Sat,Aug08,2026
ಕನ್ನಡ / English

ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎನ್ನುವುದು ಹೊಣೆಗೇಡಿತನ - ಶಾಸಕ ಯತ್ನಾಳ್ | JANATA NEWS

27 Jul 2026

ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನು ಒತ್ತಾಯಿಸಿ ಕಾಂಗ್ರೆಸ್ ನಾಯಕರು ಸೇರಿದಂತೆ ರಾಜ್ಯದ ಸಿಎಂ ಡಿಕೆ.ಶಿವಕುಮಾರ್ ಅವರು ಕೂಡ ಪ್ರತಿಭಟನೆ ನಡೆಸಿ ಸಚಿವರ ರಾಜೀನಾಮೆಯನ್ನು ಆಗ್ರಹಿಸಿದ್ದರು.

ಆದರೆ ಈಗ ಕರ್ನಾಟಕದಲ್ಲಿ ಮುಂದಿನ ಕೆಲ ತಿಂಗಳಲ್ಲಿ 70 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ "ಜಿಲ್ಲಾಧಿಕಾರಿಗಳೇ ಹೊಣೆ" ಎಂದು ಮುಖ್ಯಮಂತ್ರಿ ಡಿಕೆ.ಶಿವಕುಮಾರ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಈ ಹೇಳಿಕೆಯನ್ನು ಹೊಣೆಗೇಡಿತನ ಎಂದು ಖಂಡಿಸಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, "ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಮುಖ್ಯ ಮಂತ್ರಿಗಳು ಹೇಳಿರುವುದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ. ಈ ಹಿಂದೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಅವಘಡ ನಡೆದರೆ ಅಧಿಕಾರಗಳಷ್ಟೇ ಹೊಣೆ, ಸಚಿವರಲ್ಲ ಎಂಬ ಅಲಿಖಿತ ನಿಯಮವನ್ನು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿತ್ತು."

"ದೆಹಲಿಗೆ ಹೋಗಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧರಣಿ ಕೂರುವ ಮುಖ್ಯ ಮಂತ್ರಿಗಳು ನಮ್ಮ ರಾಜ್ಯದ ನೇಮಕಾತಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ಚ' ಕಾರ ವೆತ್ತುವುದಿಲ್ಲ. ನಮ್ಮ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಿ. ಪ್ರಶ್ನೆ ಪತ್ರಿಕೆ ಸೋರಿಕೆ, ತಪ್ಪು ಅನುವಾದ, ನೇಮಕಾತಿಯಲ್ಲಿ ಅಕ್ರಮವಾದರೆ ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಸಚಿವರು ಹೊರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಗೆಪಾಟಲಾಗಿರುವ ಆಯೋಗವನ್ನು ಮೊದಲು ಸರ್ಜರಿ ಮಾಡಿ.", ಎಂದು ಲೇವಡಿ ಮಾಡಿದ್ದಾರೆ.

English summary :If the question paper leaks DCs are responsible : saying so is irresponsibility - MLA Yatnal

ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ತ್ರಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ
ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ತ್ರಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ
ಎಫ್.ಸಿ.ಆರ್.ಎ ಆಂತರಿಕ ಶಾಸಕಾಂಗ ವಿಷಯ : ವಿದೇಶಿ ಟೀಕೆಗಳನ್ನು ತಿರಸ್ಕರಿಸಿದ  ಭಾರತ
ಎಫ್.ಸಿ.ಆರ್.ಎ ಆಂತರಿಕ ಶಾಸಕಾಂಗ ವಿಷಯ : ವಿದೇಶಿ ಟೀಕೆಗಳನ್ನು ತಿರಸ್ಕರಿಸಿದ ಭಾರತ
ತರುಣ್ ತೇಜ್‌ಪಾಲ್ 2013ರ ಅತ್ಯಾಚಾರ ಪ್ರಕರಣದಲ್ಲಿ ದೋಷಿ - ಬಾಂಬೆ ಹೈಕೋರ್ಟ್ ತೀರ್ಪು; ಹಿಂದಿನ ಖುಲಾಸೆ ಆದೇಶ ರದ್ದು
ತರುಣ್ ತೇಜ್‌ಪಾಲ್ 2013ರ ಅತ್ಯಾಚಾರ ಪ್ರಕರಣದಲ್ಲಿ ದೋಷಿ - ಬಾಂಬೆ ಹೈಕೋರ್ಟ್ ತೀರ್ಪು; ಹಿಂದಿನ ಖುಲಾಸೆ ಆದೇಶ ರದ್ದು
ಅಮಿತ್ ಶಾ ಅವರು ನಾಳೆ ಲೋಕಸಭೆಯಲ್ಲಿ ಎಫ್ ಸಿಆರ್ ಎ  ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ
ಅಮಿತ್ ಶಾ ಅವರು ನಾಳೆ ಲೋಕಸಭೆಯಲ್ಲಿ ಎಫ್ ಸಿಆರ್ ಎ ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ
ಸಿಎಸ್ಎಎಂ, ದೀಪಫೇಕ್ಸ ಕುರಿತು ಭಾರತ ಸರ್ಕಾರಕ್ಕೆ ಜುಕರ್‌ಬರ್ಗ್ ಕ್ಷಮೆಯಾಚಿಸಿದರು; ಹೊಸ ಪರಿಶೀಲನೆಯನ್ನು ಎದುರಿಸಲಿದೆ ಮೆಟಾ
ಸಿಎಸ್ಎಎಂ, ದೀಪಫೇಕ್ಸ ಕುರಿತು ಭಾರತ ಸರ್ಕಾರಕ್ಕೆ ಜುಕರ್‌ಬರ್ಗ್ ಕ್ಷಮೆಯಾಚಿಸಿದರು; ಹೊಸ ಪರಿಶೀಲನೆಯನ್ನು ಎದುರಿಸಲಿದೆ ಮೆಟಾ
ಸಿಎಂ ವಿಜಯ್ ಮತ್ತು ನಟಿ ತ್ರಿಶಾ ಕುರಿತ ಹೇಳಿಕೆಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು : ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ
ಸಿಎಂ ವಿಜಯ್ ಮತ್ತು ನಟಿ ತ್ರಿಶಾ ಕುರಿತ ಹೇಳಿಕೆಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು : ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ
ರಾಮಮಂದಿರ ಕುರಿತ ಕಿರುನಾಟಕದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪಪ್ಪು ಯಾದವ್ ವಿರುದ್ಧ ಎಫ್‌ಐಆರ್ ದಾಖಲು
ರಾಮಮಂದಿರ ಕುರಿತ ಕಿರುನಾಟಕದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪಪ್ಪು ಯಾದವ್ ವಿರುದ್ಧ ಎಫ್‌ಐಆರ್ ದಾಖಲು
ಕರ್ನಾಟಕ ರಾಜ್ಯ ಸಂಪುಟಕ್ಕೆ 20 ನೂತನ ಸಚಿವರ ಸೇರ್ಪಡೆ
ಕರ್ನಾಟಕ ರಾಜ್ಯ ಸಂಪುಟಕ್ಕೆ 20 ನೂತನ ಸಚಿವರ ಸೇರ್ಪಡೆ
 ದೆಹಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ದೆಹಲಿ ಪೊಲೀಸ್ ಮಹಾಸಂಘ; ರಾಜಕೀಯ ನಿರ್ದೇಶನದ ಆರೋಪ ಸುಳ್ಳು
ದೆಹಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ದೆಹಲಿ ಪೊಲೀಸ್ ಮಹಾಸಂಘ; ರಾಜಕೀಯ ನಿರ್ದೇಶನದ ಆರೋಪ ಸುಳ್ಳು
ಪ್ರತಿಭಟನೆಯ ವೇಳೆ ನಡೆದ ಸಂಘರ್ಷದಲ್ಲಿ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಂದ ನ್ಯಾಯಕ್ಕಾಗಿ ಆಗ್ರಹ
ಪ್ರತಿಭಟನೆಯ ವೇಳೆ ನಡೆದ ಸಂಘರ್ಷದಲ್ಲಿ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಂದ ನ್ಯಾಯಕ್ಕಾಗಿ ಆಗ್ರಹ
ಸಿಜೆಪಿ ಕಾನೂನು ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಶಿಕ್ಷಣ ಮಂತ್ರಿಯಾಗಿದ್ದಾಗ ಹೆಚ್ಚು ಪೇಪರ್ ಲೀಕ್ - ಬಿಜೆಪಿಯ ಸುಧಾಂಶು ತ್ರಿವೇದಿ
ಸಿಜೆಪಿ ಕಾನೂನು ಬೆಂಬಲಕ್ಕೆ ನಿಂತ ಕಪಿಲ್ ಸಿಬಲ್ ಶಿಕ್ಷಣ ಮಂತ್ರಿಯಾಗಿದ್ದಾಗ ಹೆಚ್ಚು ಪೇಪರ್ ಲೀಕ್ - ಬಿಜೆಪಿಯ ಸುಧಾಂಶು ತ್ರಿವೇದಿ
ಸಂಸತ್ತಿನಲ್ಲಿ ಆಧಾರರಹಿತ ಹೇಳಿಕೆ : ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಎನ್‌ಡಿಎ ಸಂಸದರ ಆಗ್ರಹ
ಸಂಸತ್ತಿನಲ್ಲಿ ಆಧಾರರಹಿತ ಹೇಳಿಕೆ : ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಎನ್‌ಡಿಎ ಸಂಸದರ ಆಗ್ರಹ

ನ್ಯೂಸ್ MORE NEWS...