ಮುಸ್ಲಿಮರ ಜಾತಿ ಬಗ್ಗೆ ಮಾತು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ಬಾಯಿಗೆ ಬೀಗ ಹಾಕಿಬಿಡುತ್ತದೆ - ಪ್ರಧಾನಿ ಮೋದಿ | JANATA NEWS

ನವದೆಹಲಿ : ಮುಸ್ಲಿಮರ ಜಾತಿ ಬಗ್ಗೆ ಮಾತು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ಬಾಯಿಗೆ ಬೀಗ ಹಾಕಿಬಿಡುತ್ತದೆ. ಆದರೆ ಯಾವಾಗಲಾದರೂ ಹಿಂದು ಸಮಾಜದ ವಿಷಯ ಬಂದರೆ, ಕಾಂಗ್ರೆಸ್ ಅದರ ಚರ್ಚೆಯನ್ನು ಜಾತಿಯಿಂದಲೇ ಶುರು ಮಾಡುತ್ತದೆ. - ಎಂದು ಮುಸ್ಲಿಂ ಸಮುದಾಯದಲ್ಲಿರುವ ಜಾತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಹಿರಂಗವಾಗಿ ಮಾತನಾಡಿದ್ದಾರೆ. ಅವರು ಇಂದು ಮಹಾರಾಷ್ಟ್ರದಲ್ಲಿ ಯೋಜನೆಗಳಿಗೆ ವರ್ಚುಯಲ್ ಮೀಟಿಂಗ್ ಮೂಲಕ ಚಾಲನೆ ನೀಡಿ ಮಾತನಾಡಿದರು.
"ಕಾಂಗ್ರೆಸ್ ನ ಫಾರ್ಮುಲಾ ಸ್ಪಷ್ಟವಾಗಿದೆ, ಮುಸಲ್ಮಾನರಿಗೆ ಹೆದರಿಸುತ್ತಿರುವ, ಅವರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವುದು. ಕಾಂಗ್ರೆಸ್ ನ ಮುಖಂಡರು ಇಲ್ಲಿವರೆಗೂ ಎಂದಿಗೂ ಹೇಳಲಿಲ್ಲ ಮುಸ್ಲಿಮರಲ್ಲಿ ಎಷ್ಟು ಜಾತಿ ಇರುತ್ತದೆ ಎಂದು. ಮುಸ್ಲಿಮರ ಜಾತಿ ಬಗ್ಗೆ ಮಾತು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ಬಾಯಿಗೆ ಬೀಗ ಹಾಕಿಬಿಡುತ್ತದೆ. ಆದರೆ ಯಾವಾಗಲಾದರೂ ಹಿಂದು ಸಮಾಜದ ವಿಷಯ ಬಂದರೆ, ಕಾಂಗ್ರೆಸ್ ಅದರ ಚರ್ಚೆಯನ್ನು ಜಾತಿಯಿಂದಲೇ ಶುರು ಮಾಡುತ್ತದೆ." ಎಂದು ಪ್ರಧಾನಿ ಹೇಳಿದ್ದಾರೆ.
"ಕಾಂಗ್ರೆಸ್ ನ ನೀತಿ ಎಂದರೆ, ಹಿಂದುಗಳ ಒಂದು ಜಾತಿಯನ್ನು ಇನ್ನೊಂದು ಜಾತಿಯೊಂದಿಗೆ ಜಗಳ ಹಚ್ಚುವುದು. ಕಾಂಗ್ರೆಸ್ಸಿಗೆ ಗೊತ್ತು, ಎಷ್ಟು ಹಿಂದುಗಳು ಪಾಲಾಗುತ್ತಾರೋ ಅಷ್ಟು ಅದಕ್ಕೆ ಲಾಭವಾಗುತ್ತದೆ. ಕಾಂಗ್ರೆಸ್ ಹೇಗಾದರೂ ಮಾಡಿ ಹಿಂದೂ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಲು ಬಯಸುತ್ತದೆ. ಏಕೆಂದರೆ, ಅದು ಆ ಬೆಂಕಿ ಮೇಲೆ ತಮ್ಮ ರಾಜಕೀಯ ರೊಟ್ಟಿ ಬೇಸಿಕೊಳ್ಳುವ ಯೋಜನೆ ಹೊಂದಿದೆ. ಇಂದು ಸಮಾಜವನ್ನು ಒಡೆದು ಅದನ್ನು ತಮ್ಮ ರಾಜಕೀಯ ಗೆಲುವಿನ ಫಾರ್ಮುಲಾ ಮಾಡಿಕೊಳ್ಳುವುದೇ ಕಾಂಗ್ರೆಸ್ ನ ರಾಜನೀತಿಯ ಆಧಾರವಾಗಿದೆ." ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ನೀತಿಯ ಬಗ್ಗೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು, "ದೇಶದ ಹುಮ್ಮಸ್ಸು ಏನಿದೆ ಎಂದು ಹರಿಯಾಣ ತಿಳಿಸಿದೆ. ಸತತ ಮೂರನೇ ಬಾರಿ ಆರಿಸಿ ಬರುವುದು ಐತಿಹಾಸಿಕವಾಗಿದೆ", ಎಂದಿದ್ದಾರೆ.
