ದೆಹಲಿಯ ಹಿರಿಯ ಪರಿಸರ ಎಂಜಿನಿಯರ್ ವಶಕ್ಕೆ ಪಡೆದ ಸಿಬಿಐ : ಸುಮಾರು ರೂ.3 ಕೋಟಿ ಗೂ ಅಧಿಕ ನಗದು ವಶಕ್ಕೆ | JANATA NEWS
ನವದೆಹಲಿ : ರಾಜಧಾನಿ ದೆಹಲಿಯಲ್ಲಿ ಕೇಂದ್ರ ತನಿಖಾ ದಳ(ಸಿಬಿಐ) ಭರ್ಜರಿ ಭೇಟೆ ನಡೆಸಿದ್ದು, ರೂ. 91,500 ಹಣ ಲಂಚ ಹಾಗೂ ಅಕ್ರಮ 2.39 ಕೋಟಿ ರೂಪಾಯಿ (ಅಂದಾಜು) ನಗದು ಪತ್ತೆ ಮಾಡಿದೆ.
ರೂ. 91,500 ಹಣ ಲಂಚ ಪಡೆಯುವ ಸಂದರ್ಭದಲ್ಲಿ, ದೆಹಲಿಯ ಮಾಲಿನ್ಯ ನಿಯಂತ್ರಣ ಸಮಿತಿಯ (ಡಿಪಿಸಿಸಿ) ಹಿರಿಯ ಪರಿಸರ ಎಂಜಿನಿಯರ್ ಮತ್ತು ಮಧ್ಯವರ್ತಿಯೊಬ್ಬರ(ಖಾಸಗಿ ವ್ಯಕ್ತಿ) ಮಗ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ವಶಕ್ಕೆ ಪಡೆದಿದೆ. ಶೋಧದ ವೇಳೆ ಈ ಹಿರಿಯ ಪರಿಸರ ಇಂಜಿನಿಯರ್ ಅವರ ಆವರಣದಿಂದ 2.39 ಕೋಟಿ ರೂಪಾಯಿ (ಅಂದಾಜು) ನಗದು ಪತ್ತೆಯಾಗಿದೆ, ಎಂದು ಎಎನ್ಐ ವರದಿಮಾಡಿದೆ.
ನೆರೆಯ ರಾಜ್ಯವಾದ ಹರಿಯಾಣ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಕಾರಣ, ಇಂತಹ ಇನ್ನೂ ಅನೇಕ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.