Tue,May26,2026
ಕನ್ನಡ / English

ಸಂಭಾಲ್‌ ಕಲ್ಲುತೂರಾಟದಲ್ಲಿ 4 ಸಾವು, 20ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯ :ಶಾಹಿ ಜಾಮಾ ಮಸೀದಿಯಲ್ಲಿ ಹೆಚ್ಚಿನ ಭದ್ರತೆ, ಶಾಲೆ, ಇಂಟರ್ನೆಟ್ ಬಂದ್ | JANATA NEWS

25 Nov 2024

ಸಂಭಾಲ್ : ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಜಾಮಾ ಮಸೀದಿಯ ಭಾನುವಾರ ಸಮೀಕ್ಷೆಯ ಸಂದರ್ಭದಲ್ಲಿ, ಸಮೀಕ್ಷೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ತೀವ್ರಗಾಮಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಹಿಂಸಾತ್ಮಕವಾಗಿ ಘರ್ಷಣೆ ನಡೆಸಿ ಕಲ್ಲುತೂರಾಟ ನಡೆಸಿದರು.

ನಿನ್ನೆ ಮಸೀದಿಯ ಸಮೀಕ್ಷೆ ನಡೆಸಲು ಸಮೀಕ್ಷಾ ತಂಡ ಆಗಮಿಸಿದಾಗ ಕಲ್ಲು ತೂರಾಟ ನಡೆದ ಘಟನೆ ನಡೆದ ಬೆನ್ನಲ್ಲೇ ಸಂಭಾಲ್‌ನ ಶಾಹಿ ಜಾಮಾ ಮಸೀದಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ಜಾಗದಲ್ಲಿ ಹರಿಹರ ದೇವಸ್ಥಾನವಿದೆ ಎಂದು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸರ್ವೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಉತ್ತರ ಪ್ರದೇಶದ ಶಾಹಿ ಜಾಮಾ ಮಸೀದಿಯನ್ನು ತಲುಪಿದ ಸಮೀಕ್ಷಾ ತಂಡದ ಮೇಲೆ ತೀವ್ರಗಾಮಿ ಗುಂಪುಗಳಿಂದ ಭಾರೀ ಕಲ್ಲು ತೂರಾಟ ನಡೆಸಿದ್ದರು.

ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಸುಮಾರು 20 ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ, ಎನ್ನಲಾಗಿದೆ.

ಈ ಹಿಂಸಾಚಾರದ ನಂತರ, ಆಡಳಿತವು 12 ನೇ ತರಗತಿಯವರೆಗಿನ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಇದರೊಂದಿಗೆ, ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ. ದುಷ್ಕರ್ಮಿಗಳನ್ನು ಗುರುತಿಸಲಾಗುತ್ತಿದೆ.

ಸಂಭಾಲ್‌ನಲ್ಲಿ ನ್ಯಾಯಾಲಯ ನೇಮಿಸಿದ ಸರ್ವೇಕ್ಷಣಾ ತಂಡದ ಮೇಲೆ ದಾಳಿಯ ನಂತರ, ಸಾಕ್ಷ್ಯಾಧಾರಗಳ ನಾಶವನ್ನು ಶಂಕಿಸಲಾಗಿದೆ ಎಂದು, ಹಿರಿಯ ಹಿಂದೂ ಪರ ವಕೀಲ ವಿಷ್ಣು ಜೈನ್ ಭಾರತೀಯ ಪುರಾತತ್ವ ಸರ್ವೇಕ್ಷಣೆಯನ್ನು ತಕ್ಷಣವೇ ಸಂಭಾಲ್ ಶ್ರೀ ಹರಿ ಹರ್ ದೇವಸ್ಥಾನದ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ವಿನಂತಿಸಿದರು.

ಭಾನುವಾರ ಬೆಳಿಗ್ಗೆ ಸಮೀಕ್ಷೆ ತಂಡವು ಕೆಲಸವನ್ನು ಪ್ರಾರಂಭಿಸಿದಾಗ ಹೆಚ್ಚಿನ ಸಂಖ್ಯೆಯ ಜನರು ಶಾಹಿ ಜಾಮಾ ಮಸೀದಿಯಲ್ಲಿ ಜಮಾಯಿಸಿ, ಅವರು ಅಲ್ಲಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಹಿಂಸಾಚಾರ ಪ್ರಾರಂಭವಾಯಿತು.

ಮಸೀದಿಯಲ್ಲಿ ಸಾಮಾನ್ಯವಾಗಿ ಮಧ್ಯಾಹ್ನ ನಡೆಯುವ ಪ್ರಾರ್ಥನೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬೆಳಿಗ್ಗೆ ಸಮಯದಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದರು.

English summary :4 dead, more than 20 security staff injured in Sambhal stone pelting: High security at Shahi Jama Masjid, school, internet shutdown

ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್
ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್
ಕೋಮುಗಲಭೆ ಪ್ರಕರಣ ಸೇರಿ ಒಟ್ಟು 52 ಕ್ರಿಮಿನಲ್‌ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ : ಬಿಜೆಪಿ ಆಕ್ರೋಶ
ಕೋಮುಗಲಭೆ ಪ್ರಕರಣ ಸೇರಿ ಒಟ್ಟು 52 ಕ್ರಿಮಿನಲ್‌ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ : ಬಿಜೆಪಿ ಆಕ್ರೋಶ
ಮದರಸಾಗಳಲ್ಲಿಯೂ ವಂದೇ ಮಾತರಂ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ
ಮದರಸಾಗಳಲ್ಲಿಯೂ ವಂದೇ ಮಾತರಂ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ
ಪ್ರಧಾನಿ ವಿದೇಶ ಪ್ರವಾಸದ ಉದ್ದೇಶ ಅರ್ಥಮಾಡಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ರಾಹುಲ್ ಗಾಂಧಿಗೆ ಇಲ್ಲ - ವಿದೇಶಾಂಗ ಸಚಿವ ಎಸ್. ಜೈಶಂಕರ್
ಪ್ರಧಾನಿ ವಿದೇಶ ಪ್ರವಾಸದ ಉದ್ದೇಶ ಅರ್ಥಮಾಡಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ರಾಹುಲ್ ಗಾಂಧಿಗೆ ಇಲ್ಲ - ವಿದೇಶಾಂಗ ಸಚಿವ ಎಸ್. ಜೈಶಂಕರ್
ಪಾಕಿಸ್ತಾನ ವಾಯುಪಡೆಯ ಜೆಎಫ್ -17 ಫೈಟರ್ ಜೆಟ್ ಮತ್ತೆ ಕ್ರ್ಯಾಷ್ ಆಗಿದೆ : ಈಗ ಪಂಜಾಬ್ ಪ್ರಾಂತ್ಯದಲ್ಲಿ
ಪಾಕಿಸ್ತಾನ ವಾಯುಪಡೆಯ ಜೆಎಫ್ -17 ಫೈಟರ್ ಜೆಟ್ ಮತ್ತೆ ಕ್ರ್ಯಾಷ್ ಆಗಿದೆ : ಈಗ ಪಂಜಾಬ್ ಪ್ರಾಂತ್ಯದಲ್ಲಿ
ದ್ವಿಪಕ್ಷೀಯ ಮಾತುಕತೆಗೂ ಮುನ್ನ ಇಟಲಿ ಪ್ರಧಾನಿ ಮೆಲೋನಿ ರನ್ನು ರೋಮ್‌ನಲ್ಲಿ ಭೇಟಿಯಾದ ಪ್ರಧಾನಿ ಮೋದಿ
ದ್ವಿಪಕ್ಷೀಯ ಮಾತುಕತೆಗೂ ಮುನ್ನ ಇಟಲಿ ಪ್ರಧಾನಿ ಮೆಲೋನಿ ರನ್ನು ರೋಮ್‌ನಲ್ಲಿ ಭೇಟಿಯಾದ ಪ್ರಧಾನಿ ಮೋದಿ
ಕೊಡಗಿನ ದುಬಾರೆ ಶಿಬಿರದಲ್ಲಿ ಆನೆ ದಾಳಿಗೆ ಚೆನ್ನೈನ ಪ್ರವಾಸಿಗರೊಬ್ಬರು ಬಲಿ
ಕೊಡಗಿನ ದುಬಾರೆ ಶಿಬಿರದಲ್ಲಿ ಆನೆ ದಾಳಿಗೆ ಚೆನ್ನೈನ ಪ್ರವಾಸಿಗರೊಬ್ಬರು ಬಲಿ
ಪ್ರಧಾನಿ ಮೋದಿಗೆ ಸ್ವೀಡನ್ ನಿಂದ ಪ್ರತಿಷ್ಠಿತ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಪ್ರಶಸ್ತಿ ಪ್ರದಾನ
ಪ್ರಧಾನಿ ಮೋದಿಗೆ ಸ್ವೀಡನ್ ನಿಂದ ಪ್ರತಿಷ್ಠಿತ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಪ್ರಶಸ್ತಿ ಪ್ರದಾನ
ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ನ ಗುರುತಿಸಿದ ಸಿಬಿಐ
ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ನ ಗುರುತಿಸಿದ ಸಿಬಿಐ
ಹಾರ್ಮುಜ್ ಮೂಲಕ ಎಲ್‌ಪಿಜಿ ವಾಹಕಗಳ ಸುರಕ್ಷಿತ ಸಾಗಣೆಯನ್ನು ಭಾರತ ದೃಢಪಡಿಸಿದೆ; ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಹಾರ್ಮುಜ್ ಮೂಲಕ ಎಲ್‌ಪಿಜಿ ವಾಹಕಗಳ ಸುರಕ್ಷಿತ ಸಾಗಣೆಯನ್ನು ಭಾರತ ದೃಢಪಡಿಸಿದೆ; ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಐಯುಎಂಎಲ್ ಬೆಂಬಲ : ಕೆ.ಸಿ. ವೇಣುಗೋಪಾಲ್ ಬದಲು ವಿ.ಡಿ. ಸತೀಶನ್ ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ
ಐಯುಎಂಎಲ್ ಬೆಂಬಲ : ಕೆ.ಸಿ. ವೇಣುಗೋಪಾಲ್ ಬದಲು ವಿ.ಡಿ. ಸತೀಶನ್ ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ
 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ(ಎಸ್.ಐ.ಆರ್) ಚುನಾವಣಾ ಆಯೋಗ ಆದೇಶ
16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ(ಎಸ್.ಐ.ಆರ್) ಚುನಾವಣಾ ಆಯೋಗ ಆದೇಶ

ನ್ಯೂಸ್ MORE NEWS...