ರಾಹುಲ್ ಗಾಂಧಿ ಹೇಳಿಕೆಗಳು ಹಿಂದುಗಳ ವಿರೋಧಿ ಹಾಗೂ ಮುಸ್ಲಿಮ ತುಷ್ಟಿಕರಣದಿಂದ ಪ್ರೇರಿತ - ಹಿಂದೂ ಸಾಧು ಸಂತರಿಂದ ತೀವ್ರ ಖಂಡನೆ | JANATA NEWS
ವಾರಣಾಸಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕದಲ್ಲಿ ನೀಡಿರುವ ಹೇಳಿಕೆಗೆ ಅಯೋಧ್ಯೆಯ ಸಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವತಾ ಎಂದರೆ ದೇವರಲ್ಲ, ಸಂಪೂರ್ಣ ಪಾರದರ್ಶಕ ಜೀವಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ. "ಶಿವನನ್ನು ವಿಧ್ವಂಸಕ ಎಂದು ಅವರು ಹೇಳಿದಾಗ ಅವನು ಏನು ನಾಶಮಾಡುತ್ತಾನೆ? ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತಾನೆ?... ತನ್ನ ಅಹಂಕಾರ, ಅವನ ರಚನೆ, ಅವನ ನಂಬಿಕೆಗಳನ್ನು ನಾಶಪಡಿಸುತ್ತಾನೆ" ಎಂದು ರಾಹುಲ್ ಗಾಂಧಿ ಹೇಳುವುದು ವೀಡಿಯೊದಲ್ಲಿ ಕಂಡುಬಂದಿದೆ.
ಈ ಕುರಿತು ಪಿಟಿಐ ನೊಂದಿಗೆ ಮಾತನಾಡಿದ ಪ್ರಮುಖ ಸಾಧು ಗಳಲ್ಲಿ ಒಬ್ಬರು, ರಾಹುಲ್ ಗಾಂಧಿ ಸನಾತನ ಧರ್ಮವನ್ನು ಅಪಹಾಸ್ಯಕ್ಕೆ ಗುರಿಮಾಡಲು ಬಯಸುತ್ತಾರೆ. ಒಬ್ಬ ರಾಜಕೀಯದಲ್ಲೂ ಸೋತಿರುವ ರಾಜಕೀಯ ವ್ಯಕ್ತಿ ಸನಾತನದ ಬಗ್ಗೆ ಜ್ಞಾನ ಕೊಡುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬ ಸಂತರು ಮಾತನಾಡಿ, ರಾಹುಲ್ ಗಾಂಧಿಯವರಿಗೆ ಸನಾತನ ಧರ್ಮದ ಬಗ್ಗೆ ಗೊತ್ತಿಲ್ಲ,ದೇವಿ, ದೇವತೆಗಳ ಬಗ್ಗೆ ಗೊತ್ತಿಲ್ಲ. ಅದಕ್ಕೆ ನಾನು ರಾಹುಲ್ ಗಾಂಧಿಯವರಿಗೆ ಸಲಹೆ ನೀಡುವುದೇನೆಂದರೆ ಇಂತಹ ಹೇಳಿಕೆ ನೀಡುವ ಮೊದಲು ಸನಾತನ ಧರ್ಮದ ಗ್ರಂಥದ ಅಧ್ಯಯನ ಮಾಡಿ ಎಂದು. ರಾಹುಲ್ ಗಾಂಧಿ ಅವರು ಏನು ಹೇಳಿಕೆ ನೀಡುತ್ತಿದ್ದಾರೆ ಅದು ನಿಶ್ಚಿತವಾಗಿ ಬಹುಸಂಖ್ಯಾತರಿಗೆ ನೋವುಂಟು ಮಾಡುವ ಹೇಳಿಕೆ ಆಗಿದೆ. ಈ ರೀತಿ ರಾಜಕೀಯ ಮಾಡಬೇಡಿ. ರಾಹುಲ್ ಗಾಂಧಿಯವರ ಅನೇಕ ಈ ರೀತಿ ಹೇಳಿಕೆಗಳು ಹಿಂದುಗಳ ವಿರೋಧದಲ್ಲಿರುತ್ತದೆ ಹಾಗೂ ಇದು ಮುಸ್ಲಿಮರ ತುಷ್ಟಿಕರಣದಿಂದ ಪ್ರೇರಿತವಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
VIDEO | Saints from Ayodhya express their displeasure over the statement of Lok Sabha Leader of Opposition and Congress leader Rahul Gandhi made in USA. Rahul Gandhi has said that Devta does not mean god, but a completely transparent being. pic.twitter.com/aoVP3aHP1t
— Press Trust of India (@PTI_News) September 9, 2024