ರಾಜ್ಯದಲ್ಲಿ ಪೈಪೋಟಿ ನಡೆಯೋದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ, ಜೆಡಿಎಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ; ಸಿದ್ಧರಾಮಯ್ಯ | Janata news

13 Dec 2020
450
Siddaramaiah

ಬಾಗಲಕೋಟೆ : ಈಗ ಚುನಾವಣೆ ಇರೋದು ಕಾಂಗ್ರೆಸ್ BJP ಮಧ್ಯದಲ್ಲಿ. JDS ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್​ ಕೊಟ್ಟಿದ್ದಾರೆ. ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ವೇಳೆ ಸಿದ್ದರಾಮಯ್ಯ ಮಾತನಾಡಿದರು.

ಜೆಡಿಎಸ್ ಲೆಕ್ಕಕ್ಕೇ ಉಂಟು ಆಟಕ್ಕಿಲ್ಲ. ಅದು ಅಪ್ಪ ಮಕ್ಕಳ ಪಕ್ಷ, ಅದು ಪ್ರಜಾಪ್ರಭುತ್ವ ನೀತಿಯಂತೆ ರಚನೆಯಾದ ಪಾರ್ಟಿ ಅಲ್ಲ. ದೇವೇಗೌಡರು, ಕುಮಾರಸ್ವಾಮಿ ಏನು ಹೇಳ್ತಾರೆ ಅದೇ ವೇದವಾಕ್ಯ. ಅದರ ವಿರುದ್ಧ ಪ್ರಶ್ನೆ ಮಾಡುವವರು ಯಾರು ಇಲ್ಲ. ಪ್ರಶ್ನೆ ಮಾಡಿದವರಿಗೆ ಉಳಿಗಾಲವಿಲ್ಲ. ನನ್ನನ್ನೇ ಪಕ್ಷದಿಂದ ಹೊರಗೆ ಹಾಕಿ ಬಿಟ್ಟರು ಇನ್ನು ಬೇರೆಯವರನ್ನು ಬಿಡುತ್ತಾರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಾನು ಅಹಿಂದ ಅಂತಾ ಮಾತಾಡಿದ್ದಕ್ಕೆ ಹೊರಹಾಕಿದರು. ದೇವೇಗೌಡರು ಅಹಿಂದ ಬೇಡ ಎಂದರು. ನಾನು ಯಾರೇ ಬಂದರೂ ನಿಲ್ಲಿಸೋದಿಲ್ಲ ಎಂದು ಉತ್ತರಿಸಿದೆ. ದೇವರೆ ಬಂದು ಹೇಳಿದರೂ ನಿಲ್ಲಿಸೋದಿಲ್ಲ ಅಂದೆ. ಅದಕ್ಕೇ ನನ್ನನ್ನು ಉಚ್ಚಾಟನೆ ಮಾಡಿಬಿಟ್ಟರು. ಆಮೇಲೆ‌ ಕಾಂಗ್ರೆಸ್​ಗೆ ಬಂದೆ. ಅಲ್ಲಿ ಎಲ್ಲರೂ ಸ್ವಾಗತ ಮಾಡಿದರು. ಜೊತೆಗೆ, ನನ್ನನ್ನು ಮುಖ್ಯಮಂತ್ರಿಯಾಗಿ ನೀವೆಲ್ಲರೂ ಮಾಡಿದ್ದೀರಿ ಎಂದು ಹೇಳಿದರು.

ನಿಮ್ಮ ಕ್ಷೇತ್ರಕ್ಕೆ ಬಂದಾಗ ನಾನು ಮೈಸೂರಿನವನು. ಆಸರೆ ಕೊಟ್ಟು ಗೆಲ್ಲಿಸಿದ್ದೀರಿ ನಾನು ನಿಮ್ಮ ಋಣ ತೀರಿಸಬೇಕು ಎಂದರು. ಉತ್ತರ ಕರ್ನಾಟಕದವನು ಗ್ರಾಮ ಪಂಚಾಯತ್​ ಗೆದ್ರೆ ತಾಲೂಕು ಪಂಚಾಯತ್​, ಜಿಲ್ಲಾ ಪಂಚಾಯತ್​​ ಗೆಲ್ಲಬಹುದು. ಪ್ರಜಾಪ್ರಭುತ್ವಕ್ಕೆ ಗ್ರಾಮ ಪಂಚಾಯತ್​​ ತಳಹದಿ, ಸ್ವಾತಂತ್ರ್ಯ ಬಂದ ಬಳಿಕ ಎರಡು ಸಾರಿ ಬಿಟ್ರೆ ಉಳಿದು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಜನರ ಆಶೀರ್ವಾದ ಮಾಡಿದ್ರೆ ಮಾತ್ರ ನಾವು ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ದೇಶಕ್ಕಾಗಿ ಬಿಜೆಪಿಯವರ ಕೊಡುಗೆ ಶೂನ್ಯ. ಮಾತೆತ್ತಿದರೆ ನಾವು ಹಿಂದೂಗಳು ಅಂತಾರೆ. ನಾನು ಹಿಂದೂ, ಮಹಾತ್ಮಾ ಗಾಂಧಿಯವರ ತತ್ವದ ಹಿಂದೂ. ಬಿಜೆಪಿಯವರು ಸಾವರ್ಕರ್ ಪಾಲಿಸಿ ಹಿಂದೂಗಳು ಎಂದು ಹೇಳಿದರು. ನನ್ನ ಹೆಸರೇ ಸಿದ್ದರಾಮಯ್ಯ. ಸಿದ್ದರಾಮೇಶ್ವರ ನಮ್ಮ ಮನೆ ದೇವರು. ಸಿದ್ದರಾಮೇಶ್ವರ ಹಿಂದೂ ದೇವರಾ? ಮುಸ್ಲಿಂ ದೇವರಾ? ಎಂದು ಪ್ರಶ್ನಿಸಿದರು.

