Wed,Jul15,2026
ಕನ್ನಡ / English

ಕಾಂಗ್ರೆಸ್ ಪಕ್ಷದ ಮತಗಳ್ಳತನ ಬಯಲು ಮಾಡಿದ ಸಿದ್ದರಾಮಯ್ಯ - ಆರ್ ಅಶೋಕ | JANATA NEWS

29 Aug 2025

ಬೆಂಗಳೂರು : ಕಾಂಗ್ರೆಸ್ ಪಕ್ಷದ "ಮತಗಳ್ಳತನ"ವನ್ನ ಸ್ವತಃ ಕಾಂಗ್ರೆಸ್ ಪಕ್ಷದ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರೇ ಬಯಲು ಮಾಡಿದ್ದಾರೆ, ಎಂದು ಬಿಜೆಪಿ ಮುಖಂಡ ಹಾಗೂ ಪ್ರೇತಿಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.

"ಕಾಂಗ್ರೆಸ್ ಪಕ್ಷದ "ಮತಗಳ್ಳತನ"ವನ್ನ ಬಯಲು ಮಾಡಿದ ಸಿದ್ದರಾಮಯ್ಯ! 1991ರಲ್ಲಿ ಮಾನ್ಯ ಸಿದ್ದರಾಮಯ್ಯನವರು ಲೋಕಸಭೆಗೆ ಸ್ಪರ್ಧಿಸಿದ್ದು ✅ಎಲ್ಲಿಂದ? - ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ✅ಯಾವ ಪಕ್ಷದಿಂದ? - ಜನತಾದಳ ಪಕ್ಷದಿಂದ ✅ಸಿದ್ದರಾಮಯ್ಯವರವನ್ನ ಮೋಸದಿಂದ ಸೋಲಿಸಿದ್ದು ಯಾರು? - ಕಾಂಗ್ರೆಸ್ ಪಕ್ಷ", ಎಂದು ಅಶೋಕ ಸಿದ್ದರಾಮಯ್ಯ ಅವರ ಚುನಾವಣಾ ಮೋಸದ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಯೊಂದಿಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಮತಗಳ್ಳತನ"ದ ಎಂಬ ಕಪೋಲಕಲ್ಪಿತ ನಾಟಕದ ಬಗ್ಗೆ ಸತ್ಯ ನುಡಿದಿದ್ದ ಮಾಜಿ ಸಚಿವ ಕೆಎನ್ ರಾಜಣ್ಣ ಅವರನ್ನು ಅತ್ಯಂತ ಅಗೌರವವಾಗಿ ಸಂಪುಟದಿಂದ ವಜಾ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ, ಈಗ ಕಾಂಗ್ರೆಸ್ ಪಕ್ಷದ ಮೋಸವನ್ನು ಬಯಲು ಮಾಡಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ, ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವ ಧೈರ್ಯ ಇದೆಯಾ?," ಎಂದು ಸವಾಲು ಹಾಕಿದ್ದಾರೆ ಬಿಜೆಪಿ ಮುಖಂಡ.

"ಅಥವಾ ಕಾಂಗ್ರೆಸ್ ಪಕ್ಷದ ಪ್ರತಾಪ, ಶಿಸ್ತು ಕ್ರಮ ಏನಿದ್ದರೂ ದಲಿತ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಸೀಮಿತನಾ?" ಎಂದು ಖಾರವಾಗಿ ಅಶೋಕ ಪ್ರಶ್ನಿಸಿದ್ದಾರೆ.

"2018ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಮತ ಖರೀದಿ ಮೂಲಕ ಗೆದ್ದರು ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಈಗಾಗಲೇ ಬಯಲು ಮಾಡಿದ್ದಾರೆ. ಪಂಚಾಯಿತಿ ಇಂದ ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಇದ್ದ ಕಾಲದಲ್ಲಿ, "ಆಗೆಲ್ಲಾ ಇವಿಎಂ ಇರಲಿಲ್ಲ, ಒಬ್ರೋ ಇಬ್ರೋ ಕೂತ್ಕೊಂಡು ಒತ್ತು ಬುಡ್ರೋ ಅನ್ನೋರು" ಎಂದು ಕಾಂಗ್ರೆಸ್ ಪಕ್ಷ 60 ವರ್ಷ ಹೇಗೆ ಚುನಾವಣೆ ಗೆಲ್ಲುತ್ತಿತ್ತು ಎನ್ನುವುದನ್ನ ಗೃಹ ಸಚಿವ ಡಾ.ಪರಮೇಶ್ವರ ಅವರು ಲೀಲಾಜಾಲವಾಗಿ ವಿವರಿಸಿದ್ದಾರೆ."

"ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮದ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ನೆಹರೂ-ಗಾಂಧಿ ಕುಟುಂಬ. ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡಿದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ.", ಎಂದು ಅಶೋಕ ಲೇವಡಿ ಮಾಡಿದ್ದಾರೆ.

English summary :Siddaramaiah Exposes Congress Partys Vote Theft - R Ashok

ಅಪರೂಪದ ಭೂಮಿ-ಮುಕ್ತ ವಿದ್ಯುತ್ ಮೋಟಾರ್ ತಂತ್ರಜ್ಞಾನ ಬೆಂಗಳೂರು ಸ್ಟಾರ್ಟ್ಅಪ್ ದಿಂದ ಅನಾವರಣ
ಅಪರೂಪದ ಭೂಮಿ-ಮುಕ್ತ ವಿದ್ಯುತ್ ಮೋಟಾರ್ ತಂತ್ರಜ್ಞಾನ ಬೆಂಗಳೂರು ಸ್ಟಾರ್ಟ್ಅಪ್ ದಿಂದ ಅನಾವರಣ
2028–29 ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಅಭಿಯಾನ ಪ್ರಾರಂಭಿಸಿದ ಭಾರತ
2028–29 ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಅಭಿಯಾನ ಪ್ರಾರಂಭಿಸಿದ ಭಾರತ
ಬಿಡದಿಯಲ್ಲಿ ಭೂ ಸಮೀಕ್ಷೆಗೆ ಅಡ್ಡಿಪಡಿಸಿದ ಮಹಿಳಾ ರೈತರು, ಅಧಿಕಾರಿಗಳ ಮೇಲೆ ಪೊರಕೆಗಳಿಂದ ಹಲ್ಲೆ
ಬಿಡದಿಯಲ್ಲಿ ಭೂ ಸಮೀಕ್ಷೆಗೆ ಅಡ್ಡಿಪಡಿಸಿದ ಮಹಿಳಾ ರೈತರು, ಅಧಿಕಾರಿಗಳ ಮೇಲೆ ಪೊರಕೆಗಳಿಂದ ಹಲ್ಲೆ
ಭಾರತವು ತ್ವರಿತ ಅಮೆರಿಕದ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ವರದಿಗಳನ್ನು  ತಳ್ಳಿಹಾಕಿದ ಪಿಯೂಷ್ ಗೋಯಲ್
ಭಾರತವು ತ್ವರಿತ ಅಮೆರಿಕದ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಪಿಯೂಷ್ ಗೋಯಲ್
 ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 27 ಸಾವು, 22 ಗಾಯ
ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 27 ಸಾವು, 22 ಗಾಯ
ಶ್ರೀ ರಾಮ ಮಂದಿರದಲ್ಲಿ ದೇಣಿಗೆ ಅಕ್ರಮ :  ಪ್ರಸ್ತುತ ಎಸ್ಐಟಿ ಮತ್ತು ಪೊಲೀಸ್ ಕ್ರಮದ ಬಗ್ಗೆ ವಿಶ್ವಾಸ - ಆರಎಸ್ಎಸ್
ಶ್ರೀ ರಾಮ ಮಂದಿರದಲ್ಲಿ ದೇಣಿಗೆ ಅಕ್ರಮ : ಪ್ರಸ್ತುತ ಎಸ್ಐಟಿ ಮತ್ತು ಪೊಲೀಸ್ ಕ್ರಮದ ಬಗ್ಗೆ ವಿಶ್ವಾಸ - ಆರಎಸ್ಎಸ್
 ಜಾಗತಿಕ ಇಂಧನ ವ್ಯಾಪಾರದ ಬದಲಾವಣೆ : ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ಭಾರತ
ಜಾಗತಿಕ ಇಂಧನ ವ್ಯಾಪಾರದ ಬದಲಾವಣೆ : ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ಭಾರತ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು

ನ್ಯೂಸ್ MORE NEWS...