ಈ ವರ್ಷ ಬರ್ತ್ಡೇ ಆಚರಣೆ ಮಾಡಲ್ಲ: ಶಿವರಾಜ್ ಕುಮಾರ್ ಸ್ಪಷ್ಟನೆ | Filmz news
: ಈ ಬಾರಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ನನ್ನ ಹುಟ್ಟುಹಬ್ಬಕ್ಕಿಂತ ಅಭಿಮಾನಿಗಳ ಆರೋಗ್ಯ ಮುಖ್ಯ ಎಂದು ಹೇಳುವ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಶಿವರಾಜ್ಕುಮಾರ್ ಅವರು, ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ. ಯಾರೂ ಮನೆ ಬಳಿ ಬರಬೇಡಿ. ಜುಲೈ 12ಕ್ಕೆ ಹುಟ್ಟು ಹಬ್ಬವಿದ್ದು, ಕೊರೊನಾ ಕಾರಣ ಬರ್ತ್ ಡೇ ಆಚರಿಸದಿರಲು ನಿರ್ಧಾರ ಮಾಡಿದ್ದೀನಿ. ನನ್ನ ಹುಟ್ಟು ಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಕಾರಣಾಂತರದಿಂದ ನಾನು ಹುಟ್ಟುಹಬ್ಬದಂದು ಊರಲ್ಲಿ ಇರುವುದಿಲ್ಲ. ನೀವು ಇರುವಲ್ಲೇ ಸೋಷಿಯಲ್ ಮೀಡಿಯಾ ಮೂಲಕ ನನಗೆ ಶುಭಕೋರಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ನಾನು ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರುವುದರಿಂದ ನಿಮಗೆ (ಅಭಿಮಾನಿಗಳಿಗೆ) ಎಷ್ಟು ಬೇಸರವಾಗಿದೆಯೋ, ಅದಕ್ಕಿಂತಲೂ ಹೆಚ್ಚಿನ ಬೇಸರ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ನೋಡಲಾಗುವುದಿಲ್ಲ ಎಂಬ ಬೇಸರವಾಗುತ್ತದೆ, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿರಿ ಎಂದು ಹೇಳಿದ್ದಾರೆ.
ಇದೇ ವೇಳೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ಕೊರೊನಾ ಲಸಿಕೆ ಪಡೆದುಕೊಳ್ಳಿ. ಆದಷ್ಟು ಬೇಗ ಕೊರೊನಾ ದೂರವಾಗಿ ಎಲ್ಲರೂ ಒಟ್ಟಾಗಿ ಸೇರುವ ದಿನ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಸಾಮಾಜಿಕ ಅಂತರ ಪಾಲನೆ ಮಾಡಿ ಮಾಸ್ಕ್ ಹಾಕಿಕೊಳ್ಳುವುದನ್ನು ಮರೆಯಬೇಡಿ ಎಂದು ಕೋರಿದ್ದಾರೆ.
ಆದಷ್ಟು ಬೇಗ ಕೊರೊನಾ ಕಡಿಮೆ ಆಗಿ, ನಾವೆಲ್ಲರೂ ಸೇರುವಂತೆ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಮನೆಯಲ್ಲಿರಿ, ಸೇಫ್ ಆಗಿರಿ. ಎಲ್ಲರೂ ಸೇಫ್ ಆಗಿರುವಂತೆ ನೋಡಿಕೊಳ್ಳಿ ಎಂದು ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ.