ಅಪ್ಪನ ಅಭಿನಯದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಬಿಡುಗಡೆಮಾಡಿದ ಜೂ.ಚಿರು! | Filmz news
: ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ರಾಜಮಾರ್ತಾಂಡ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ.
ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರ್ನನ್ನು ಚಿರು ಮುದ್ದು ಮಗ ಜೂನಿಯರ್ ಚಿರು ಲಾಂಚ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮೇಘನಾ ರಾಜ್ ಮಗನ ಕೈಯಿಂದ ರಾಜಮಾರ್ತಾಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿಸಿದ್ದಾರೆ. ಸಖತ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಚಿರುಗೆ, ಧ್ರುವ ಸರ್ಜಾ ಧ್ವನಿ ತುಂಬಾನೇ ಹೊಂದಿಕೆ ಆಗಿದೆ. ಪಂಚ್ ಡೈಲಾಗ್ ಕ್ಯಾಚಿಯಾಗಿದೆ. ದೀಪ್ತಿ ಸತಿ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.
ರಾಜಾಮಾರ್ತಾಂಡ ಸಿನಿಮಾ ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿದೆ. ಚಿರು ಒಂದು ಪಾತ್ರವನ್ನು ಎಷ್ಟೊಂದು ಇಷ್ಟಪಟ್ಟು ಮಾಡುತ್ತಿದ್ದರು ಎನ್ನುವುದು ತಿಳಿದಿದೆ. ಅಪ್ಪನಿಗೋಸ್ಕರ ಅಪ್ಪನಿಗಾಗಿ ಮತ್ತು ಸಿನಿಮಾತಂಡಕ್ಕಾಗಿ ಜೂನಿಯರ್ ಚಿರು ಟ್ರೈಲರ್ ಲಾಂಚ್ ಮಾಡುತ್ತಿದ್ದಾನೆ. ಈ ಸಿನಿಮಾ ತಂಡ ಕುಟುಂಬಕ್ಕೆ ಹತ್ತಿರವಾಗಿದೆ. ಚಿರು ನಟನೆ ಮಾಡಿದ್ದಾರೆ, ಧ್ರುವ ಸರ್ಜಾ ಧ್ವನಿಯನ್ನು ನೀಡಿದ್ದಾರೆ. ಮಗ ಟ್ರೈಲರ್ ಲಾಂಚ್ ಮಾಡಿದ್ದಾರೆ. ಸಿನಿಮಾಕ್ಕೆ ಶುಭಾಶಯಗಳು ಎಂದು ಹೇಳಿ ಮುದ್ದು ಮಗು ಟ್ರೈಲರ್ ರೀಲಿಸ್ ಮಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.