ಲವ್ ಯೂ ರಚ್ಚು ಶೂಟಿಂಗ್ ವೇಳೆ ಅವಘಡ, ಫೈಟರ್ ವಿವೇಕ್ ಸಾವು! | Filmz news
: ರಾಮನಗರ ಜಿಲ್ಲೆಯ ಜೋಗನದೊಡ್ಡಿ ನಡೆಯುತ್ತಿದ್ದ ಲವ್ಯೂ ರಚ್ಚು ಸಿನಿಮಾದ ಸಾಹಸದ ಚಿತ್ರೀಕರಣದ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಪೈಟರ್ ವಿವೇಕ್ ಎನ್ನುವವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ನಟಿಸುತ್ತಿರುವ ಚಿತ್ರದ ಶೂಟಿಂಗ್ ಮಾಡಲಾಗುತ್ತಿತ್ತು. ಅವಘಡ ನಡೆದ ಬಳಿಕ ಚಿತ್ರೀಕರಣ ನಿಲ್ಲಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಇಬ್ಬರಿಗೆ ಗಾಯವಾಗಿತ್ತು. ಈ ಪೈಕಿ ವಿವೇಕ್ ಮೃತಪಟ್ಟಿದ್ದಾರೆ. ಮತ್ತೋರ್ವ ವ್ಯಕ್ತಿಗೆ ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು.
ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ "ಲವ್ ಯೂ ರಚ್ಚು" ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ರೋಪ್ ಎಳೆಯುವಾಗ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯುತ್ ತಂತಿಗೆ ರೋಪ್ ಸ್ಪರ್ಷಿಸಿದ್ದುಇದಕ್ಕೆ ಕಾರಣ ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ರಚಿತಾ ರಾಮ್, ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ಇರಲಿಲ್ಲ. ಜಾಕೇಟ್ ಹಾಕಿದ್ದವನಿಗೂ ಶಾಕ್ ಹೊಡೆದಿದೆ ಎಂದಿದ್ದಾರೆ.
ಘಟನ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿನಿಮಾ ನಿರ್ಮಾಪಕ ಗುರುದೇಶ ಪಾಂಡೆಯವರು ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.