ಬಿಗ್ಬಾಸ್ ಸೀಸನ್-8ರಿಂದ ನಿರ್ಮಲಾ ಎಲಿಮಿನೇಟ್ ಆದರೆ ಹೀಗ್ಯಾಕೆ ಮಾಡಿದ್ರು ಬಿಗ್ ಬಾಸ್? | Filmz news
: ಎರಡನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ನಟಿ, ನಿರ್ಮಾಪಕಿ, ರಂಗಭೂಮಿ ಕಲಾವಿದೆ ನಿರ್ಮಲಾ ಚೆನ್ನಪ್ಪ ಹೊರಬಂದಿದ್ದಾರೆ.
ನಿರ್ಮಲಾ ಚನ್ನಪ್ಪ ಜತೆ ಶುಭಾ ಪೂಂಜ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಗೀತಾ ಭಾರತಿ ಭಟ್, ಚಂದ್ರಕಲಾ ಮೋಹನ್, ವಿಶ್ವನಾಥ್, ಪ್ರಶಾಂತ್ ಸಂಬರಗಿ ಎರಡನೇ ವಾರದ ಎಲಿಮಿನೇಷನ್ ಪಟ್ಟಿಯಲ್ಲಿದ್ದರು. ಆ ಪೈಕಿ ನಿರ್ಮಲಾ ಚನ್ನಪ್ಪ ಮನೆಯಿಂದ ಹೊರಬಂದಿದ್ದಾರೆ.
ಸಾಮಾನ್ಯವಾಗಿ ಎಲಿಮಿನೇಟ್ ಆದ ಬಳಿಕ ಸ್ಪರ್ಧಿಯನ್ನು ಕಿಚ್ಚ ಸುದೀಪ್ ತಮ್ಮ ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಆದರೆ ನಿರ್ಮಲಾ ಕಿಚ್ಚನ ವೇದಿಕೆಗೆ ಬರಲಿಲ್ಲ. ಇದರಿಂದ ನಿರ್ಮಲಾ ಬಗ್ಗೆ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಸೀಕ್ರೆಟ್ ರೂಂಗೆ ಹೋಗಿರಬಹುದು. ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬಹುದು. ಹೀಗಾಗಿಯೇ ಅವರನ್ನು ವೇದಿಕೆಗೆ ಕರೆಸಿಲ್ಲ. ನೇರವಾಗಿ ಸೀಕ್ರೆಟ್ ರೂಂಗೆ ಕಳುಹಿಸಿರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಕೇಳಿಬಂದಿದೆ.