ರಾಜಧಾನಿಯಲ್ಲಿ ಬೆನ್ಜ್ ಹಾಗೂ ದೊಡ್ಡ ಕಾರುಗಳೇ ಓಡಾಡಬೇಕಾ: ಡಿ.ಕೆ.ಶಿವಕುಮಾರ್ | Janata news
ಚಿಕ್ಕಮಗಳೂರು : ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ರಾಜ್ಯದ ಆಸ್ತಿ. ರಾಜಧಾನಿಯಲ್ಲಿ ಬೆಂಜ್, ದೊಡ್ಡ ಕಾರುಗಳೇ ಓಡಾಡಬೇಕಾ? ಎಂದು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನೆ ಹಾಕಿದ್ದಾರೆ.
ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯ-ಕೇಂದ್ರ ಸರ್ಕಾರಗಳ ಅಂತ್ಯದ ದಿನ ಹತ್ರ ಬರ್ತಿದೆ. ರೈತ ವಿರೋಧಿ ಸರ್ಕಾರ ಎಂಬುದಕ್ಕೆ ದೆಹಲಿ ದೌರ್ಜನ್ಯ ಸಾಕ್ಷಿ ಎಂದರು.
ರೈತರ ಕೋಪ-ಶಾಪ-ತಾಪ ಎಲ್ಲವೂ ಇವರಿಗೆ ತಗುಲುತ್ತದೆ. ರೈತರ ಮಕ್ಕಳೆಂದು ಶಾಲು ಹಾಕಿಕೊಂಡು ಸರ್ಕಾರ ಮಾಡುವವರು ಅವರನ್ನ ಏಕೆ ಬಿಡುವುದಿಲ್ಲ? ಸರ್ಕಾರದ ವೈಫಲ್ಯವನ್ನ ವಿಪಕ್ಷ ಮತ್ತು ಸಂಘಟನೆಗಳು ಪ್ರಶ್ನಿಸುತ್ತಿವೆ. ಇವರು ಅದನ್ನ ಮಾಡಿರಲಿಲ್ಲವೇ? ಎಂದು ಡಿಕೆಶಿ ಪ್ರಶ್ನೆ ಮಾಡಿದರು.
RELATED TOPICS:
English summary :DKShivakumar