ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ ದಂಕರ್ | JANATA NEWS
ನವದೆಹಲಿ : ಉಪರಾಷ್ಟ್ರಪತಿ ಜಗದೀಪ ದಂಕರ ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.
ಇಂದು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ ತಮ್ಮ ಆರೋಗ್ಯದ ಕಾರಣವನ್ನು ನೀಡಿರುವ ಜಗದೀಪ ದಂಕರ್ ಅವರು ಮನವಿ ಮಾಡಿದ್ದಾರೆ.
ಆರ್ಟಿಕಲ್ 67 ಎ ಉಲ್ಲೇಖಿಸಿರುವ ದಂಕರ್ ಅವರು ತಕ್ಷಣಕ್ಕೆ ಜಾರಿ ಬರುವಂತೆ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ.
ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ ಧಂಕರ್ ಅವರು ಪ್ರಧಾನಮಂತ್ರಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಹಡತಾಗಿ ಕಂಡುಬಂದಿರುವ ಈ ಬೆಳವಣಿಗೆಯಿಂದ ಕೇಂದ್ರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ
English summary :Vice president Jagdeep Dhankarr resigned from his post