ಹಂಪಿಯಲ್ಲಿ ಇಬ್ಬರು ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆ! | Janata news
ಬಳ್ಳಾರಿ : ವಿಶ್ವ ಪ್ರಸಿದ್ದ ಹಂಪಿಗೆ ಬಂದಿದ್ದ ಇಬ್ಬರು ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯ ಸಾಲು ಮಂಟಪದಲ್ಲಿ ಇಬ್ಬರು ಮಹಿಳೆಯರು ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಹಿಳೆಯರಿಬ್ಬರ ವಯಸ್ಸು 40ರಿಂದ 45 ವರ್ಷ ಒಳಗೆ ಇರಬಹುದು ಎನ್ನಲಾಗಿದೆ. ನ.28ರಂದು ಮನೆ ಬಿಟ್ಟು ಹಂಪಿಗೆ ಬಂದಿದ್ದ ಇವರು ಸಾಲು ಮಂಟಪದ ಬಳಿ ಕುಳಿತು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಪಟ್ಟ ಮಹಿಳೆಯರನ್ನು ಕಂಡ ಪುರಾತತ್ವ ಇಲಾಖೆಯ ಸಿಬ್ಬಂದಿ ಪ್ರವಾಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇಬ್ಬರ ಮೃತದೇಹಗಳನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಕುರಿತು ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.