ಸೊಸೆಗೆ ಗುಂಡು ಹಾರಿಸಿದ ಮಾವ, ಕಾರಣ ಏನು ಗೊತ್ತಾ? | Janata news
ಮಡಿಕೇರಿ : ಮಾವ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.
ಹಸುವನ್ನು ಬಾಣೆಯಲ್ಲಿ ಕಟ್ಟುವ ವಿಚಾರಕ್ಕೆ ಸಂಬಂಧಿಸಿದ್ದಂತೆ ಮಾವ- ಸೊಸೆ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಕೋಪಗೊಂಡ ಮಾವ ಅಯ್ಯಪ್ಪ ತನ್ನ ಸೊಸೆ ತೀರ್ಥ (36) ಅವರ ಮೇಲೆ ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದಾನೆ. ಮಾವ ಹಾರಿಸಿದ ಬಂದೂಕಿನ ಗುಂಡು ಸೊಸೆಯ ಎದೆಭಾಗ ಹಾಗೂ ತೋಳಿ ತಾಗಿದ್ದು, ಗಾಯವಾಗಿದೆ.
ಇವರಿಬ್ಬರ ನಡುವಿನ ಜಗಳ ಆಸ್ತಿ ವಿವಾದಕ್ಕೆ ತಿರುಗಿ ಕೊನೆಗೆ ಮಾವನಿಗೆ ಸಿಟ್ಟು ಹೆಚ್ಚಾಗಿ ಸೊಸೆ ಎಡಗೈ ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ತೀರ್ಥ ಅವರಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.