ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದ ಉದ್ಯಮಿ ರತನ್ ಟಾಟಾ, ಎಲ್ಲರಿಗೂ ಬೇಗ ವ್ಯಾಕ್ಸಿನ್ ಸಿಗಲೆಂದು ಹಾರೈಕೆ! | Janata news
ನವದೆಹಲಿ: : ಟಾಟಾ ಸನ್ಸ್ನ ನಿವೃತ್ತ ಅಧ್ಯಕ್ಷ, ಲೋಕೋಪಕಾರಿ ರತನ್ ಟಾಟಾ ಅವರು ಇಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.
ಲಸಿಕೆ ಪ್ರಕ್ರಿಯೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹೊಗಳಿರುವ ರತನ್ ಟಾಟಾ, ಅದು ನೋವುರಹಿತವಾಗಿತ್ತು ಎಂದು ಬಣ್ಣಿಸಿದ್ದಾರೆ.
ಇಂದು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಕ್ಕೆ ಧನ್ಯವಾದಗಳು, ಅದನ್ನು ತೆಗೆದುಕೊಂಡಾಗ ಯಾವುದೇ ನೋವಾಗಲಿಲ್ಲ ಎಂದು ಹೇಳಿದ್ದಾರೆ.
ಇಂದು ನನ್ನ ಮೊದಲ ಲಸಿಕೆ ಡೋಸ್ ಪಡೆದಿದ್ದೇನೆ. ತುಂಬಾ ಧನ್ಯವಾದಗಳು. ಯಾವುದೇ ಶ್ರಮವಿರಲಿಲ್ಲ ಹಾಗೂ ನೋವಾಗಲಿಲ್ಲ. ಎಲ್ಲರಿಗೂ ಆದಷ್ಟು ಬೇಗ ಲಸಿಕೆ ನೀಡಿ ರಕ್ಷಣೆ ಒದಗಿಸಬಹುದೆಂದು ನಾನು ಭಾವಿಸುತ್ತೇನೆ ಎಂದು ರತನ್ ಟಾಟಾ ಅವರು ಟ್ವೀಟ್ ಮಾಡಿದ್ದಾರೆ.
RELATED TOPICS:
English summary :Ratan Tata gets first dose of COVID-19 vaccine on March 13: Making the announcement on Twitter, Tata said that he is very thankful to have gotten his first shot of the vaccination and called the process effortless and painless.