ದರ್ಶನ್ ಶಾಲಾ ದಿನಗಳ ಸಾರಥಿಯನ್ನು ಭೇಟಿಮಾಡಿದ ಡಿ ಬಾಸ್ | Filmz news
: ಸಾರಥಿ ಈಗ ತಮ್ಮ ರಿಯಲ್ ಲೈಫ್ನಲ್ಲಿ ಸಾರಥಿಯಾಗಿದ್ದ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡಿದ್ದಾರೆ. ಆ ಭೇಟಿಯ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮೈಸೂರಿನಲ್ಲಿ ಅವರು ಬಾಲ್ಯ ಕಳೆದಿದ್ದಾರೆ. ಅಂದು ಅವರು ಶಾಲೆಗೆ ಹೋಗುತ್ತಿದ್ದ ಬಸ್ನ ಚಾಲಕರನ್ನು ದರ್ಶನ್ ಇಂದು ನೆನಪು ಮಾಡಿಕೊಂಡಿದ್ದಾರೆ. ಅವರ ಮನೆಗೆ ಭೇಟಿ ನೀಡಿ, ಕೆಲವು ಸಮಯ ಕಳೆದು ಬಂದಿದ್ದಾರೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ಚಾಲೆಂಜಿಂಗ್ ಸ್ಟಾರ್ ಹಂಚಿಕೊಂಡಿದ್ದಾರೆ.
ನಿನ್ನೆ ಅವರ 80ನೇ ವರ್ಷದ ಹುಟ್ಟುಹಬ್ಬ. ತಮ್ಮ ಶಾಲಾ ದಿನಗಳ ರಿಯಲ್ ಸಾರಥಿ ಹುಟ್ಟುಹಬ್ಬದಂದು, ಅವರ ಮನೆಗೆ ಸರ್ಪ್ರೈಸ್ ಆಗಿ ಭೇಟಿ ಕೊಟ್ಟಿದ್ದಾರೆ ದರ್ಶನ್.
ರಿಯಲ್ ಸಾರಥಿ ಜೊತೆ ಸಾರಥಿಯ ಭೇಟಿ. ನಾವು ಶಾಲೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಡ್ರೈವರ್ ಇವರು. ಇಂದು ಅವರ 80ನೇ ಹುಟ್ಟುಹಬ್ಬದ ಸಲುವಾಗಿ ಭೇಟಿಯಾಗಿ ವಿಶ್ ಮಾಡಿದ್ದೇನೆ. ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಟ್ವಿಟರ್ನಲ್ಲಿ ದರ್ಶನ್ ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಎಲ್ಲೆಡೆ ಶೇರ್ ಮಾಡುತ್ತಿದ್ದಾರೆ.