲ್ಲಿದ್ದಾರೆ ಹಾಗೂ ತಮಿಳುನಾಡು ಸಿಎಂ ಎಂಕೆಸ್ಟಾಲಿನ್ ಕೂಡ ಸದ್ಯವಷ್ಟೆ ಅಮೆರಿಕ ತಲುಪಿದ್ದು, ಈಗ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿಕೆಶಿವಕುಮಾರ ಭೇಟಿ ನಿಡುತ್ತಿರುವುದು ವಿಶೇಷವಾಗಿದೆ.
ಅಧ್ಯಕ್ಷ ಚುನಾವಣೆ ಹೊಸ್ತಿಲಲ್ಲಿರುವ ಅಮೆರಿಕಕ್ಕೆ ಒಬ್ಬೊರಾಗಿ ಇಂಡಿ ಆಲೈಯನ್ಸ್ ಮುಖಂಡರು ಒಂದೇ ಸಮಯದಲ್ಲಿ ಭೇಟಿ ನಿಡುತ್ತಿರುವುದು ಸಾಕಷ್ಟು ಊಹಪೋಹಕ್ಕೆ ಕಾರಣವಾಗಿದ್ದು, ಸತ್ಯ ಅಸತ್ಯತೆ ಬಗ್ಗೆ ನಿಖರವಾದ ಮಾಹಿತಿ ಅಲಭ್ಯವಾಗಿದೆ.