ಜೂ.ಚಿರಂಜೀವಿಯನ್ನು ಜಗತ್ತಿಗೆ ಪರಿಚಯಿಸಿದ ಮೇಘನಾ ರಾಜ್.. | Filmz news
: ಜ್ಯೂನಿಯರ್ ಚಿರು ಹುಟ್ಟಿದಾಗ ಫೋಟೋ ರಿವೀಲ್ ಮಾಡಿದ್ದ ಚಿರಂಜೀವಿ ಕುಟುಂಬ, ಮತ್ಯಾವತ್ತೂ ಮಗನ ಫೋಟೋವನ್ನಾಗಲಿ, ವೀಡಿಯೋವನ್ನಾಗಲಿ ಜನರಿಗೆ ತೋರಿಸಲಿಲ್ಲ. ಇದೀಗ ಚಿರಂಜೀವಿ ಪತ್ನಿ ಮೇಘನಾ ತಮ್ಮ ಮಗನನ್ನು ಜಗತ್ತಿಗೆ ಸಿಂಬಾ ಎಂದು ಪರಿಚಯಿಸಿದ್ದಾರೆ.
ಫೆ.12ರಂದೇ ಸರ್ಪೈಸ್ ನೀಡುವುದಾಗಿ ಮುನ್ಸೂಚನೆ ನೀಡಿದ್ದ ಮೇಘನಾ, ಮಗನ ಧ್ವನಿ ಕೇಳಿಸಿದ್ದರು. ಫೆ.14ರ ಮಧ್ಯ ರಾತ್ರಿ ಮಗನನ್ನು ಜಗತ್ತಿಗೆ ಪರಿಚಯಿಸುವ ಸುಳಿವನ್ನೂ ನೀಡಿದ್ದರು.
ಪ್ರೇಮಿಗಳ ದಿನದಂದೇ ಸ್ಯಾಂಡಲ್ವುಡ್ ನಟ ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಿನ ಪುತ್ರ ತಮ್ಮ ಅಭಿಮಾನಿಗಳಿಗೆ ಹಲೋ ಹೇಳಿದ್ದಾನೆ.
ಮಗನ ವೀಡಿಯೋವನ್ನು ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡಿ, ಇಷ್ಟು ದಿನ ಜೂನಿಯರ್ ಚಿರಂಜೀವಿ ಎಂದು ಕರೆಯುತ್ತಿದ್ದ ಮಗನನ್ನು ಸಿಂಬಾನೆಂದು ವೀಡಿಯೋ ತೋರಿಸಿ, ಪರಿಚಯಿಸಿದ್ದಾರೆ.
ಕಿರು ವಿಡಿಯೋ ಅಪ್ಲೋಡ್ ಮಾಡಿ ಜ್ಯೂನಿಯರ್ ಚಿರು ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.