Mon,Dec15,2025
ಕನ್ನಡ / English

ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನೆಲ್ಲಾ ಹೇಳುತ್ತಿರಲಿಲ್ಲ - ರಾಹುಲ್ ಗಾಂಧಿ ದೇಶಭಕ್ತಿಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್ | JANATA NEWS

04 Aug 2025

ನವದೆಹಲಿ : "ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನೆಲ್ಲಾ ಹೇಳುತ್ತಿರಲಿಲ್ಲ" ಎಂದು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಅವರ ದೇಶಭಕ್ತಿಯನ್ನು ಪ್ರಶ್ನಿಸಿತು.

ಡಿಸೆಂಬರ್ 2022 ರಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಭಾರತೀಯ ಸೇನೆಯ ಬಗ್ಗೆ ಮಾಡಿದ ವಿವಾದಾತ್ಮಕ ಹೇಳಿಕೆಗಳಿಂದ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ತಡೆ ನೀಡುವ ಮೊದಲು ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.

ಚೀನಾದ ಪಡೆಗಳು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೈನಿಕರನ್ನು "ಥಳಿಸುತ್ತಿವೆ" ಮತ್ತು 2,000 ಚದರ ಕಿ.ಮೀ. ಭಾರತೀಯ ಪ್ರದೇಶವನ್ನು ಆಕ್ರಮಿಸಿಕೊಂಡಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಈ ಹೇಳಿಕೆಗಳು ಸಶಸ್ತ್ರ ಪಡೆಗಳ ಮಾನಹಾನಿ ಮತ್ತು ಸ್ಥೈರ್ಯ ಕುಗ್ಗಿಸಿವೆ ಎಂದು ಆರೋಪಿಸಿ, ನಿವೃತ್ತ ಬಿಆರ್‌ಒ ಅಧಿಕಾರಿ ಉದಯ್ ಶಂಕರ್ ಶ್ರೀವಾಸ್ತವ ಅವರು ದೂರು ದಾಖಲಿಸಿದ್ದರು.

ರಾಹುಲ್ ಗಾಂಧಿ ಪರ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, ವಿರೋಧ ಪಕ್ಷದ ನಾಯಕರೊಬ್ಬರು ಸಮಸ್ಯೆಗಳನ್ನು ಎತ್ತಲು ಸಾಧ್ಯವಾಗದಿದ್ದರೆ, ಅದು ದುರದೃಷ್ಟಕರ ಪರಿಸ್ಥಿತಿ ಎಂದು ಆರಂಭದಲ್ಲಿಯೇ ವಾದಿಸಿದರು. "ಪತ್ರಿಕೆಗಳಲ್ಲಿ ಪ್ರಕಟವಾಗುವ ಈ ವಿಷಯಗಳನ್ನು ಅವರು ಹೇಳಲು ಸಾಧ್ಯವಾಗದಿದ್ದರೆ, ಅವರು ವಿರೋಧ ಪಕ್ಷದ ನಾಯಕರಾಗಲು ಸಾಧ್ಯವಿಲ್ಲ" ಎಂದು ಸಿಂಘ್ವಿ ಹೇಳಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ. ಮಸಿಹ್ ಅವರು ಗಾಂಧಿಯವರ ದೇಶಭಕ್ತಿಯನ್ನು ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಒತ್ತಿ ಹೇಳಿ ಸಂಸತ್ತಿನ ಬದಲು ಸಾಮಾಜಿಕ ಮಾಧ್ಯಮದಲ್ಲಿ ಏಕೆ ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ನ್ಯಾಯಪೀಠ ಕೇಳಿತು.

"ನೀವು ಏನು ಹೇಳಬೇಕೋ ಅದನ್ನು ಸಂಸತ್ತಿನಲ್ಲಿ ಏಕೆ ಹೇಳಬಾರದು? ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ನೀವು ಇದನ್ನು ಏಕೆ ಹೇಳಬೇಕು?" ಎಂದು ನ್ಯಾಯಮೂರ್ತಿ ದತ್ತ ಪ್ರಶ್ನಿಸಿದರು.

ನ್ಯಾಯಾಲಯವು ಗಾಂಧಿಯವರ ಹೇಳಿಕೆಗಳ ವಿಶ್ವಾಸಾರ್ಹತೆಯನ್ನು ಸಹ ಪ್ರಶ್ನಿಸಿತು.

ಗಾಂಧಿಯವರ ಹೇಳಿಕೆಗಳಿಗೆ ಮತ್ತಷ್ಟು ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ದತ್ತ, "ಡಾ. ಸಿಂಘ್ವಿ, 2000 ಚದರ ಕಿಲೋಮೀಟರ್ ಭಾರತೀಯ ಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ ಎಂದು ನಿಮಗೆ ಹೇಗೆ ಗೊತ್ತು? ನೀವು ಅಲ್ಲಿದ್ದೀರಾ? ನಿಮ್ಮ ಬಳಿ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವಿದೆಯೇ? ಇಲ್ಲದೆ ನೀವು ಈ ಹೇಳಿಕೆಗಳನ್ನು ಏಕೆ ಮಾಡುತ್ತೀರಿ... ನೀವು ನಿಜವಾದ ಭಾರತೀಯರಾಗಿದ್ದರೆ, ನೀವು ಇದನ್ನೆಲ್ಲಾ ಹೇಳುತ್ತಿರಲಿಲ್ಲ."

ಸುಪ್ರೀಂ ಕೋರ್ಟ್ ವಿಚಾರಣೆಯನ್ನು ವಿರಾಮಗೊಳಿಸಿದೆ, ಆದರೆ ಪ್ರಕರಣವನ್ನು ರದ್ದುಗೊಳಿಸಿಲ್ಲ. ಈ ಹಿಂದೆ ರಾಹುಲ್ ಗಾಂಧಿಯವರು ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು, ಅದು ಅವರ ಮನವಿಯನ್ನು, ವಾಕ್ ಸ್ವಾತಂತ್ರ್ಯವು ಸೈನ್ಯವನ್ನು ದೂಷಿಸುವವರೆಗೆ ವಿಸ್ತರಿಸುವುದಿಲ್ಲ, ಎಂದು ಹೇಳಿ ತಿರಸ್ಕರಿಸಿತು.

English summary :If you were a true Indian, you would not say all this - Supreme Court questioning patriotism of Rahul Gandhi

 ಆಸ್ಟ್ರೇಲಿಯಾ ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕ ದಾಳಿಗೆ ಕನಿಷ್ಟ 12 ಸಾವು
ಆಸ್ಟ್ರೇಲಿಯಾ ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕ ದಾಳಿಗೆ ಕನಿಷ್ಟ 12 ಸಾವು
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
 ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
 ಎಸ್ಐಆರ್, ಸಂಚಾರ ಸಾಥಿ -  ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಎಸ್ಐಆರ್, ಸಂಚಾರ ಸಾಥಿ - ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು

ನ್ಯೂಸ್ MORE NEWS...