Wed,Jul15,2026
ಕನ್ನಡ / English

ಮುಡಾಗೆ ನಿವೇಶನಗಳನ್ನು ಹಿಂತಿರುಗಿಸಿದ ಸಿಎಂ ಪತ್ನಿ : ತಪ್ಪು ಮಾಡದೇ ಇದ್ದರೆ ಯಾಕೆ ಸೈಟ್ ಸರೆಂಡರ್ ಮಾಡಿಬಿಡ್ತಾ ಇದ್ರು - ಸಿದ್ದರಾಮಯ್ಯ ಹಳೆ ವಿಡಿಯೋ ವೈರಲ್ | JANATA NEWS

01 Oct 2024

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಂಜೂರು ಮಾಡಿದ್ದ 14 ವಿವಾದಾತ್ಮಕ ನಿವೇಶನಗಳನ್ನು ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಿಂತಿರುಗಿಸುವ ನಿರ್ಧಾರ ಮಾಡಿದ್ದಾರೆ.

ಇದೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಸಿದ್ದರಾಮಯ್ಯ ಅವರು, "ತಪ್ಪು ಮಾಡದೇ ಇದ್ದರೆ ಯಾಕೆ ಸೈಟ್ ಅನ್ನು ಸರೆಂಡರ್ ಮಾಡಿಬಿಡ್ತಾ ಇದ್ರು? ಕಾನೂನುಬಾಹಿರವಾಗಿ ಮಾಡಿರದ್ರಿಂದ ತಾನೇ ಸೈಟ್ ಅನ್ನು ವಾಪಸ್ ಕೊಟ್ಟಿರದು? ತಪ್ಪು ಒಪ್ಕಂಡಿದರಲ್ಲ..", ಎಂದು ಹೇಳುವುದು ಕಂಡುಬಂದಿದೆ.

ಈ ಕುರಿತು ಹೇಳಿರುವ ವಿಧಾನಸಭಾ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು, "ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನ ಹಿಂತಿರುಗಿಸುವ ನಿರ್ಧಾರ ಮಾಡಿದ್ದು, ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟದ ಹಾದಿಯಲ್ಲಿ ಸಿಕ್ಕಿರುವ ಮತ್ತೊಂದು ಜಯ."

"ಆದರೆ ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ? ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ? 'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ."

"ಆದರೆ 'ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ' ಸಿಎಂ ಸಿದ್ದರಾಮಯ್ಯನವರೇ. ತಾವು ತನಿಖೆ ಎದುರಿಸಲೇ ಬೇಕು. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ.", ಎಂದು ಆರ್. ಅಶೋಕ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

English summary :CM wife returns sites to Muda: Why did he surrender the site if he did nothing wrong - Siddaramaiah old video viral

ಅಪರೂಪದ ಭೂಮಿ-ಮುಕ್ತ ವಿದ್ಯುತ್ ಮೋಟಾರ್ ತಂತ್ರಜ್ಞಾನ ಬೆಂಗಳೂರು ಸ್ಟಾರ್ಟ್ಅಪ್ ದಿಂದ ಅನಾವರಣ
ಅಪರೂಪದ ಭೂಮಿ-ಮುಕ್ತ ವಿದ್ಯುತ್ ಮೋಟಾರ್ ತಂತ್ರಜ್ಞಾನ ಬೆಂಗಳೂರು ಸ್ಟಾರ್ಟ್ಅಪ್ ದಿಂದ ಅನಾವರಣ
2028–29 ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಅಭಿಯಾನ ಪ್ರಾರಂಭಿಸಿದ ಭಾರತ
2028–29 ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಅಭಿಯಾನ ಪ್ರಾರಂಭಿಸಿದ ಭಾರತ
ಬಿಡದಿಯಲ್ಲಿ ಭೂ ಸಮೀಕ್ಷೆಗೆ ಅಡ್ಡಿಪಡಿಸಿದ ಮಹಿಳಾ ರೈತರು, ಅಧಿಕಾರಿಗಳ ಮೇಲೆ ಪೊರಕೆಗಳಿಂದ ಹಲ್ಲೆ
ಬಿಡದಿಯಲ್ಲಿ ಭೂ ಸಮೀಕ್ಷೆಗೆ ಅಡ್ಡಿಪಡಿಸಿದ ಮಹಿಳಾ ರೈತರು, ಅಧಿಕಾರಿಗಳ ಮೇಲೆ ಪೊರಕೆಗಳಿಂದ ಹಲ್ಲೆ
ಭಾರತವು ತ್ವರಿತ ಅಮೆರಿಕದ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ವರದಿಗಳನ್ನು  ತಳ್ಳಿಹಾಕಿದ ಪಿಯೂಷ್ ಗೋಯಲ್
ಭಾರತವು ತ್ವರಿತ ಅಮೆರಿಕದ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಪಿಯೂಷ್ ಗೋಯಲ್
 ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 27 ಸಾವು, 22 ಗಾಯ
ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 27 ಸಾವು, 22 ಗಾಯ
ಶ್ರೀ ರಾಮ ಮಂದಿರದಲ್ಲಿ ದೇಣಿಗೆ ಅಕ್ರಮ :  ಪ್ರಸ್ತುತ ಎಸ್ಐಟಿ ಮತ್ತು ಪೊಲೀಸ್ ಕ್ರಮದ ಬಗ್ಗೆ ವಿಶ್ವಾಸ - ಆರಎಸ್ಎಸ್
ಶ್ರೀ ರಾಮ ಮಂದಿರದಲ್ಲಿ ದೇಣಿಗೆ ಅಕ್ರಮ : ಪ್ರಸ್ತುತ ಎಸ್ಐಟಿ ಮತ್ತು ಪೊಲೀಸ್ ಕ್ರಮದ ಬಗ್ಗೆ ವಿಶ್ವಾಸ - ಆರಎಸ್ಎಸ್
 ಜಾಗತಿಕ ಇಂಧನ ವ್ಯಾಪಾರದ ಬದಲಾವಣೆ : ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ಭಾರತ
ಜಾಗತಿಕ ಇಂಧನ ವ್ಯಾಪಾರದ ಬದಲಾವಣೆ : ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ಭಾರತ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು

ನ್ಯೂಸ್ MORE NEWS...