"ಕಾಂಗ್ರೆಸ್ ನ ಪೂರ್ತಿ ಇಕೋ ಸಿಸ್ಟಮ್ ಹಾಗೂ ಅರ್ಬನ್ ನಕ್ಸಲ್ ಪೂರ್ತಿ ತಂಡ ಜನರನ್ನು ಹಾದಿ ತಪ್ಪಿಸಲು ತೊಡಗಿತ್ತು, ಆದರೆ ಕಾಂಗ್ರೆಸ್ ನ ಎಲ್ಲಾ ಷಡ್ಯಂತ್ರಗಳು ಧ್ವಂಸಗೊಂಡಿವೆ."
"ಇವರು ದಲಿತ ಸಮಾಜದಲ್ಲಿ ಸುಳ್ಳು ಹಬ್ಬಿಸಲು ಪ್ರಯತ್ನಿಸಿದರು, ಆದರೆ ದಲಿತ ಸಮಾಜದವರು ಇವರ ದುರುದ್ದೇಶವನ್ನು ಅಳತೆ ಮಾಡಿ ಬಿಟ್ಟರು ತಮ್ಮ ಮೀಸಲಾತಿಯನ್ನು ಕಸಿದುಕೊಂಡು ಕಾಂಗ್ರೆಸ್ ತಮ್ಮ ವೋಟ್ ಬ್ಯಾಂಕ್ ಗೆ ಹಂಚು ತ್ತಾರೆ ಎಂದು ದಲಿತ ಸಮಾಜದವರಿಗೆ ಮನವರಿಕೆಯಾಯಿತು."
"ಇಂದು ಹರಿಯಾಣದ ದಲಿತ ಸಮಾಜ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದೆ. ಹರಿಯಾಣದ ಓಬಿಸಿ ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಅದರೊಂದಿಗೆ ಇದೆ. ಕಾಂಗ್ರೆಸ್ ರೈತರನ್ನು ಪ್ರಚೋದಿಸಿತು, ಆದರೆ ರೈತರಿಗೆ ಗೊತ್ತು ಅವರಿಗೆ ಎಂ.ಎಸ್.ಪಿ ಕೊಟ್ಟವರು ಯಾರು ಎಂದು.
ಹರಿಯಾಣದ ಜನ ತೋರಿಸಿದ್ದಾರೆ, ಈಗ ಅವರು ಕಾಂಗ್ರೆಸ್ ನ ಹಾಗೂ ಅರ್ಬನ್ ನಕ್ಸಲರ ದ್ವೇಷದ ಷಡ್ಯಂತರಕ್ಕೆ ಬಲಿಯಾಗುವುದಿಲ್ಲ ಎಂದು."
"ಕಾಂಗ್ರೆಸ್ ಯಾವಾಗಲೂ ಒಡೆದು ಅಧಿಕಾರ ಪಡೆಯುವ ಫಾರ್ಮುಲಾದ ಮೇಲೆ ನಡೆದಿದೆ. ಕಾಂಗ್ರೆಸ್ ಪದೇಪದೇ ತಾನೊಂದು ಬೇಜವಾಬ್ದಾರಿ ಯುತ ದಳ ಎಂದು ಸಾಬೀತುಪಡಿಸಿದೆ. ಅದು ಈಗಲೂ ದೇಶವನ್ನು ಒಡೆಯಲು ಹೊಸ ಹೊಸ ನಿರೂಪಣೆಯನ್ನು ಸಿದ್ಧಪಡಿಸುತ್ತಿದೆ. ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸಲು ಹೊಸ ಹೊಸ ಫಾರ್ಮುಲಾ ವನ್ನು ತರುತ್ತಿರುತ್ತದೆ." ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.
Speaking at the launch of projects in Maharashtra, which will enhance infrastructure, boost connectivity and empower the youth.https://t.co/ZYiXGdRFDC
— Narendra Modi (@narendramodi) October 9, 2024