ಯಶ್-ರಾಧಿಕಾ ಪಂಡಿತ್ ದಂಪತಿ ಗೃಹ ಪ್ರವೇಶ, ಅವರ ನಿವಾಸ ಹೇಗಿದೆ ನೋಡಿ.. | Filmz news
: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಕನಸಿನ ಮನೆಯ ಗೃಹ ಪ್ರವೇಶ ಜುಲೈ 1 ರಂದು ನೆರವೇರಿದೆ.
ಬೆಂಗಳೂರಿನ ವಿಲ್ಸನ್ ಮ್ಯಾನರ್ ಬಳಿಯಿರುವ ಪ್ರೆಸ್ಟೀಜ್ ಅಪಾರ್ಟೆಂಟ್ನಲ್ಲಿ, ನಾಲ್ಕು ರೂಂಗಳಿರುವ ಐಶಾರಾಮಿ ಮನೆಯನ್ನ ಖರೀದಿಸಿದ್ದಾರೆ ಯಶ್ ಮತ್ತು ರಾಧಿಕಾ.
ಕೋವಿಡ್ ನಿಂಬಂಧನೆಗಳಿರುವ ಹಿನ್ನೆಲೆ ಸರಳವಾಗಿ ಗೃಹ ಪ್ರವೇಶ ಮಾಡಲಾಗಿದೆ. ಸಮಾರಂಭದಲ್ಲಿ ಯಶ್, ರಾಧಿಕಾ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗಿಯಾಗಿದ್ದರು.
ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್ಮೆಂಟ್ನಲ್ಲಿ ಯಶ್ ಹೊಸ ಮನೆ ಖರೀದಿ ಮಾಡಿದ್ದರು. ಇಷ್ಟು ದಿನ ಮನೆಯ ವಿನ್ಯಾಸ ಕೆಲಸಗಳು ನಡೆಯುತ್ತಿತ್ತು. ಈಗ ಅವೆಲ್ಲವೂ ಪೂರ್ಣಗೊಂಡಿದ್ದು, ಗೃಹ ಪ್ರವೇಶದ ಕಾರ್ಯಗಳು ನಡೆದಿವೆ.
ಯಶ್ ಮನೆಯ ಫೋಟೋಗಳು, ಗೃಹ ಪ್ರವೇಶ ಕಾರ್ಯಕ್ರಮದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
English summary :Yash and Radhika