RELATED TOPICS:
English summary :Siddaramaiah

ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ, ಸಂಧಾನ ಮಾತುಕತೆ ಸುಳ್ಳು: ಸಾರಿಗೆ ಸಚಿವ ಸವದಿ ಸ್ಪಷ್ಟನೆ | ಜನತಾ ನ್ಯೂ&#
ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ, ಸಂಧಾನ ಮಾತುಕತೆ ಸುಳ್ಳು: ಸಾರಿಗೆ ಸಚಿವ ಸವದಿ ಸ್ಪಷ್ಟನೆ | ಜನತಾ ನ್ಯೂ&#
ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಕೊರೋನಾ | ಜನತಾ ನ್ಯೂ&#
ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಕೊರೋನಾ | ಜನತಾ ನ್ಯೂ&#
ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ರಾಜ್ಯದಲ್ಲಿಂದು 15785 ಮಂದಿಗೆ ಸೋಂಕು, 146 ಸಾವು | ಜನತಾ ನ್ಯೂ&#
ರಾಜ್ಯದಲ್ಲಿಂದು 15785 ಮಂದಿಗೆ ಸೋಂಕು, 146 ಸಾವು | ಜನತಾ ನ್ಯೂ&#
ಕೋವಿಡ್-19 ಮರಣಮೃದಂಗಕ್ಕೆ ರಾಜ್ಯಾದ್ಯಂತ 80 ಸಾವು, 17,489 ಹೊಸ ಪ್ರಕರಣ | ಜನತಾ ನ್
ಕೋವಿಡ್-19 ಮರಣಮೃದಂಗಕ್ಕೆ ರಾಜ್ಯಾದ್ಯಂತ 80 ಸಾವು, 17,489 ಹೊಸ ಪ್ರಕರಣ | ಜನತಾ ನ್
ಕೋವಿಡ್-19 ಹಿನ್ನೆಲೆ : ಮಹಾಕುಂಭ ಮೇಳವು ಸಾಂಕೇತಿಕವಾಗಿರಬೇಕು ಎಂದು ಪ್ರಧಾನಿ ಮೋದಿ ಮನವಿ | ಜನತಾ ನ್ಯೂ&#
ಕೋವಿಡ್-19 ಹಿನ್ನೆಲೆ : ಮಹಾಕುಂಭ ಮೇಳವು ಸಾಂಕೇತಿಕವಾಗಿರಬೇಕು ಎಂದು ಪ್ರಧಾನಿ ಮೋದಿ ಮನವಿ | ಜನತಾ ನ್ಯೂ&#
ಕೆಂಪು ಕೋಟೆಯ ಹಿಂಸಾಚಾರ ಆರೋಪಿ ದೀಪ್ ಸಿಧುಗೆ ಜಮೀನು ಸಿಕ್ಕ ಕೆಲವೇ ಗಂಟೆಯೊಳಗೆ ಬಂಧನ | ಜನತಾ ನ್ಯೂ&#
ಕೆಂಪು ಕೋಟೆಯ ಹಿಂಸಾಚಾರ ಆರೋಪಿ ದೀಪ್ ಸಿಧುಗೆ ಜಮೀನು ಸಿಕ್ಕ ಕೆಲವೇ ಗಂಟೆಯೊಳಗೆ ಬಂಧನ | ಜನತಾ ನ್ಯೂ&#
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತೊಮ್ಮೆ ಕರೊನಾ ಪಾಸಿಟಿವ್​, ಆಸ್ಪತ್ರೆಗೆ ದಾಖಲು | ಜನತಾ ನ್ಯೂ&#
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತೊಮ್ಮೆ ಕರೊನಾ ಪಾಸಿಟಿವ್​, ಆಸ್ಪತ್ರೆಗೆ ದಾಖಲು | ಜನತಾ ನ್ಯೂ&#
ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಅಮೇರಿಕ : ಇಂಡಿಯಾನಾಪೊಲಿಸ್ ಗುಂಡಿನ ದಾಳಿಗೆ ಮೃತ 8 ಜನರ ಪೈಕಿ 4 ಭಾರತೀಯರು | ಜನತಾ ನ್ಯೂ&#
ಅಮೇರಿಕ : ಇಂಡಿಯಾನಾಪೊಲಿಸ್ ಗುಂಡಿನ ದಾಳಿಗೆ ಮೃತ 8 ಜನರ ಪೈಕಿ 4 ಭಾರತೀಯರು | ಜನತಾ ನ್ಯೂ&#
ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಸಂಪೂರ್ಣ ನಿಷೇಧಿಸಿದ ಪಾಕಿಸ್ತಾನ | ಜನತಾ ನ್ಯೂ&#
ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಸಂಪೂರ್ಣ ನಿಷೇಧಿಸಿದ ಪಾಕಿಸ್ತಾನ | ಜನತಾ ನ್ಯೂ&#

ನ್ಯೂಸ್ MORE NEWS...