ಎಫ್ಬಿ ನಕಲಿ ಪ್ರೊಫೈಲ್ ಮೂಲಕ ಲಕ್ಷಾಂತರ ರೂ. ಕಬಳಿಸಿದ ಖತರ್ನಾಕ್ ಯುವತಿ ಬಂಧನ! | Janata news
ಮೈಸೂರು : ಯುವತಿಯೊಬ್ಬಳು ನಕಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಮೇಘಾ ಅಲಿಯಾಸ್ ಹರಿಣಿ ಬಂಧಿತ ವಂಚಕಿ. ಈಕೆ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಯುವಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ಅವರನ್ನು ಚೆನ್ನಾಗಿ ನಂಬಿಸಿ ಚಿನ್ನಾಭರಣ ಹಾಗೂ ನಗದು ಪಡೆದುಕೊಳ್ಳುತ್ತಿದ್ದಳು. ಆ ಬಳಿಕ ಮೊಬೈಲ್ ಸ್ವೀಚ್ ಆಫ್ ಮಾಡಿಕೊಳ್ಳುತ್ತಿದ್ದಳು.
ಯುವತಿ ಚಿನ್ನು ಗೌಡ ಎಂಬ ಹೆಸರಿನಲ್ಲಿ ನಕಲಿ ಖಾತೆ ಹೊಂದಿದ್ದಳು. ರವಿ ಎಂಬ ವ್ಯಕ್ತಿಗೆ ಜಾಲ ಬೀಸಿದ್ದ ಈಕೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ರವಿ ಸಹ ಚಿನ್ನು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದ. ಆಗ ಮೇಘಾ ಬೇರೆಯವರ ಫೋಟೋಗಳನ್ನು ತನ್ನದೇ ಫೋಟೋ ಎಂದು ಕಳುಹಿಸಿ ಪರಿಚಯ ಮಾಡಿಕೊಂಡಿದ್ದಾಳೆ.ತನ್ನ ತಂದೆಯ 2 ಪೆಟ್ರೋಲ್ ಬಂಕ್ ಮತ್ತು ಬಾರ್ ಇರುವುದಾಗಿ ಹೇಳಿದ್ದಾಳೆ. ಬಳಿಕ ಆತನಿಂದ ಲಕ್ಷಾಂತರ ಹಣ ಪೀಕಿ ವಂಚಿಸಿದ್ದಾಳೆ.
ತನಿಖೆ ವೇಳೆ ಹಲವರಿಗೆ ಹೀಗೆಯೇ ವಂಚನೆ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.