ಸಿಡಿ ಪ್ರಕರಣ: ಯುವತಿಯ ಅಪಹರಣವಾಗಿದೆ ಎಂದು ಪೋಷಕರ ದೂರು | Janata news

17 Mar 2021
460
CD Politics

ಬೆಳಗಾವಿ : ಸೆಕ್ಸ್​ ಸಿಡಿ ಪ್ರಕರಣವೊಂದರಲ್ಲಿ ತಳುಕು ಹಾಕಿಕೊಂಡಿದ್ದಾಳೆ ಎನ್ನಲಾಗಿರುವ ಯುವತಿಯ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದ್ದು, ಆಕೆಯನ್ನು ಯಾರೋ ಅಪಹರಿಸಿದ್ದಾರೆ, ಆದಷ್ಟು ಬೇಗ ಪತ್ತೆ ಮಾಡಿ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?

ಬೆಳಗಾವಿಯ ಹನುಮಾನ ನಗರದ ನಿವಾಸಿಯಾದ ಯುವತಿಯ ಪಾಲಕರು, ನಾನು ಸೇನೆಯಿಂದ ನಿವೃತ್ತನಾಗಿದ್ದು, ಬ್ಯಾಂಕ್​ವೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಮೂವರು ಮಕ್ಕಳಿದ್ದು, ಆ ಪೈಕಿ ಒಬ್ಬಳು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿ, ಅಲ್ಲಿಯೇ ಉದ್ಯೋಗದಲ್ಲಿದ್ದು, ಆಗಾಗ ಊರಿಗೆ ಬಂದು ಹೋಗುತ್ತಿದ್ದಳು.

ಕೆಲವು ದಿನಗಳ ಹಿಂದೆ ಒಂದು ವಿಡಿಯೋ ಸಿ.ಡಿ.ಯಲ್ಲಿ ತಮ್ಮ ಮಗಳನ್ನೇ ಹೋಲುವಂಥ ಯುವತಿಯೊಬ್ಬಳು ಒಬ್ಬ ವ್ಯಕ್ತಿಯೊಂದಿಗೆ ಅಶ್ಲೀಲವಾಗಿ ಇರುವಂಥದ್ದು ಸಾಮಾಜಿಕ ಮಾಧ್ಯಮ ಹಾಗೂ ಇತರ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿತ್ತು.

ಅದನ್ನು ನೋಡಿ ಗಾಬರಿಯಾಗಿ ತಾವು ಮಗಳನ್ನು ವಿಚಾರಿಸಿದಾಗ, ಆಕೆ ಅದೊಂದು ನಕಲಿ ಸಿ.ಡಿ., ಎಡಿಟ್ ಮಾಡಿ ತನ್ನ ಮುಖ ಹಾಗೂ ಧ್ವನಿಗೆ ತಾಳೆ ಆಗುವಂತೆ ಮಾಡಲಾಗಿದೆ, ಆ ಮೂಲಕ ತನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡಿರುವುದಾಗಿ ಹೇಳಿದ್ದಾಳೆ. ಬಳಿಕ ಊರಿಗೆ ಬರಲು ಹೇಳಿದರೆ, ಆ ವಿಡಿಯೋ ನಕಲಿ ಎಂದು ಸಾಬೀತಾದ ಮೇಲೆ ಬರುವುದಾಗಿ ಹೇಳಿದ್ದಳು ಎಂದು ಅವರ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅವಳು ಮಾತನಾಡಿರುವ ವಿಡಿಯೋ ಬಹಿರಂಗಗೊಂಡಿದೆ. ಅದರಲ್ಲಿ ಅವಳು ತಾನು ಆತ್ಮಹತ್ಯೆಗೆ ಯತ್ನಿಸಿದ್ದು, ನಾವು ಕೂಡ ಆತ್ಮಹತ್ಯೆಗೆ ಮುಂದಾಗಿದ್ದನ್ನು ಹೇಳಿದ್ದಳು.

