ಉದ್ಧಟತನ ತೋರಿ ಹೈಕೋರ್ಟ್ ಮೆಟ್ಟಲೇದ್ದ ತಮಿಳು ನಟ ಕಮಲ್ ಹಾಸನ್ ಗೆ ಹೈಕೋರ್ಟ್ ನಲ್ಲಿ ಭಾರಿ ಮುಖಭಂಗ | JANATA NEWS
ಬೆಂಗಳೂರು : ಕನ್ನಡ ಭಾಷೆಯ ಕುರಿತು ಆಧಾರರಹಿತ ಹೇಳಿಕೆ ನೀಡಿಯು ಕ್ಷಮೆ ಕೇಳಲಾರೆ ಎಂದು ಉದ್ಧಟತನ ತೋರಿ ಹೈಕೋರ್ಟ್ ಮೆಟ್ಟಲೇರಿರುವ ತಮಿಳು ನಟ ಕಮಲ್ ಹಾಸನ್ ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಸಾಕಷ್ಟು ಮುಜುಗರ ಎದುರಾಗಿದ್ದು, ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಕನ್ನಡ ಭಾಷೆ ತಮಿಳು ನಿಂದ ಹುಟ್ಟಿದೆ ಎನ್ನಲು, ಯಾವ ಭಾಷೆ ಕೂಡ ಇನ್ನೊಂದು ಭಾಷೆಯಿಂದ ಹುಟ್ಟಿರಲ್ಲ. ಯಾವ ಆಧಾರದ ಮೇಲೆ ಈ ಹೇಳಿಕೆ ಅವರು ಕೊಟ್ಟಿದ್ದಾರೆ? ಅವರು ಭಾಷಾ ತಜ್ಞರೇ? ಅಥವಾ ಇತಿಹಾಸಗಾರರೇ? ಎಂದು ಹೈಕೋರ್ಟ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಕಮಲ್ ಹಾಸನ್ ಮಾತನಾಡುವ ವಿಡಿಯೋ ವೀಕ್ಷಿಸಿದ ನ್ಯಾಯಾಧೀಶರು ಈ ಕೂಡಲೇ ಕನ್ನಡಿಗರಲ್ಲಿ ಕ್ಷಮೆ ಕೇಳುವಂತೆ ತಾಕಿತು ಮಾಡಿದ್ದಾರೆ. ನೀವು ಸೃಷ್ಟಿಸಿದ ಪರಿಸ್ಥಿತಿಯಿಂದ ಈಗ ನಿಮ್ಮ ಸಿನಿಮಾವನ್ನು ರಕ್ಷಿಸಲು ಪೊಲೀಸ್ ಭದ್ರತೆ ಕೇಳುತ್ತಿದ್ದೀರಲ್ಲ. ಅದರ ಬದಲು, ತಪ್ಪಾಗಿ ನಡೆದ ಒಂದು ಮಾತಿಗೆ ಕ್ಷಮೆ ಕೇಳಿ ಅಲ್ಲೇ ಇದನ್ನ ಉಪಶಮನಗೊಳಿಸಬಹುದಾಗಿತ್ತು ಎಂದು ಕೋರ್ಟ್ ಹೇಳಿದೆ.
ನಿಮ್ಮ ಹೇಳಿಕೆಯೇ ಇಂದ ಶಿವರಾಜಕುಮಾರ್ ಸಮಸ್ಯೆ ಅನುಭವಿಸುವಂಥಾಗಿದೆ. ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಬಿಡುಗಡೆ ಮಾಡಲು ಬಯಸುತ್ತೀರಾ? 300 ಕೋಟಿ ರೂಪಾಯಿಯ ಸಿನಿಮಾ ಎನ್ನುತ್ತಿದ್ದೀರಾ, ಕ್ಷಮೆಯಾಚನೆ ಮಾಡಿ ಆಗ ಸಮಸ್ಯೆ ಇರುವುದಿಲ್ಲ. ಕ್ಷಮೆಯಾಚನೆ ಮಾಡಲಾರೆ ಎಂದಾದರೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಏಕೆ ಬೇಕು? ಅಂದು ಉಚ್ಚ ನ್ಯಾಯಾಲಯ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
🚨Listen to HC of Karnataka giving 90mm rod treatment to Kamal Haasan’s arrogance.
— Shilpa (@shilpa_cn) June 3, 2025
This is pure gold! 🔥#KamalHaasan #ThugLife pic.twitter.com/wDGPBejaeA