ನಾಟಕದಲ್ಲಿ ಪಾತ್ರಧಾರಿಯ ಮೇಲೆ ಚಾಮುಂಡೇಶ್ವರಿ, ವಿಡಿಯೋ ವೈರಲ್ | Janata news
ಮಂಡ್ಯ : ನಾಟಕದ ವೇಳೆ ಪಾತ್ರಧಾರಿ ಮೇಲೆ ಚಾಮುಂಡಿ ದೇವಿಯ ಆಹ್ವಾಹನೆ ಆಗಿದೆ ಎನ್ನಲಾದ ದೃಶ್ಯ ವೈರಲ್ ಆಗಿದೆ.
ಕೌಂಡಲಿಕ ವಧೆ ನಾಟಕ ನಡೆಯುತ್ತಿತ್ತು. ಮುಕ್ತಾಯದ ಹಂತದಲ್ಲಿ ಕೌಂಡಲಿಕನ ವಧೆ ಮಾಡುವ ಸಮಯದಲ್ಲಿ ಚಾಮುಂಡೇಶ್ವರಿ ಪಾತ್ರ ಮಾಡಿದವರು ಉದ್ವೇಗಗೊಂಡಿದ್ದಾರೆ. ಆ ವ್ಯಕ್ತಿ ಮೇಲೆ ಸಾಕ್ಷಾತ್ ಚಾಮುಂಡಿ ತಾಯಿ ಆಹ್ವಾಹನೆ ಆಗಿತ್ತು ಎನ್ನಲಾಗಿದೆ.
ತಾಯಿಯೇ ಮೈಮೇಲೆ ಆವಾಹನೆ ಆದ ಹಾಗೆ ಕೌಂಡಲೀಕ ಮೇಲೆ ತ್ರಿಶೂಲ ಇಡಲು ಮುಂದಾಗಿದ್ದಾರೆ. ಕೂಡಲೇ ಆಯೋಜಕರು ಹಿಡಿದುಕೊಂಡು ಹೊರಗೆ ಕರೆದೊಯ್ದಿದ್ದಾರೆ.
ಈ ಸಂದರ್ಭದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
RELATED TOPICS:
English summary :Mandya