ಟೆಂಪೋ ಟ್ರಾವೆಲರ್ ಪಲ್ಟಿ: ಚಾಮುಂಡಿ ದರ್ಶನಕ್ಕೆ ಬರುತ್ತಿದ್ದ ಮೂವರು ಸಾವು, 14 ಮಂದಿಗೆ ಗಾಯ! | Janata news
ಚಾಮರಾಜನಗರ : ತಮಿಳುನಾಡಿನಿಂದ ಮೈಸೂರಿಗೆ ಬರುತ್ತಿದ್ದ ಟೆಂಪೊ ಟ್ರಾವೆಲರ್ ವೊಂದು ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿರುವ ಘಟನೆ ಸುವರ್ಣಾವತಿ ಜಲಾಶಯ ಸಮೀಪದ ಗುಡಿಬೋರೆ ಎಂಬಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಸಂಭವಿಸಿದೆ.
ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಪೂಜೆ ಸಲ್ಲಿಸಲು ತಿರುಪ್ಪುರ್ನಿಂದ ಹೊರಟವರ ಟೆಂಪೋ ಟ್ರಾವೆಲರ್ ಮುಂಜಾನೆ 4:30ರ ಸುಮಾರಿಗೆ ಗುಡಿಬೋರೆ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.. ಪರಿಣಾಮ ಒಂದೇ ಕುಟುಂಬದರ ಮೂವರು ಮೃತಪಟ್ಟಿದ್ದು,14 ಮಂದಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಸುಬ್ರಮಣ್ಯ (75), ಅವರ ಪತ್ನಿ ಅಮರಾವತಿ (65) ಹಾಗೂ ಪುತ್ರಿ ಕೋಕಿಲ (40) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಚಾಮರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.