ಜೆಲಿಟಿನ್ ಕಡ್ಡಿ ಸ್ಪೋಟ, ಸ್ಫೋಟಕ್ಕೆ ಮನೆ ದ್ವಂಸ | Janata news
ತುಮಕೂರು : ತುಮಕೂರು ತಾಲೂಕಿನ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಸ್ಕಲ್ ಗ್ರಾಮದ ಲಕ್ಷ್ಮೀಕಾಂತ್ ಎಂಬುವರ ಮನೆಯಲ್ಲಿದ್ದ ಜಿಲೆಟಿನ್ ಕಡ್ಡಿ ಸ್ಫೋಟಗೊಂಡಿದ್ದು, ಮನೆ ದ್ವಂಸಗೊಂಡಿದೆ.
ಕ್ರಷರ್ ಹಾಗೂ ಕಲ್ಲು ಬಂಡೆಗಳನ್ನು ಸ್ಪೋಟಿಸಲು ಬಳಸುವ ಜಿಲಿಟಿನ್ ಕಡ್ಡಿಗಳನ್ನು ಮನೆಯಲ್ಲಿ ಸಂಗ್ರಹಿಸಲಾಗಿದ್ದು, ಮಸ್ಕಲ್ ಗ್ರಾಮದ ಲಕ್ಷ್ಮಿಕಾಂತ್ ಅವರ ಮನೆ ಸಂಪೂರ್ಣ ಧ್ವಂಸಗೊಂಡಿದೆ.
ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಕಾಂತ, ಜಿಲೆಟಿನ್ ಕಡ್ಡಿಯನ್ನು ತನ್ನ ಮನೆಯಲ್ಲಿ ಇಟ್ಟಿದ್ದರು. ಬಿಸಿಲಿನ ತಾಪಕ್ಕೆ ಜಿಲೆಟಿನ್ ಕಡ್ಡಿ ಸ್ಫೋಟಗೊಂಡಿದೆ ಎನ್ನಲಾಗಿದೆ.
ಈ ವೇಳೆ ಮನೆಯ ಹೊರಗಿದ್ದ ಸುವರ್ಣಮ್ಮ ಎಂಬುವರಿಗೆ ಸಿಮೆಂಟ್ ಶೀಟು ತಗುಲಿ ಸಣ್ಣಪುಟ್ಟ ಗಾಯವಾಗಿದೆ. ಇವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.