ನಾಪತ್ತೆಯಾಗಿದ್ದ ಪ್ರೇಮಿಗಳು, ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ! | Janata news

ಕಲಬುರಗಿ : ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚೆ ನಾಪತ್ತೆಯಾಗಿದ್ದ ಪ್ರೇಮಿಗಳು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಪರಶುರಾಮ ಪೂಜಾರಿ(23), ಭಾಗ್ಯಶ್ರೀ(19) ಮೃತ ಪ್ರೇಮಿಗಳು. ಯಡ್ರಾಮಿ ತಾಲೂಕಿನ ಮಾನಶಿವನಗಿ ಗ್ರಾಮದ ನಿವಾಸಿಗಳು. ಪೂಜಾರಿ ಮತ್ತು ಭಾಗ್ಯಶ್ರೀ ಮನೆಯಲ್ಲಿ ಪ್ರೀತಿಗೆ ವಿರೋಧ ವಿರಲಿಲ್ಲ, ಮದುವೆ ಮಾಡುವುದಕ್ಕೆ 2 ಕುಟುಂಬಗಳಿಂದ ಒಪ್ಪಿಗೆ ಇತ್ತು.
ಆದರೂ ಪ್ರೀಮಿಗಳು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಇವರ ಶವ ಪತ್ತೆಯಾಗಿದೆ. ಆತ್ಮಹತ್ಯೆ ಗೆ ಕಾರಣ ಇನ್ನು ತಿಳಿದುಬಂದಿಲ್ಲ.
ನಿನ್ನೆ ಸಂಜೆ ಯಡ್ರಾಮಿ ಪಟ್ಟಣದ ಹೊರವಲಯದಲ್ಲಿ ಒಂದೇ ಮರಕ್ಕೆ ಇಬ್ಬರೂ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Kalburgi