Mon,Apr13,2026
ಕನ್ನಡ / English

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ ಚಿತ್ರವಿರುವ ರೇಷನ್ ಕಿಟ್ ಗಳು ವಯನಾಡ್ ನಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು | JANATA NEWS

08 Nov 2024

ವಯನಾಡ್ : ಕರ್ನಾಟಕದ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಚಿತ್ರಗಳನ್ನು ಹೊಂದಿದ್ದ ಹಾಗೂ ಹಂಚಿಕೆಗೆ ಸಿದ್ಧವಾಗಿದ್ದ ಆಹಾರ ಪೊಟ್ಟಣ(ರೇಷನ್ ಕಿಟ್)ಗಳನ್ನು ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ವಶಪಡಿಸಿಕೊಂಡಿದ್ದಾರೆ.

ಗುರುವಾರ ಜಿಲ್ಲೆಯ ತೊಲ್ಪೆಟ್ಟಿ ಎಂಬಲ್ಲಿ ಸ್ಥಳೀಯ ಕಾಂಗ್ರೆಸ್‌ ನಾಯಕನ ನಿವಾಸದ ಬಳಿಯ ಹಿಟ್ಟಿನ ಗಿರಣಿಯಿಂದ ಇವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸುಪುತ್ರಿ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್ ನಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುತ್ತಿರುವ ಹಿನ್ನೆಲೆಯಲ್ಲಿ ಹಂಚಲು ತಂದಿದ್ದರು ಎಂದು ಆರೋಪಿಸಲಾದ, ಕರ್ನಾಟಕ ಸರ್ಕಾರದ ಸಿಎಂ ಡಿಸಿಎಂ ಚಿತ್ರಗಳಿರುವ ರೇಷನ್ ಕಿಟ್ ಗಳನ್ನು ನೆರೆರಾಜ್ಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಕ್ಕಿ, ಸಕ್ಕರೆ ಮತ್ತು ಇತರ ದಿನಸಿ ಪದಾರ್ಥಗಳನ್ನು ಹೊಂದಿದ್ದ ರೇಷನ್ ಕಿಟ್(ಆಹಾರ ಪೊಟ್ಟಣ)ಗಳ ಮೇಲೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಜೊತೆಗೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಚಿತ್ರವೂ ರುವುದು ಕಂಡುಬಂದಿರುವುದು, ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪ್ರತಿಪಕ್ಷಗಳ ಟೀಕೆಗಳಿಗೂ ಕಾರಣವಾಗಿದೆ.

ಕೇರಳದ ಆಡಳಿತಾರೂಢ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಲ್‌ಡಿಎಫ್‌), ‘ಆಹಾರ ಪೊಟ್ಟಣಗಳ ಹಂಚುವ ಕಾಂಗ್ರೆಸ್‌ ಯತ್ನ ಚುನಾವಣಾ ತಂತ್ರ’ ಎಂದು ಟೀಕಿಸಿದೆ. ಆದರೆ ಇದಕ್ಕೆ ಕಿಡಿಕಾರಿರುವ ಕಾಂಗ್ರೆಸ್‌, ಇವು ವಯನಾಡು ಭೂಕುಸಿತ ಸಂತ್ರಸ್ತರಿಗೆ ಹಂಚಲು ತಂದಿದ್ದ ಆಹಾರ ಪೊಟ್ಟಣಗಳು ಎಂದು ಸಬೂಬು ನೀಡಿದೆ ಎನ್ನಲಾಗಿದೆ.

English summary :Ration kits with pictures of CM Siddaramaiah, DCM DKesivakumar in Wayanad seized by officials

ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
 ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
ಇರಾನ್‌ನ 10 ಅಂಶಗಳ ಯೋಜನೆಯನ್ನು ಟ್ರಂಪ್ ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿದ್ದಾರೆ - ಶ್ವೇತಭವನ
ಇರಾನ್‌ನ 10 ಅಂಶಗಳ ಯೋಜನೆಯನ್ನು ಟ್ರಂಪ್ ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿದ್ದಾರೆ - ಶ್ವೇತಭವನ
ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶದ ಮೇಲೆ ತಕ್ಷಣವೇ 50% ಸುಂಕ
ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶದ ಮೇಲೆ ತಕ್ಷಣವೇ 50% ಸುಂಕ
ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಬೇಗನೆ ನಿರ್ಗಮಿಸಲು ಬಲವಾಗಿ ಸೂಚಿಸಿದ - ರಾಯಭಾರ ಕಚೇರಿ
ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಬೇಗನೆ ನಿರ್ಗಮಿಸಲು ಬಲವಾಗಿ ಸೂಚಿಸಿದ - ರಾಯಭಾರ ಕಚೇರಿ
ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ದ್ವೇಷ ಭಾಷಣ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲು
ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ದ್ವೇಷ ಭಾಷಣ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲು
ಕಾಂಗ್ರೆಸ್ ನಾಯಕ ಪವನ್ ಖೇರಾ ಬಂಧಿಸಲು ದೆಹಲಿ ನಿವಾಸಕ್ಕೆ ತಲುಪಿದ ಪೊಲೀಸರು
ಕಾಂಗ್ರೆಸ್ ನಾಯಕ ಪವನ್ ಖೇರಾ ಬಂಧಿಸಲು ದೆಹಲಿ ನಿವಾಸಕ್ಕೆ ತಲುಪಿದ ಪೊಲೀಸರು

ನ್ಯೂಸ್ MORE NEWS...