ಅವಳಿಗೆ ಮನೆಗೆ ಬಂದು ಬಿಡು ಎಂದು ಹೇಳಿದಾಗ ಅವಳು, ಈಗ ನಾನು ಏನೂ ಹೇಳುವ ಸ್ಥಿತಿಯಲ್ಲಿಲ್ಲ, ನಾನು ಎಲ್ಲಿದ್ದೇನೆ ಎಂಬುದೂ ನನಗೆ ಗೊತ್ತಿಲ್ಲ, ವಾಪಸ್ ಮನೆಗೆ ಬಂದಮೇಲೆ ಎಲ್ಲವನ್ನೂ ಹೇಳುವುದಾಗಿ ಭಯಪಡುತ್ತ ತಿಳಿಸಿದ್ದಳು. ಮಗಳು ಅವಳಾಗೇ ಬರುತ್ತಾಳೆ ಎಂದು ಕಾದು, ಈಗ ಅವಳ ಪತ್ತೆ ಇಲ್ಲದ್ದರಿಂದ ಭಯದಿಂದ ದೂರು ನೀಡುತ್ತಿದ್ದೇನೆ.

ತಮ್ಮ ಮಗಳನ್ನು ಮಾ.2ರಂದು ಬೆಂಗಳೂರಿನಲ್ಲಿ ಅಪಹರಣ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದು, ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ತಮ್ಮ ಮಗಳನ್ನು ಅಪಹರಿಸಿ ನಂತರ ಅಕ್ರಮ ಬಂಧನದಲ್ಲಿಟ್ಟು ನಕಲಿ ಸಿಡಿ ಮಾಡಿ ಅದನ್ನು ಮಾಧ್ಯಮಗಳಿಗೆ ನೀಡಿ ಅವಮಾನ ಮಾಡಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.

ಆಕೆಯ ಜೀವಕ್ಕೆ ಅಪಾಯ ಇದೆ. ನಮಗೆ ರಕ್ಷಣೆ ನೀಡಬೇಕು ಹಾಗೂ ಮಗಳನ್ನು ಹುಡುಕಿ ಕೊಡಬೇಕೆಂದು ಯುವತಿಯ ತಂದೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಅದರಂತೆ ಐಪಿಸಿ ಸೆಕ್ಷನ್‌ 363, 368, 343, 346, 354 354ಎ ಹಾಗೂ 506ರ ಅಡಿಯಲ್ಲಿ ದೂರು ದಾಖಲಾಗಿದೆ.

RELATED TOPICS:
English summary :CD Politics

ಕೋವಿಡ್-19 ರಾಜ್ಯಾದ್ಯಂತ 596 ಸಾವು : 39,305 ಹೊಸ ಪ್ರಕರಣ, ಬೆಂಗಳೂರಿನಲ್ಲಿ 16,747 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 596 ಸಾವು : 39,305 ಹೊಸ ಪ್ರಕರಣ, ಬೆಂಗಳೂರಿನಲ್ಲಿ 16,747 | ಜನತಾ ನ್ಯೂ&#
ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂ&#
ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂ&#
ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು! | ಜನತಾ ನ್ಯೂ&#
ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು! | ಜನತಾ ನ್ಯೂ&#
ರೆಮ್‌ಡಿಸಿವಿರ್ ಕಾಳಸಂತೆ: ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ | ಜನತಾ ನ್ಯೂ&#
ರೆಮ್‌ಡಿಸಿವಿರ್ ಕಾಳಸಂತೆ: ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ | ಜನತಾ ನ್ಯೂ&#
ಕೊವಿಡ್​ನಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮೂರನೇಬಾರಿಗೆ ಮುಂದೂಡಿಕೆ! | ಜನತಾ ನ್
ಕೊವಿಡ್​ನಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮೂರನೇಬಾರಿಗೆ ಮುಂದೂಡಿಕೆ! | ಜನತಾ ನ್
ಆ್ಯಂಬುಲೆನ್ಸ್​ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ!  | ಜನತಾ ನ್ಯೂ&#
ಆ್ಯಂಬುಲೆನ್ಸ್​ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ! | ಜನತಾ ನ್ಯೂ&#
ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂ&#
ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂ&#
ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂ&#
ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂ&#
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ | ಜನತಾ ನ್ಯೂ&#
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ | ಜನತಾ ನ್ಯೂ&#
ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ | ಜನತಾ ನ್ಯೂ&#
ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ | ಜನತಾ ನ್ಯೂ&#
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ! | ಜನತಾ ನ್ಯೂ&#
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ! | ಜನತಾ ನ್ಯೂ&#
ರವಿ ಡಿ ಚನ್ನಣ್ಣನವರ್‌ಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂ&#
ರವಿ ಡಿ ಚನ್ನಣ್ಣನವರ್‌ಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂ&#

ನ್ಯೂಸ್ MORE NEWS...