Mon,Dec15,2025
ಕನ್ನಡ / English

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ನೀಡಿದೆ, ಬೇರೆ ರಾಜ್ಯಗಳಲ್ಲಿ ನೋಟಿಸ್ ನೀಡಿಲ್ಲ - ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ | JANATA NEWS

23 Jul 2025

ನವದೆಹಲಿ : ಬೇರೆ ಯಾವುದೇ ರಾಜ್ಯಗಳಲ್ಲಿ ನೀಡದ ನೋಟಿಸ್, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ...ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ, ಎಂದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ನೇರವಾಗಿ ತಳ್ಳಿಹಾಕಿರುವ ಜೋಶಿ ಅವರು, "ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿ ಎಸ್ ಟಿ ನೋಟಿಸ್ ಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳುತ್ತಿರೋದು ನಿಜಕ್ಕೂ ಹಾಸ್ಯಾಸ್ಪದ."

"GST ನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ #CGST ಮತ್ತು ರಾಜ್ಯ ಸರ್ಕಾರಗಳ‌ ಅಡಿಯಲ್ಲಿ #SGST ಎರಡು ಭಾಗಗಳಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ."

"ಜಿ ಎಸ್ ಟಿ‌ ಕೌನ್ಸಿಲ್ ನಲ್ಲಿ ಯಾವುದೇ ತೀರ್ಮಾನ‌ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3 ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ‌ಸರ್ಕಾರಗಳ ನಿರ್ಣಯವೇ ಅಂತಿಮವಾಗಿರಲಿದೆ."

"ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ‌, ಅವರಿಗೆ ತೊಂದರೆ ಕೊಡುತ್ತಿದ್ದಾರೆ."

"ಬೇರೆ ಯಾವುದೇ ರಾಜ್ಯಗಳಲ್ಲಿ ನೀಡದ ನೋಟಿಸ್, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ."

"ಯುಪಿಐ ಟ್ರಾನ್ಸಾಕ್ಷನ್ ಇದೀಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಹದಗೆಡಿಸುವ ದುಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿರುವುದು ನಿಜಕ್ಕೂ ದುರಂತ.", ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

English summary :Congress govt of Karnataka has issued GST notices to small traders, notices not issued in other states - Union Min. Prahlad Joshi.

 ಆಸ್ಟ್ರೇಲಿಯಾ ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕ ದಾಳಿಗೆ ಕನಿಷ್ಟ 12 ಸಾವು
ಆಸ್ಟ್ರೇಲಿಯಾ ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕ ದಾಳಿಗೆ ಕನಿಷ್ಟ 12 ಸಾವು
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
 ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
 ಎಸ್ಐಆರ್, ಸಂಚಾರ ಸಾಥಿ -  ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಎಸ್ಐಆರ್, ಸಂಚಾರ ಸಾಥಿ - ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು

ನ್ಯೂಸ್ MORE NEWS...