ನಮಗೆ ಕೇವಲ 20 ಅಧಿಕ ಸ್ಥಾನಗಳು ಬಂದರೆ ಬಿಜೆಪಿ ಯವರೆಲ್ಲ ಜೈಲು ಪಾಲಾಗುತ್ತಿದ್ದರು - ಕಾಂಗ್ರೆಸ್ ಮುಖ್ಯಸ್ಥ ಖರ್ಗೆ | JANATA NEWS
ಅನಂತನಾಗ : ಕಾಂಗ್ರೆಸ್ ಹಿರಿಯ ನಾಯಕ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಯುಎಸ್ ಪ್ರವಾಸದಲ್ಲಿ ಮಾತನಾಡುತ್ತಾ, 10 ವರ್ಷಗಳ ಕಾಲ ಭಾರತೀಯ ಪ್ರಜಾಪ್ರಭುತ್ವವು ಮುರಿದುಹೋಗಿತ್ತು, ಈಗ ಮತ್ತೆ ಹೋರಾಡುತ್ತಿದೆ, ಎಂದು ಬಿಜೆಪಿ ಆಡಳಿತದ ಭಾರತ ಸರ್ಕಾರವನ್ನು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಗೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 20 ಅಧಿಕ ಸ್ಥಾನಗಳನ್ನು ಪಡೆದಿದ್ದರೆ, ಎಲ್ಲಾ ಬಿಜೆಪಿ ನಾಯಕರನ್ನು ಕಂಬಿ ಹಿಂದೆ ಹಾಕುತಿದ್ದೆವು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ಅವರು ಬಿಜೆಪಿ ಪಕ್ಷದ ಚುನಾವಣಾ ಮೊದಲಿನ ಘೋಷಣೆಯನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ತೀವ್ರವಾಗಿ ಹರಿಹಾಯ್ದು, "ಮೊದಲು ನೀವು 400 ಪಾರ್ ಎಂದು ಹೇಳುತ್ತಿದ್ದಿರಿ; ನಿಮ್ಮ 400 ಪಾರು ಎಲ್ಲಿ? ಅವರು (ಬಿಜೆಪಿ) 240 ಸ್ಥಾನಗಳಿಗೆ ಇಳಿದರು. ನಮಗೆ ಕೇವಲ 20 ಸ್ಥಾನಗಳು ಬಂದರೆ ಇವರೆಲ್ಲ ಜೈಲು ಪಾಲಾಗುತ್ತಿದ್ದರು" ಎಂದು ಖರ್ಗೆ ಘೋಷಿಸಿದರು.
ನಿರ್ಣಾಯಕ ಜಮ್ಮು ಮತ್ತು ಕಾಶ್ಮೀರ (ಜೆ & ಕೆ) ಚುನಾವಣೆಗೆ ಮುನ್ನ ಅನಂತ್‌ನಾಗ್‌ನಲ್ಲಿ ಬುಧವಾರ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಗುರಿಯಾಗಿಸಿಕೊಂಡಿದ್ದಾರೆ ಮತ್ತು ಈ ಪ್ರದೇಶದ ಮತದಾರರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾದ ಭರವಸೆಗಳ ಸರಣಿಯನ್ನು ಘೋಷಿಸಿದ್ದಾರೆ.
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ನಾಯಕರನ್ನು ಜೈಲಿಗೆ ತಳ್ಳುವುದಾಗಿ ಅವರು ಹೇಳಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ಹೇಳಿಕೆಯನ್ನು ಬಿಜೆಪಿ ಟೀಕಿಸಿದ್ದು, ಇದು ಕಾಂಗ್ರೆಸ್ ಪಕ್ಷದ ನಿರಂಕುಶ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ವಾದಿಸಿದೆ. ತುರ್ತು ಪರಿಸ್ಥಿತಿಯನ್ನು ಹೇರಿದ್ದು ಕಾಂಗ್ರೆಸ್ ಎಂದು ಅವರು ತಿಳಿಸಿದರು.