ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್! | Filmz news

2021-09-03
1517
Meghana Raj

: ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾರಾಜ್ ಪ್ರೀತಿಯ ಪುತ್ರನ ನಾಮಕರಣ ಇಂದು ಅದ್ದೂರಿಯಾಗಿ ನಗರದ ಖಾಸಗಿ ಹೋಟೆಲ್‍ನಲ್ಲಿ ನೆರವೇರಿತು.

ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಶಾಸ್ತ್ರ ಮುಗಿದ ಮೇಲೆ ಪ್ರತಿಕ್ರಿಯೆ ನೀಡಿದ ನಟಿ ಮೇಘನಾ ರಾಜ್, ಚಿರು ನಮ್ಮೆಲ್ಲರಿಗೂ ರಾಜ. ಅವನಿಗೆ ಹುಟ್ಟಿರುವ ಇವನು ಯುವರಾಜ. ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ ನನ್ನ ಮಗ. ಹಾಗಾಗಿ, ಈ ಯುವರಾಜನಿಗೆ ರಾಯನ್ ರಾಜ್ ಸರ್ಜಾ ಹೆಸರಿಡಲು ಇಷ್ಟಪಟ್ಟೆ. ಅದಕ್ಕೆ ಎಲ್ಲರೂ ಒಪ್ಪಿಕೊಂಡರು, ಎಲ್ಲರೂ ಇಷ್ಟಪಟ್ಟರು ಎಂದು ತಿಳಿಸಿದ್ದಾರೆ.

ನಮ್ಮ ಜೀವನದಲ್ಲಿ ನಡೆದ ಎಲ್ಲ ಘಟನೆಯನ್ನು ನೀವು ಮನೆಯ ಸದಸ್ಯರಾಗಿ ನೋಡಿ ಕೊಂಡು ನಿಮ್ಮ ಭಾವನೆಗಳಂತೆ ಅದನ್ನು ಗೌರವಿಸಿದ್ದೀರಾ. ನಮ್ಮ ಜೀವನದಲ್ಲಿ ಕತ್ತಲೆ ತುಂಬಿದ್ದ ಸಮಯದಲ್ಲಿ ಬೆಳಕು ನೀಡಿದ್ದು ನಮ್ಮ ರಾಯನ್. ಅದಕ್ಕೆ ರಾಯನ್ ಎಂದು ಹೆಸರಿಟ್ಟಿದ್ದೇವೆ ಎಂದರು.

ನಮ್ಮ ಅಣ್ಣನ ಮಗನಿಗೆ ರಾಯನ್ ರಾಜ್ ಸರ್ಜಾ ಅಂತ ಹೆಸರಿಟ್ಟಿದ್ದೇವೆ. ರಾಜ್-ಸರ್ಜಾ ಅಂದಾಗಲೇ ಗೊತ್ತಾಗುತ್ತದೆ, ಎರಡು ಕುಟುಂಬಗಳೂ ಸದಾ ಒಂದಾಗಿರುತ್ತವೆ ಅಂತ. ಈ ಯೂಟ್ಯೂಬ್‌ನಲ್ಲಿ ಏನೇನೋ ನೆಗೆಟಿವ್ ವಿಚಾರಗಳನ್ನು ಹಾಕಿದ್ದಾರೆ. ಆ ರೀತಿ ನೆಗೆಟಿವ್ ಮಾಡೋದಕ್ಕೆ ಹೋಗಬೇಡಿ. ನಮ್ಮ ನಡುವೆ ಯಾವುದೇ ಹೊಂದಾಣಿಕೆ ಕೊರತೆ ಇಲ್ಲ. ಈ ಸಂದರ್ಭದಲ್ಲಿ ನಮ್ಮ ಅಂಕಲ್, ಅಣ್ಣನನ್ನು ನೆನಪು ಮಾಡಿಕೊಳ್ಳುತ್ತೇನೆ. ರಾಯನ್‌ಗೆ ನಾವೆಲ್ಲರೂ ಸಪೋರ್ಟ್‌ ಆಗಿದ್ದೇವೆ. ರಾಯನ್ ರಾಜ್ ಸರ್ಜಾ ಎಂದರೆ, ಸಂಸ್ಕೃತದಲ್ಲಿ ಯುವರಾಜ ಅಂತ ಅರ್ಥ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸುಂದರ್ ರಾಜ್‍ರವರು, ಚಿರು ಮೊದಲಿನಿಂದಲೂ ಸ್ನೇಹ ಜೀವಿ. ಚಿರು ಅಗಲಿದ ನಂತರ ಸದಾ ನಮ್ಮ ಜೊತೆಯಾಗಿ ನಿಂತಿದ್ದು, ಚಿರು ಸ್ನೇಹಿತ ಪನ್ನಾಗಭರಣ ಹಾಗೂ ಅವರ ತಂಡ. ಎಷ್ಟೋ ಕಷ್ಟದ ಸಮಯದಲ್ಲಿ ಹೇಗೆ ಅದನ್ನು ನಿಭಾಯಿಸಬೇಕು ಎಂದು ಗೊತ್ತಿಲ್ಲದೇ ಇರುವ ಸಂದರ್ಭದಲ್ಲಿ ಅವರು ಬಂದು ನಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತರು. ಚಿರು ಒಬ್ಬ ಒಳ್ಳೆಯ ಸ್ನೇಹಿತರನ್ನು ನೀಡಿ ಹೋಗಿದ್ದಾರೆ ಎಂದು ಭಾವುಕರಾಗಿದ್ದಾರೆ.

English summary :Meghana Raj

ಕಾವೇರಿ ನದಿಯಲ್ಲಿBMW ಕಾರು ಪತ್ತೆ!
ಕಾವೇರಿ ನದಿಯಲ್ಲಿBMW ಕಾರು ಪತ್ತೆ!
ಲವ್ ಜಿಹಾದ್, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ
ಲವ್ ಜಿಹಾದ್, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ
ಕಾಪಿ ಬರಲಿ, ದೇಶದಲ್ಲಿಕಾನೂನಿದೆ, ಸತ್ಯ ಧರ್ಮ ಇದೆ. ನಾನೇನೂ ತಪ್ಪು ಮಾಡಿಲ್ಲ
ಕಾಪಿ ಬರಲಿ, ದೇಶದಲ್ಲಿಕಾನೂನಿದೆ, ಸತ್ಯ ಧರ್ಮ ಇದೆ. ನಾನೇನೂ ತಪ್ಪು ಮಾಡಿಲ್ಲ
ಸ್ಕೂಲ್​ ಬಸ್ ಮತ್ತು ಬೈಕ್​ ನಡುವೆ​ ಅಪಘಾತ: 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು
ಸ್ಕೂಲ್​ ಬಸ್ ಮತ್ತು ಬೈಕ್​ ನಡುವೆ​ ಅಪಘಾತ: 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು
ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಕೆ
ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಕೆ
ಕಾಶ್ಮೀರಿ ನಟಿ ಅಮರೀನ್ ಭಟ್ ಉಗ್ರರ ಗುಂಡಿಗೆ ಬಲಿ: 10 ವರ್ಷದ ಬಾಲಕನ ಮೇಲೂ ಗುಂಡಿನ ದಾಳಿ
ಕಾಶ್ಮೀರಿ ನಟಿ ಅಮರೀನ್ ಭಟ್ ಉಗ್ರರ ಗುಂಡಿಗೆ ಬಲಿ: 10 ವರ್ಷದ ಬಾಲಕನ ಮೇಲೂ ಗುಂಡಿನ ದಾಳಿ
ಭಯೋತ್ಪಾದಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ
ಭಯೋತ್ಪಾದಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ
ಕಾಂಗ್ರೆಸ್ ಗೆ ಹತಾತ್ ವಿದಾಯ ಹೇಳಿದ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್
ಕಾಂಗ್ರೆಸ್ ಗೆ ಹತಾತ್ ವಿದಾಯ ಹೇಳಿದ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್
ಮಗನ ಪಬ್ ಜಿ ಹುಚ್ಚಿಗೆ ತಾಯಿ ಬಲಿ!
ಮಗನ ಪಬ್ ಜಿ ಹುಚ್ಚಿಗೆ ತಾಯಿ ಬಲಿ!
ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು
ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು
ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ
ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ
SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 10 ಆರೋಪಿಗಳನ್ನು ಬಂಧನ
SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 10 ಆರೋಪಿಗಳನ್ನು ಬಂಧನ
ಟೆಕ್ಸಾಸ್‌ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ : 19 ಮಕ್ಕಳು ಮತ್ತು 2 ವಯಸ್ಕರ ಸಾವು
ಟೆಕ್ಸಾಸ್‌ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ : 19 ಮಕ್ಕಳು ಮತ್ತು 2 ವಯಸ್ಕರ ಸಾವು
3 ಜಪಾನ ಮಾಜಿ ಪ್ರಧಾನಿಗಳ ಜೊತೆ ಪ್ರಧಾನಿ ಮೋದಿ ವಿಶೇಷ ಭೇಟಿ
3 ಜಪಾನ ಮಾಜಿ ಪ್ರಧಾನಿಗಳ ಜೊತೆ ಪ್ರಧಾನಿ ಮೋದಿ ವಿಶೇಷ ಭೇಟಿ
ಭಾರತದ ವಿರುದ್ಧ ಯುಕೆ ಸಂಸದರೊಂದಿಗೆ ರಾಹುಲ್ ಗಾಂಧಿ ಸಂಚು - ರಾಜ್ಯ ಬಿಜೆಪಿ ಗಂಭೀರ ಪ್ರಶ್ನೆ
ಭಾರತದ ವಿರುದ್ಧ ಯುಕೆ ಸಂಸದರೊಂದಿಗೆ ರಾಹುಲ್ ಗಾಂಧಿ ಸಂಚು - ರಾಜ್ಯ ಬಿಜೆಪಿ ಗಂಭೀರ ಪ್ರಶ್ನೆ

ಫೋಟೋ ಗ್ಯಾಲಾರಿ MORE PHOTO...