Fri,Jul10,2026
ಕನ್ನಡ / English

ನಿಮ್ಮ ವಿದ್ಯೆಗೆ ಮೀರಿ ನಿಮಗೆ ಖಾತೆ ಕೊಟ್ಟಿದ್ದಾರೆ, ಖಾತೆಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಿ - ಸಚಿವ ಖರ್ಗೆ ಗೆ ಮಾಜಿ ಸಂಸದ ಸಿಂಹ ಕಿವಿಮಾತು | JANATA NEWS

07 Jul 2025

ಬೆಂಗಳೂರು : ಆರ್ಎಸ್ಎಸ್ ಬ್ಯಾನ್ ಮಾಡುವ ಬಗ್ಗೆ ಮಾತನಾಡುವ ಮೂಲಕ ನಿರಂತರ ಟೀಕೆಗೆ ಗುರಿಯಾಗಿರುವ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ ಸಿಂಹ ಅವರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಮದ್ಯಮದೊಂದಿಗೆ ಈ ಕುರಿತು ಮಾತನಾಡಿರುವ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

"2.5ವರ್ಷ ಆಯ್ತು ಈ ಸರ್ಕಾರ ಅಧಿಕಾರಕ್ಕೆ ಬಂದು... ಪ್ರಿಯಾಂಕಾ ಖರ್ಗೆ ಅವರು ತಮ್ಮ ಇಲಾಖೆ ಬಗ್ಗೆ ಮಾತಾಡಿದ್ದೇ ಇಲ್ಲ, ತಾವು ಮಾಡಿದಂತಹ ಸಾಧನೆ ಬಗ್ಗೆ ಹೇಳಿಕೊಂಡಿದ್ದೇ ಇಲ್ಲ. ವರ್ಷದಲ್ಲಿ 100 ಸಾರಿ ಪತ್ರಿಕಾಗೋಷ್ಠಿ ನಡೆಸಿದರೂ ಬಿಜೆಪಿ ಯನ್ನು ಬೈಯ್ಯೋವಂತದ್ದು.. ಆರ್ಎಸ್ಎಸ್ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸೊವಂತದ್ದು. ಇದು ಬಿಟ್ರೆ ಏನು ಕೂಡ ಅವರ ಬಾಯಿಂದ ಹೊರಗೆ ಬರೆದಿಲ್ಲ. .. ಸದನದ ಒಳಗೆ ಫೈಲ್ಸ ಪ್ರಿಯಾಂಕಾ, ಸದನದ ಹೊರಗೆ ಕೂಗುಮಾರಿ ಪ್ರಿಯಾಂಕಾ ಆಗಿ ಬಿಡ್ತೀರಿ." ಎಂದು ಹೀಯಾಳಿಸಿದ್ದಾರೆ.

"ಎನ್ ಸರ್ ನೀವು ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀರಾ? ನೀವು ಯಾರ ಮಗಳ ಹೆಸರು ಇಟ್ಕೊಂಡಿದ್ದರಲ್ಲ ಆ ರಾಜೀವ್ ಗಾಂಧಿ ಕೂಡ ದೇಶವನ್ನು ಅಳಿದರೂ ಅವರ ಕೈಯಲ್ಲೇ ಆಗಿಲ್ಲ. ರಾಜೀವ್ ಗಾಂಧಿಯನ್ನು ಹೆತ್ತ ಅಂತಹ ಇಂದಿರಾ ಗಾಂಧಿ 16 ವರ್ಷ ದೇಶ ಅಳಿದರೂ ಅವರು ಬ್ಯಾನ್ ಮಾಡಿದ್ರು, ಆದರೆ ಬಳಿಕ ಅಧಿಕಾರ ಕಳೆದುಕೊಂಡರು. ಆರ್ಎಸ್ಎಸ್ ಮಾತ್ರ ತನ್ನ ಸಮಾಜ ಸೇವೆ ಮುಂಡುವರೆಸುತ್ತಾ ಹೋಯ್ತು. ಇಂದಿರಾ ಗಾಂಧಿಗೆ ಜನ್ಮ ಕೊಟ್ಟಂತಹ ನೆಹರೂ ಕೂಡ 17 ವರ್ಷ ಅಳಿದರೂ, ಬ್ಯಾನ್ ಮಾಡಿ ನಂತರ ಬ್ಯಾನ್ ವಾಪಸ್ ತೆಗೆದುಕೊಳ್ಳುವ ಅನಿವಾರ್ಯತೆ ಬಂತು... 1962ರ ಚೀನಾ ಯುದ್ಧದಲ್ಲಿ ಆರ್ಎಸ್ಎಸ್ ಸೇವೆಯನ್ನು ಶ್ಲಾಘಿನೆ ಮಾಡುವಂತ ಅನಿವಾರ್ಯತೆ ಬಂತು. ನೆಹರೂ ಅವರ ಮರಿಮಗಳ ಹೆಸರು ಇಟ್ಕೊಂಡು ಏನು ಮಾಡಲು ಸಾಧ್ಯವಿಲ್ಲ. ಹೆಸರಿನಲ್ಲೂ ಸ್ವಂತಂತೆ ಇಲ್ಲ. ಖರ್ಗೆ ಕೂಡ ನಿಮ್ಮ ತಂದೆ ಇಂದ ಬಂದ ಬಳುವಳಿ... ವ್ಯಕ್ತಿತ್ವದಲ್ಲೂ ಸ್ವಂತತೆ ಇಲ್ಲ..." ಎಂದು ವಾಗ್ದಾಳಿ ನಡೆಸಿದ್ದಾರೆ.

ಐಟಿಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ. ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಏಕೆ. ನಿಮ್ಮ ಅಪ್ಪ ದೊಡ್ಡ ದೊಡ್ಡ ನಾಯಕರನ್ನ ಬಲಿ ಕೊಟ್ಟು, ಅವರ ಮುಖ್ಯಮಂತ್ರಿ ಆಸೆಯನ್ನು ಬಳಿಕೊಟ್ಟು ನಿಮ್ಮನ್ನ ಮಂತ್ರಿ ಮಾಡಿದ್ದಾರೆ... ಇದೇ ರೀತಿ ಕೂಗು ಮಾರಿ ರೀತಿ ಮಾತನಾಡುತ್ತಿದ್ರೆ, ನಿಮ್ಮನ್ನ ಯಾರೂ ಮುಖ್ಯಮಂತ್ರಿ ಮಾಡಲ್ಲ. ನಿಮ್ಮಪ್ಪನ್ನೇ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಲಿಲ್ಲ. ಇನ್ನೂ ನಿಮ್ಮನ್ನು ಮಾಡುತ್ತಾ? ಇದನ್ನೆಲ್ಲಾ ಬಿಟ್ಟುಬಿಡಿ ಸರ್. ಆರ್‌ಎಸ್‌ಎಸ್ ಅನ್ನು ಬೈದ್ರೆ ಅಧಿಕಾರ ಸಿಗಲ್ಲ, ಎಂದು ಟೀಕಿಸಿದ್ದಾರೆ.

"ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಮಾತಾಡಿ. ನಿಮ್ಮ ವಿದ್ಯೆಗೆ ಮೀರಿ ನಿಮಗೆ ಈ ಖಾತೆ ಕೊಟ್ಟಿದ್ದಾರೆ. ಆ ಖಾತೆಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಿ ಒಳ್ಳೆ ಕೆಲಸ ಮಾಡಿ ಸರ್", ಎಂದು ಕಿವಿಮಾತು ಹೇಳಿದ್ದಾರೆ.

"ಸಿದ್ದರಾಮಯ್ಯ ನವರು ಯುವನಿದಿ ಕೊಡುತ್ತೇನೆ ಎಂದು ಬೊಬ್ಬೆ ಹೊಡೆದು ಎರಡೂವರೆ ವರ್ಷ ಆಯ್ತು ಇಲ್ಲಿವರೆಗೂ ಪ್ರಾರಂಭನೆ ಮಾಡಿಲ್ಲ... ಹೀಗಿರುವಾಗ ಇಲಾಖೆ ಇಂದ ಏನಾದರೂ ಸಹಕಾರ ಮಾಡುವ ಬಗ್ಗೆ ಯೋಚನೆ ಮಾಡಿ ಸರ್" ಎಂದು ಹೇಳಿದ್ದಾರೆ.

English summary :You have been given account beyond your education, spend some time on the account - Former MP Singh advises Minister Kharge.

ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು
8 ಶಂಕಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಬಂಧಿಸಿದ ಗುಜರಾತ್ ಎಟಿಎಸ್
8 ಶಂಕಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಬಂಧಿಸಿದ ಗುಜರಾತ್ ಎಟಿಎಸ್
 ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಚೀನಾ ವಿರುದ್ಧ ಪ್ರತಿಭಟನೆ ನಡೆಸಿ ಟಿಬೆಟಿಯನ್ ಕಾರ್ಯಕರ್ತ ಆತ್ಮಹತ್ಯೆ
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಚೀನಾ ವಿರುದ್ಧ ಪ್ರತಿಭಟನೆ ನಡೆಸಿ ಟಿಬೆಟಿಯನ್ ಕಾರ್ಯಕರ್ತ ಆತ್ಮಹತ್ಯೆ
52 ಕ್ರಿಮಿನಲ್ ಪ್ರಕರಣ ವಜಾ ಮಾಡುವ ರಾಜ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆ
52 ಕ್ರಿಮಿನಲ್ ಪ್ರಕರಣ ವಜಾ ಮಾಡುವ ರಾಜ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆ
ರಾಮನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪ
ರಾಮನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪ
ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದನ್ನು ಅಪಹಾಸ್ಯ ಮಾಡುವ ಪೋಸ್ಟರ್‌ ಹಾಕಿದ  ಬಿಜೆಪಿ
ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದನ್ನು ಅಪಹಾಸ್ಯ ಮಾಡುವ ಪೋಸ್ಟರ್‌ ಹಾಕಿದ ಬಿಜೆಪಿ
ವಾಟ್ಸಾಪ್ ಯೂಸರ್-ನೇಮ್ ಬಿಡುಗಡೆ ತಾತ್ಕಾಲಿಕ ತಡೆ ನೀಡಿ ಕೇಂದ್ರ ಸರ್ಕಾರ ನಿರ್ದೇಶನ
ವಾಟ್ಸಾಪ್ ಯೂಸರ್-ನೇಮ್ ಬಿಡುಗಡೆ ತಾತ್ಕಾಲಿಕ ತಡೆ ನೀಡಿ ಕೇಂದ್ರ ಸರ್ಕಾರ ನಿರ್ದೇಶನ
 ಟೆಹ್ರಾನ್‌ನ ಹಲವಾರು ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಿದ ಅಮೆರಿಕ-ಇಸ್ರೇಲ್; ಭಾರೀ ಸಾವುನೋವುಗಳನ್ನು ವರದಿ
ಟೆಹ್ರಾನ್‌ನ ಹಲವಾರು ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಿದ ಅಮೆರಿಕ-ಇಸ್ರೇಲ್; ಭಾರೀ ಸಾವುನೋವುಗಳನ್ನು ವರದಿ

ನ್ಯೂಸ್ MORE NEWS...