ವಾಸಿಸಲು ಅತ್ಯುತ್ತಮ ನಗರಗಳ ಪೈಕಿ ಬೆಂಗಳೂರು ದೇಶದಲ್ಲೇ ಬೆಸ್ಟ್ | Janata news

04 Mar 2021
431
Bengaluru Tops List Of Cities In Ease Of Living

ಬೆಂಗಳೂರು : ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಲ್ ಪರ್ಫಾರ್ಮೆನ್ಸ್​ ಇಂಡೈಸಸ್ ಕಾರ್ಯಕ್ರಮದಡಿ, ಗುಣಮಟ್ಟದ ಜೀವನ ನಡೆಸಲು (ಈಸ್ ಆಫ್ ಲಿವಿಂಗ್) ಸೂಕ್ತ ನಗರಗಳ ಪೈಕಿ ಬೆಂಗಳೂರಿಗೆ ನಂಬರ್ ಒನ್ ಸ್ಥಾನ ಘೋಷಿಸಿದೆ.

ಹತ್ತು ಲಕ್ಷಕ್ಕೂ ಹೆಚ್ಚಿನ ಜಸನಂಖ್ಯೆ ಇರುವ ಐವತ್ತಕ್ಕೂ ಹೆಚ್ಚು ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಪುಣೆ ಈ ಬಾರಿ ಎರಡನೇ ಸ್ಥಾನಕ್ಕೆ ಜಾರಿದೆ.

ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಮಂತ್ರಾಲಯ ನೀಡುವ ರ‍್ಯಾಂಕಿಂಗ್‌ ಇದಾಗಿದೆ. ಇದರಲ್ಲಿ ಮೊದಲನೇ ಸ್ಥಾನ ಬೆಂಗಳೂರಿಗೆ ಪ್ರಾಪ್ತವಾಗಿದೆ. ಆ ಮೂಲಕ ಸಿಲಿಕಾನ್‌ ಸಿಟಿಯ ಹಿರಿಮೆಗೆ ಮತ್ತೊತ್ತು ಕಿರೀಟ ದಕ್ಕಿದೆ.

ಪ್ರತೀ ವರ್ಷ ಕೇಂದ್ರ ಸರ್ಕಾರ ಸೂಚ್ಯಂಕ ಬಿಡುಗಡೆ ಮಾಡುತ್ತದೆ. ಈಸ್ ಆಫ್ ಲಿವಿಂಗ್ ಪ್ರಕಾರ, ನಗರದಲ್ಲಿ ವಾಸಿಸುತ್ತಿರುವ ಜನರು ಜೀವನ ನಡೆಸಲು ಬೇಕಾದ ಸೌಕರ್ಯಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಸೌಲಭ್ಯಗಳು ಹಾಗೂ ಜನರ ಆರ್ಥಿಕ ಅಭಿವೃದ್ಧಿಗಾಗಿ ನಗರ ಎಷ್ಟು ಸಹಕಾರಿಯಾಗಿದೆ. ಜೊತೆಗೆ ನಗರದ ಪರಿಸರ ಯಾವ ಗುಣಮಟ್ಟದಲ್ಲಿದೆ ಎಂಬ ಆಧಾರದಲ್ಲಿ ಕೇಂದ್ರ ಸರ್ಕಾರ ಜನರ ಸಮೀಕ್ಷೆ ನಡೆಸಿದೆ.

ಜೀವನ ಗುಣಮಟ್ಟ ಹಾಗೂ ನಗರಾಭಿವೃದ್ಧಿಯಿಂದ ಜನರ ಮೇಲೆ ಪ್ರಭಾವ, ನಗರದ ಆರ್ಥಿಕ ಪರಿಸ್ಥಿತಿ ಸೇರಿ ಹಲವು ಮಾನದಂಡಗಳನ್ನು ಇಟ್ಟುಕೊಂಡು ಈ ವರದಿ ತಯಾರಿಸಲಾಗಿದೆ.

ಮಿಲಿಯನ್‌ಗಿಂತ ಹೆಚ್ಚು ಜನಸಂಖ್ಯೆ | 10 ನಗರಗಳ ಪಟ್ಟಿ ಹೀಗಿದೆ
1. ಬೆಂಗಳೂರು
2. ಪುಣೆ
3. ಅಹಮದಾಬಾದ್
4. ಚೆನ್ನೈ
5. ಸೂರತ್
6. ನವೀ ಮುಂಬೈ
7. ಕೊಯಮತ್ತೂರು
8. ವಡೋದರಾ
9. ಇಂದೋರ್
10. ಗ್ರೇಟರ್ ಮುಂಬೈ

ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆ ಎಂಬ ವಿಭಾಗದಲ್ಲಿ, ಶಿಮ್ಲಾ ನಗರದ ಜನತೆ ಸುಲಭವಾಗಿ ಜೀವನ ಸಾಗಿಸುವ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಭುವನೇಶ್ವರ, ಸಿಲ್ವಾಸ್ಸ, ಕಾಕಿನಾಡ, ಸೇಲಂ, ವೆಲ್ಲೂರು, ಗಾಂಧಿನಗರ, ಗುರುಗ್ರಾಮ್, ದಾವಣಗೆರೆ ಮತ್ತು ತಿರುಚಿರಾಪಳ್ಳಿ ಸ್ಥಾನ ಪಡೆದುಕೊಂಢಿದೆ.

