ಸಿದ್ದರಾಮಯ್ಯ ಅವರು ಸುನ್ನತ್ ಮಾಡಿಸಿಕೊಳ್ಳುವುದೊಂದು ಬಾಕಿ, ಇನ್ನು ಎಲ್ಲಾ ದೃಷ್ಟಿಯಿಂದ ಮುಸಲ್ಮಾನ್ ಆಗಿಬಿಟ್ಟಿದ್ದಾರೆ - ಪ್ರತಾಪ್ ಸಿಂಹ | JANATA NEWS
ಬೆಂಗಳೂರು : ವಕ್ಫ್ ಬೋರ್ಡ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡುವಿನ ತೀವ್ರ ಜಿದ್ದಾಜಿದ್ದಿನ ವಾಕ್ಸಮರ ತರಾಕಕ್ಕೆ ಏರುತ್ತಿದ್ದು, ಸಿದ್ದರಾಮಯ್ಯ ಸುನ್ನತ್ ಮಾಡಿಸಿಕೊಳ್ಳುವುದು ಮಾತ್ರ ಬಾಕಿ, ಪ್ರತಾಪ್ ಸಿಂಹ ಕೋಮುವಾದಿ ಇನ್ನಿತರ ಹೇಳಿಕಗಳ ಚರ್ಚೆಗಳು ಉಪಚುನಾವಣೆ ಸಂದರ್ಭದಲ್ಲಿ ಹೆಚ್ಚಾಗಿದೆ.
ವಕ್ಫ್ ಬೋರ್ಡ್ ವಿವಾದಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, "ಸಾಬ್ರಿಗೇ ಮಾತ್ರ ಈ ವಕ್ಫ್ ಆಕ್ಟ್ ಯಾಕೆ ಬೇಕು? ಹಿಂದೂಗಳಿಗೆ ಅಥವಾ ಕ್ರಿಸ್ತಿಯನ್ ರಿಗೆ ಆ ರೀತಿ ಆಕ್ಟ್ ಇದೆಯಾ? ಬರಿ ಸಾಬ್ರಿಗೇ ಮಾತ್ರ ಯಾಕೆ ಬೇಕು? ಅವರನ್ನು ಓಲೈಸುವುದಗೋಸ್ಕರ ನೆಹರು ಕಾಲದಿಂದಲೂ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದ್ದಾರೆ. ಅದನ್ನ ಮುಂದುವರೆಸಿಕೊಂಡು ಹೋಗುವ ಪ್ರಯತ್ನವನ್ನು, ನಮ್ಮ ರೈತರಿಗೆ ಹೆದರಿಸುವ ಕೆಲಸವನ್ನು ನಮ್ಮ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಇವತ್ತು ರೈತರಿಗೆ ನೋಟಿಸ್ ಕೊಡಲು ಸಿದ್ದರಾಮಯ್ಯನವರಿಗೆ ನಾವು ಹೇಳಿದ್ದೇವಾ? ಸಾಬ್ರನ್ನು ಓಲೈಸಲು ಇನ್ನೂ ಏನು ಎಷ್ಟು ಸಿದ್ದರಾಮಯ್ಯನವರು ಹೋಗುತ್ತಾರೆ? ಅವರು ಸುನ್ನತ್ ಮಾಡಿಸಿಕೊಳ್ಳುವುದೊಂದು ಬಾಕಿ ಇದೆ, ಹೊರತು ಇನ್ನು ಎಲ್ಲಾ ದೃಷ್ಟಿಯಿಂದ ಕೂಡ ಅವರು ಒಂದು ರೀತಿಯಲ್ಲಿ ಮುಸಲ್ಮಾನ್ ಆಗಿಬಿಟ್ಟಿದ್ದಾರೆ," ಎಂದು ಮಾಜಿ ಸಂಸದ ಆರೋಪಿಸಿದ್ದರು.
"ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಉದ್ದೇಶವಿದ್ದಿದ್ದರೆ, ನೋಟಿಸ್ ವಾಪಸ್ ಪಡೆಯುವುದಕ್ಕೆ ಬದಲಿಗೆ ಗೆಝೆಟ್ ನೋಟಿಫಿಕೇಶನ್ ವಾಪಸ್ ಪಡೆದುಕೊಳ್ಳಬೇಕಾಗಿತ್ತು. ಅಲ್ಲದೇ ಕರ್ನಾಟಕ ಭೂಸುಧಾರಣಾ ಕಾಯ್ದೆಯನ್ನು ಸಹ ವಕ್ಫ್‌ಗೆ ಅನ್ವಯ ಮಾಡಬಹುದಿತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನಿಜಕ್ಕೂ ಈ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದೆ ಎನ್ನುವುದು ನಿಜವೇ ಆದರೆ, ಗೆಝೆಟ್ ನೋಟಿಫಿಕೇಶನ್ ವಾಪಸ್ ಪಡೆಯಲಿ," ಎಂದು ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ ಅವರು, "ಪ್ರತಾಪ್ ಸಿಂಹ ಮಹಾನ್ ಕೋಮುವಾದಿ. ಕೋಮುವಾದಿಗಳಿಂದ ಇದನ್ನು ಬಿಟ್ಟು ಬೇರೆನು ನಿರೀಕ್ಷೆ ಮಾಡಲಿಕ್ಕೆ ಆಗ್ತದೆ. ಇವರಿಗೆ ಸಂವಿಧಾನದ ಬಗ್ಗೆ ಗೌರವ ಎನ್ನುವುದು ಇಲ್ಲ. ಕೋಮುವಾದ ಮಾಡುವುದೇ ಅವರ ಕಸುಬು," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಅವರು, "ಹೌದು ನಾನು ಕೋಮುವಾದಿ, ಭಾರತಖಂಡದಲ್ಲಿ ಹುಟ್ಟಿದ ನಾನು, ಈ ನೆಲಜಲದ ಸಂಸೃತಿ ಅಂದರೆ ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು ನಾನು ಏನು ಬೇಕಾದರೂ ಮಾಡುತ್ತೇನೆ. ನನ್ನ ಕೋಮುವಾದಿ ಎನ್ನುವುದಾದರೆ ಕೋಮುವಾದಿ ಎನ್ನಿ. ನಮ್ಮ ಧರ್ಮ ಈ ಇಸ್ಲಾಂ ಮತ್ತು ಕ್ರಿಶ್ಚಿಯನ್ ತರಹ ಯಾವ ನಾಗರಿಕತೆಯನ್ನೂ ನುಂಗಿ ಹಾಕಿಲ್ಲ. ಅವರು, ಕೋಮುವಾದಿ ಧರ್ಮಗಳು ಅವು," ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.