ಸಿನಿಮೀಯ ರೀತಿಯಲ್ಲಿ ಪಾಕ್ ಏಜೆನ್ಸಿ ಕೈಯಿಂದ ಏಳು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ | JANATA NEWS
ದ್ವಾರಕಾ : ಪಾಕಿಸ್ತಾನದ ಸಮುದ್ರಯಾನ ಏಜೆನ್ಸಿಯಿಂದ ಬಂಧನಕ್ಕೊಳಗಾದ ಏಳು ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ಸಿನಿಮೀಯ ರೀತಿಯಲ್ಲಿ ಹೋರಾಡಿ ಪಾಕ್ ಏಜೆನ್ಸಿ ಕೈಯಿಂದ ರಕ್ಷಿಸಿ ವಾಪಸ್ ತಾಯ್ನಾಡಿಗೆ ಕರೆತಂದಿದೆ.
ಅಂತರಾಷ್ಟ್ರೀಯ ನೀರಿನಲ್ಲಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಸಮುದ್ರಯಾನ ಸಂಸ್ಥೆ ಬಂಧಿಸಿತ್ತು, ಎಂದು ಮೂಲಗಳು ಹೇಳಿದೆ.
ತೊಂದರೆಗೊಳಗಾದ ಸಿಗ್ನಲ್‌ನೊಂದಿಗೆ ಐಸಿಜಿಯನ್ನು ತಕ್ಷಣವೇ ಕಾರ್ಯಪ್ರವೃತ್ತಗೊಂಡ, ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ ಹಡಗನ್ನು ತ್ವರಿತವಾಗಿ ರವಾನಿಸಿದರು.
ಅವರು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಮ್ಯಾರಿಟೈಮ್ ಸೆಕ್ಯೂರಿಟಿ ಏಜೆನ್ಸೀ(PMSA) ಹಡಗನ್ನು ಬೆಂಬಿಡದೆ ಹಿಂಬಾಲಿಸಿ, ಅವರ ಮನವೊಲಿಸಲು ಕೊನೆಗೂ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯನ್ನು ನಡೆಸಿದ ಭಾರತೀಯ ಕೋಸ್ಟ್ ಗಾರ್ಡ್ ನ ಐಸಿಜಿಎಸ್ ಅಗ್ರಿಮ್ ತಂಡ, ಸತತವಾಗಿ ಎರಡು ಗಂಟೆಗಳ ಕಾಲ ಪಾಕಿಸ್ತಾನ ಏಜೆನ್ಸಿ ಹಡಗನ್ನು ಹಿಂಬಾಲಿಸುವುದರ ಮೂಲಕ ಭಾರತೀಯ ಮೀನುಗಾರರನ್ನು ರಕ್ಷಿಸುವುದರಲ್ಲಿ ಯಶಸ್ವಿಯಾಗಿದೆ.