50 ದಿನಗಳವರಗೆ ನನ್ನನ್ನೂ ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳು, ಕೋವಿಡ್ ಕೆಲಸ ಮಾಡುವವರಿಗೆ ರಜೆ ಇಲ್ಲ | Janata news

18 Mar 2021
442
Sudhakar

ಬೆಂಗಳೂರು : ನಮ್ಮ ರಾಜ್ಯವನ್ನು ಕೋವಿಡ್ ಮುಕ್ತ ರಾಜ್ಯ ಮಾಡೋಣ. ಎಲ್ಲರೂ ಸೇರಿ ಸೋಂಕು ನಿಯಂತ್ರಿಸಬೇಕಿದೆ. ಇಂದಿನಿಂದ 50 ದಿನಗಳವರಗೆ ಸಚಿವರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಕೋವಿಡ್ ಕೆಲಸ ಮಾಡುವವರಿಗೆ ರಜೆ ನೀಡಲಾಗುವುದಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ಸಭೆಯ ನಂತರ ಮಾತನಾಡಿದ ಡಾ. ಸುಧಾಕರ್ ಎರಡನೇ ಅಲೆಯ ಕೊರೊನಾಗೆ ಪೂರ್ವಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ. ನನ್ನನ್ನೂ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರೆಲ್ಲರಿಗೂ ಮನವಿ ಮಾಡಿದ್ದೇನೆ. ಇಂದಿನಿಂದ ಐವತ್ತು ದಿನ ಯಾರಿಗೂ ರಜೆ ಇರುವುದಿಲ್ಲ ಎಂದಿದ್ದಾರೆ.

ಕೋವಿಡ್ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿರ ಹಾಸಿಗೆ ಮೀಸಲಿಡಲಾಗುವುದು, ವ್ಯಾಕ್ಸಿನ್ ಕೊಡುವ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 60 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಸ್ವಯಂ ಪ್ರೇರಿತರಾಗಿ ಬರಬೇಕು ಎಂದರು.

ಆಂಬ್ಯುಲೆನ್ಸ್ ಗೆ ಕೊರತೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಒಟ್ಟು 200 ಆಂಬ್ಯುಲೆನ್ಸ್​ಗಳನ್ನ ಇದಕ್ಕೆ ಮೀಸಲಿಡಲಾಗಿದೆ. ಎಲ್ಲಾ ವಾರ್ಡ್ ಗಳಲ್ಲೂ ಒಂದೊಂದು ಆಂಬ್ಯುಲೆನ್ಸ್ ಮೀಸಲಿಡಲಾಗಿದೆ.

ಜನರು ಸ್ವಯಂಪ್ರೇರಿತವಾಗಿ ಲಸಿಕೆಯನ್ನ ಹಾಕಿಸಿಕೊಳ್ಳಬೇಕು.. ಆ ಮೂಲಕ ಸಾವು, ನೋವು ಆಗಬಾರದು. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಮಾಸ್ಕನ್ನ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಹಿಂದಿನಂತೆ ಕೋವಿಡ್ ವಾರ್ ರೂಮ್‍ಗಳನ್ನೂ ತೆರೆಯಲಾಗುವುದು. ಇದೇ ವಾರ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ಮಾಲೀಕರ ಜೊತೆ ಮಾತುಕತೆ ಮಾಡಲಾಗುವುದು ಎಂದರು. ಮತ್ತೆ ಎರಡನೆ ಅಲೆಯಲ್ಲಿ ಸೋಂಕು ಹೆಚ್ಚಾದರೆ ಬೆಡ್ ಮೀಸಲಿಡಲು ಸೂಚನೆ ನೀಡಲಾಗಿದೆ. ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದೆ. ಎಂದು ಹೇಳಿದರು.

ಲಸಿಕೆ ಹಾಕಿಸಿಕೊಂಡ ಬಳಿಕ ಸೋಂಕು ಬರುವುದಿಲ್ಲ ಎಂದು ಮಾಸ್ಕ ಮರೆಯಬಾರದು. ಕಡ್ಡಾಯವಾಗಿ ಮಾಸ್ಕ್ ಬಳಸುವುದು, ಗುಂಪು ಸೇರುವುದನ್ನು ಮಾಡಬಾರದು. ಪತ್ರಕರ್ತರಿಗೂ ಇಂದಿನಿಂದ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ಮರಣ ಪ್ರಮಾಣ ಸರಾಸರಿ ಕಡಿಮೆ ಇದೆ. ಇಡೀ ದೇಶಕ್ಕೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಇದೆ. ಪಾಸಿಟಿವಿಟಿ ಕೂಡ ಕಡಿಮೆ ಇದೆ. ಗುಣಮುಖರಾದವರ ಸಂಖ್ಯೆ 97ರಷ್ಟಿದೆ.

