ಮಂಡ್ಯದ ಆರ್ ಟಿ ಓ ಗುಮಾಸ್ತನ ಮನೆ ಮೇಲೆ ಎಸಿಬಿ ರೈಡ್, ದಾಖಲೆಗಳ ಪರಿಶೀಲನೆ | Janata news
ಮಂಡ್ಯ : ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಹೊಂದಿರುವ ದೂರು ಬಂದ ಹಿನ್ನೆಲೆಯಲ್ಲಿ ಮೈಸೂರಿನ ಆರ್.ಟಿ.ಓ ಕಛೇರಿಯ ಪ್ರಥಮ ದರ್ಜೆ ಸಹಾಯಕ ಎ.ವಿ. ಚನ್ನವೀರಪ್ಪ ಎಂಬುವರ ಮಂಡ್ಯ ನಿವಾಸದ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕುವೆಂಪುನಗರದ ಮನೆ ಹಾಗೂ ಸ್ವಗ್ರಾಮ ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಮನೆ ಮೇಲೂ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸಾರಿಗೆ ಇಲಾಖೆಯ ಬೆಂಗಳೂರಿನ ಆಯುಕ್ತ ಕಚೇರಿಯಲ್ಲಿ ಎ. ವಿ. ಚನ್ನವೀರಪ್ಪ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮೈಸೂರಿನ ಆರ್ಟಿಒ ಕಚೇರಿಯಲ್ಲಿ ಎಫ್ಡಿಎ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
English summary :Mandya