ಬೈಕ್ ಚಾಲನೆ ವೇಳೆ ವಿಡಿಯೋ ಕಾಲ್: ಹಂಪ್ ಜಂಪ್ ಆಗಿ ಯೋಧನ ಪತ್ನಿ ಸಾವು! | Janata news
ಬಾಗಲಕೋಟೆ : ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ವೇಳೆ ಹಂಪ್ನಲ್ಲಿ ಬೈಕ್ ಹಾರಿದ್ದರಿಂದ ಹಿಂದೆ ಸವಾರಿ ಮಾಡುತ್ತಿದ್ದ ಯೋಧನ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟ ದುರ್ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ನಡೆದಿದೆ.
ಯೋಧ ಶೇಖರಯ್ಯ ಪತ್ನಿ ಪುಷ್ಪಲತಾ(35) ಮೃತ ದುರ್ದೈವಿ. ಯೋಧನೊಬ್ಬ ಪತ್ನಿಯನ್ನು ಕೂರಿಸಿಕೊಂಡು ಬೈಕ್ ಓಡಿಸುತ್ತಿದ್ದ ವೇಳೆ ಮಗನ ವಿಡಿಯೋ ಕಾಲ್ ಬಂತು ಎಂದು ಮಾತನಾಡುತ್ತಾ ಬೈಕ್ ಚಲಾಯಿಸಿದ್ದಾರೆ.
ಎದುರಿನಲ್ಲಿ ಬಂದ ರೋಡ್ ಹಂಪ್ ಗೊತ್ತಾಗದೇ ಬೈಕ್ ಜಂಪಾದ ಪರಿಣಾಮ ಹಿಂಬದಿ ಕುಳಿತಿದ್ದ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ನಡೆದಿದೆ.
ಪತ್ನಿಯನ್ನು ಹಿರೆಮಳಗಾವಿ ಗ್ರಾಮದಲ್ಲಿರುವ ತವರು ಮನೆಗೆ ಬಿಡಲು ಹೋಗುವಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಷ್ಪಲತಾ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.