ಸೋಂಕು ಹೆಚ್ಚುತ್ತಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಇನ್ನು ಮುಂದಿನ 50 ದಿನಗಳು ಯಾವುದೇ ರಜೆ ನೀಡದಿರಲು ತೀರ್ಮಾನಿಸಲಾಗಿದೆ. ಎಲ್ಲರೂ ಇದಕ್ಕೆ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

RELATED TOPICS:
English summary :Sudhakar

ಕನ್ನಡಿಗರನ್ನು ಕೇಂದ್ರ ಸರಕಾರ ಹಣೆಬರಹಕ್ಕೆ ಬಿಟ್ಟಿದೆ: ಮಾಜಿ ಸಿಎಂ ಕುಮಾರಸ್ವಾಮಿ | ಜನತಾ ನ್ಯೂ&#
ಕನ್ನಡಿಗರನ್ನು ಕೇಂದ್ರ ಸರಕಾರ ಹಣೆಬರಹಕ್ಕೆ ಬಿಟ್ಟಿದೆ: ಮಾಜಿ ಸಿಎಂ ಕುಮಾರಸ್ವಾಮಿ | ಜನತಾ ನ್ಯೂ&#
ಆಕ್ಸಿಜನ್ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ನೇಮಕ | ಜನತಾ ನ್ಯೂ&#
ಆಕ್ಸಿಜನ್ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ನೇಮಕ | ಜನತಾ ನ್ಯೂ&#
ಕೇರಳ ರಾಜ್ಯಾದ್ಯಂತ ಮೇ 8 ರಿಂದ ಮೇ 16 ರವರೆಗೆ ಸಂಪೂರ್ಣ ಲಾಕ್ ಡೌನ್ | ಜನತಾ ನ್ಯೂ&#
ಕೇರಳ ರಾಜ್ಯಾದ್ಯಂತ ಮೇ 8 ರಿಂದ ಮೇ 16 ರವರೆಗೆ ಸಂಪೂರ್ಣ ಲಾಕ್ ಡೌನ್ | ಜನತಾ ನ್ಯೂ&#
ಅರ್ಧ ಲಕ್ಷದ ಗಡಿ ದಾಟಿದ ಪ್ರಕರಣ : ರಾಜ್ಯಾದ್ಯಂತ 50,112 ಕೋವಿಡ್-19 ಹೊಸ ಪ್ರಕರಣ, ಬೆಂಗಳೂರಿನಲ್ಲಿ 23,106 | ಜನತಾ ನ್ಯೂ&#
ಅರ್ಧ ಲಕ್ಷದ ಗಡಿ ದಾಟಿದ ಪ್ರಕರಣ : ರಾಜ್ಯಾದ್ಯಂತ 50,112 ಕೋವಿಡ್-19 ಹೊಸ ಪ್ರಕರಣ, ಬೆಂಗಳೂರಿನಲ್ಲಿ 23,106 | ಜನತಾ ನ್ಯೂ&#
ರಾಜ್ಯಕ್ಕೆ ಇಂಡಿಯನ್ ಆಯಿಲ್ ಹಾಗೂ ಬಹರೈನ್ ನಿಂದ 80ಮೆ.ಟ. ಎಲ್‌ಎಂ ಆಕ್ಸಿಜನ್ ಹಂಚಿಕೆ | ಜನತಾ ನ್ಯೂ&#
ರಾಜ್ಯಕ್ಕೆ ಇಂಡಿಯನ್ ಆಯಿಲ್ ಹಾಗೂ ಬಹರೈನ್ ನಿಂದ 80ಮೆ.ಟ. ಎಲ್‌ಎಂ ಆಕ್ಸಿಜನ್ ಹಂಚಿಕೆ | ಜನತಾ ನ್ಯೂ&#
4 ಕೋಟಿ ಕೋವಿಡ್-19 ಲಸಿಕೆಗಳ ಡೋಸ್ ಖರೀದಿಗೆ ಜಾಗತಿಕ ಟೆಂಡರ್ ಕರೆದ ಯೋಗಿ ಸರ್ಕಾರ | ಜನತಾ ನ್ಯೂ&#
