ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕು? ದೀಪಾವಳಿ ಅಮವಾಸ್ಯೆಯಂದೇ ಸೂರ್ಯಗ್ರಹಣ! | JANATA NEWS
ಬೆಂಗಳೂರು : ದೀಪಾವಳಿ ಅಥವಾ ದೀವಾಲಿ ದೇಶಾದ್ಯಂತ ಆಚರಿಸಲಾಗುವ ಅತಿದೊಡ್ಡ ಭಾರತೀಯ ಹಬ್ಬಗಳಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಹೊಂದಿರುವ ಹಬ್ಬವಾಗಿದೆ . ಇದನ್ನು “ಬೆಳಕಿನ ಹಬ್ಬ” ಎಂದೂ ಕರೆಯುತ್ತಾರೆ.
ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯಂದು ಪ್ರತಿವರ್ಷ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ದೀಪಾವಳಿ ಅಮವಾಸ್ಯೆದಿಂದಲೇ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಗ್ರಹಣದ ಮಧ್ಯೆ ದೀಪಾವಳಿ ಹಬ್ಬ ಅಚರಣೆ ಹೇಗೆ? ಅನ್ನೋದರ ಮಾಹಿತಿ ಇಲ್ಲಿದೆ.
ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಅಮಾವಾಸ್ಯೆಯಂದು ಪ್ರದೋಷ ಕಾಲವಿರುವಾಗ ದೀಪಾವಳಿಯಂದು ಮಹಾಲಕ್ಷ್ಮಿಯನ್ನು ಪೂಜಿಸಲಾಗುವುದು. ದೀಪಾವಳಿಯ ಸಂಜೆಯ ಶುಭ ಸಮಯದಲ್ಲಿ ಲಕ್ಷ್ಮಿ , ಗಣೇಶ, ಸರಸ್ವತಿ ಮತ್ತು ಸಂಪತ್ತಿನ ದೇವರು ಕುಬೇರರನ್ನು ಪೂಜಿಸಲಾಗುತ್ತದೆ
ಈ ವರ್ಷದ ಕೊನೆಯ ಸೂರ್ಯ ಗ್ರಹಣ ಅ.25ರಂದು ಸಂಭವಿಸಿರುವುದರಿಂದ ಲಕ್ಷ್ಮೀ ಪೂಜೆಯನ್ನು ಯಾವ ಮಾಡಬೇಕು? ಎನ್ನುವ ಪ್ರಶ್ನೆ ತುಂಬಾ ಜನರಿಗೆ ಕಾಡಿದೆ.
ಅಕ್ಟೋಬರ್ 24 ರಂದು ಸಂಜೆ 05:43 ರಿಂದ 08:16 ರವರೆಗೆ ಪ್ರದೋಷ ಕಾಲಂನಲ್ಲಿ ಲಕ್ಷ್ಮಿ-ಗಣೇಶ ಪೂಜೆ ಮಾಡಬಹುದು.
26-10-2022 ಬುಧವಾರ ಗೋ ಪೂಜೆ ಮಾಡುವವರು ಬೆಳಿಗ್ಗೆ 7:30 ರ ಒಳಗಾಗಿ ಅಥವಾ 9:20 A.M ರಿಂದ 12:5 P.M. ವರೆಗೆ ಗೋ ಪಾದ ಪೂಜೆ ಮಾಡಬಹುದು.
ದೀಪಾವಳಿ ಅಮಾವಾಸ್ಯೆಯಂದು ಮಧ್ಯಾಹ್ನ 2:15 ಕ್ಕೆ ಆರಂಭವಾಗುವ ಸೂರ್ಯಗ್ರಹಣ, 4 ಗಂಟೆ 18 ನಿಮಿಷಕ್ಕೆ ಬಹಳಷ್ಟು ತೀವ್ರತೆಯನ್ನ ಪಡೆದುಕೊಳ್ಳುತ್ತೆ . ಸಂಜೆ 6.30ಕ್ಕೆ ಗ್ರಹಣವು ಮುಕ್ತಾಯವಾಗುತ್ತೆ.
ಸೂರ್ಯ ಗ್ರಹಣ ಸಮಯ..!
* ಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15
* ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18
* ಗ್ರಹಣ ಮೋಕ್ಷಕಾಲ – ಸಂಜೆ 6:30