RELATED TOPICS:
English summary :Bengaluru Tops List Of Cities In Ease Of Living

ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ, ಸಂಧಾನ ಮಾತುಕತೆ ಸುಳ್ಳು: ಸಾರಿಗೆ ಸಚಿವ ಸವದಿ ಸ್ಪಷ್ಟನೆ | ಜನತಾ ನ್ಯೂ&#
ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ, ಸಂಧಾನ ಮಾತುಕತೆ ಸುಳ್ಳು: ಸಾರಿಗೆ ಸಚಿವ ಸವದಿ ಸ್ಪಷ್ಟನೆ | ಜನತಾ ನ್ಯೂ&#
ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಕೊರೋನಾ | ಜನತಾ ನ್ಯೂ&#
ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಕೊರೋನಾ | ಜನತಾ ನ್ಯೂ&#
ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬಂದಂತೆ ಕಾಣುತ್ತಿದೆ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ರಾಜ್ಯದಲ್ಲಿಂದು 15785 ಮಂದಿಗೆ ಸೋಂಕು, 146 ಸಾವು | ಜನತಾ ನ್ಯೂ&#
ರಾಜ್ಯದಲ್ಲಿಂದು 15785 ಮಂದಿಗೆ ಸೋಂಕು, 146 ಸಾವು | ಜನತಾ ನ್ಯೂ&#
ಕೋವಿಡ್-19 ಮರಣಮೃದಂಗಕ್ಕೆ ರಾಜ್ಯಾದ್ಯಂತ 80 ಸಾವು, 17,489 ಹೊಸ ಪ್ರಕರಣ | ಜನತಾ ನ್
ಕೋವಿಡ್-19 ಮರಣಮೃದಂಗಕ್ಕೆ ರಾಜ್ಯಾದ್ಯಂತ 80 ಸಾವು, 17,489 ಹೊಸ ಪ್ರಕರಣ | ಜನತಾ ನ್
ಕೋವಿಡ್-19 ಹಿನ್ನೆಲೆ : ಮಹಾಕುಂಭ ಮೇಳವು ಸಾಂಕೇತಿಕವಾಗಿರಬೇಕು ಎಂದು ಪ್ರಧಾನಿ ಮೋದಿ ಮನವಿ | ಜನತಾ ನ್ಯೂ&#
ಕೋವಿಡ್-19 ಹಿನ್ನೆಲೆ : ಮಹಾಕುಂಭ ಮೇಳವು ಸಾಂಕೇತಿಕವಾಗಿರಬೇಕು ಎಂದು ಪ್ರಧಾನಿ ಮೋದಿ ಮನವಿ | ಜನತಾ ನ್ಯೂ&#
ಕೆಂಪು ಕೋಟೆಯ ಹಿಂಸಾಚಾರ ಆರೋಪಿ ದೀಪ್ ಸಿಧುಗೆ ಜಮೀನು ಸಿಕ್ಕ ಕೆಲವೇ ಗಂಟೆಯೊಳಗೆ ಬಂಧನ | ಜನತಾ ನ್ಯೂ&#
ಕೆಂಪು ಕೋಟೆಯ ಹಿಂಸಾಚಾರ ಆರೋಪಿ ದೀಪ್ ಸಿಧುಗೆ ಜಮೀನು ಸಿಕ್ಕ ಕೆಲವೇ ಗಂಟೆಯೊಳಗೆ ಬಂಧನ | ಜನತಾ ನ್ಯೂ&#
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತೊಮ್ಮೆ ಕರೊನಾ ಪಾಸಿಟಿವ್​, ಆಸ್ಪತ್ರೆಗೆ ದಾಖಲು | ಜನತಾ ನ್ಯೂ&#
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತೊಮ್ಮೆ ಕರೊನಾ ಪಾಸಿಟಿವ್​, ಆಸ್ಪತ್ರೆಗೆ ದಾಖಲು | ಜನತಾ ನ್ಯೂ&#
ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಅಮೇರಿಕ : ಇಂಡಿಯಾನಾಪೊಲಿಸ್ ಗುಂಡಿನ ದಾಳಿಗೆ ಮೃತ 8 ಜನರ ಪೈಕಿ 4 ಭಾರತೀಯರು | ಜನತಾ ನ್ಯೂ&#
ಅಮೇರಿಕ : ಇಂಡಿಯಾನಾಪೊಲಿಸ್ ಗುಂಡಿನ ದಾಳಿಗೆ ಮೃತ 8 ಜನರ ಪೈಕಿ 4 ಭಾರತೀಯರು | ಜನತಾ ನ್ಯೂ&#
ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಸಂಪೂರ್ಣ ನಿಷೇಧಿಸಿದ ಪಾಕಿಸ್ತಾನ | ಜನತಾ ನ್ಯೂ&#
ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಸಂಪೂರ್ಣ ನಿಷೇಧಿಸಿದ ಪಾಕಿಸ್ತಾನ | ಜನತಾ ನ್ಯೂ&#

ನ್ಯೂಸ್ MORE NEWS...