4 ಕೋಟಿ ಕೋವಿಡ್-19 ಲಸಿಕೆಗಳ ಡೋಸ್ ಖರೀದಿಗೆ ಜಾಗತಿಕ ಟೆಂಡರ್ ಕರೆದ ಯೋಗಿ ಸರ್ಕಾರ | ಜನತಾ ನ್ಯೂ&#
ಬಿಬಿಎಂಪಿ ಪೋರ್ಟಲ್ ನಲ್ಲಿ 3,170 ಹಾಸಿಗೆಗಳು ಪ್ರತ್ಯಕ್ಷ :  ಸಾಫ್ಟ್ ವೇರ್ ಮರುವಿನ್ಯಾಸಕ್ಕೆ ಕೈಜೋಡಿಸಿದ ನಿಲೇಕಣಿ | ಜನತಾ ನ್ಯೂ&#
ಬಿಬಿಎಂಪಿ ಪೋರ್ಟಲ್ ನಲ್ಲಿ 3,170 ಹಾಸಿಗೆಗಳು ಪ್ರತ್ಯಕ್ಷ : ಸಾಫ್ಟ್ ವೇರ್ ಮರುವಿನ್ಯಾಸಕ್ಕೆ ಕೈಜೋಡಿಸಿದ ನಿಲೇಕಣಿ | ಜನತಾ ನ್ಯೂ&#
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಕೊರೊನಾ ಸೋಂಕು? | ಜನತಾ ನ್ಯೂ&#
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಕೊರೊನಾ ಸೋಂಕು? | ಜನತಾ ನ್ಯೂ&#
ಬೆಡ್ ಬ್ಲಾಕ್ ದಂಧೆ ಆರೋಪಿ ಕೈ ನಾಯಕರ ಜೊತೆ ಇರುವ ಫೋಟೋ ವೈರಲ್ | ಜನತಾ ನ್ಯೂ&#
ಬೆಡ್ ಬ್ಲಾಕ್ ದಂಧೆ ಆರೋಪಿ ಕೈ ನಾಯಕರ ಜೊತೆ ಇರುವ ಫೋಟೋ ವೈರಲ್ | ಜನತಾ ನ್ಯೂ&#
ಬೆಡ್ ಬ್ಲಾಕ್ ದಂಧೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಬೊಮ್ಮಾಯಿ | ಜನತಾ ನ್ಯೂ&#
ಬೆಡ್ ಬ್ಲಾಕ್ ದಂಧೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಬೊಮ್ಮಾಯಿ | ಜನತಾ ನ್ಯೂ&#
ಆಕ್ಸಿಜನ್‌ ಇಲ್ಲದೆ ಇನ್ನೆಷ್ಟು ಜನ ಸಾಯ್ಬೇಕು?: ಕೇಂದ್ರದ ವಿರುದ್ಧ ಕರ್ನಾಟಕ ಹೈ ಕೋರ್ಟ್ ಕಿಡಿ | ಜನತಾ ನ್ಯೂ&#
ಆಕ್ಸಿಜನ್‌ ಇಲ್ಲದೆ ಇನ್ನೆಷ್ಟು ಜನ ಸಾಯ್ಬೇಕು?: ಕೇಂದ್ರದ ವಿರುದ್ಧ ಕರ್ನಾಟಕ ಹೈ ಕೋರ್ಟ್ ಕಿಡಿ | ಜನತಾ ನ್ಯೂ&#
ಪ್ರಧಾನಿಯವರ ನಿರ್ದೇಶನ ಆಧರಿಸಿ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗುವುದು : ಸಿಎಂ ಯಡಿಯೂರಪ್ಪ | ಜನತಾ ನ್ಯೂ&#
ಪ್ರಧಾನಿಯವರ ನಿರ್ದೇಶನ ಆಧರಿಸಿ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗುವುದು : ಸಿಎಂ ಯಡಿಯೂರಪ್ಪ | ಜನತಾ ನ್ಯೂ&#

ನ್ಯೂಸ್ MORE NEWS...