ಟಿಲ್ಲರ್ ಹಿಡಿದು ಉಳುಮೆ ಮಾಡಿದ ರಶ್ಮಿಕಾ! | Janata news
ಬೆಂಗಳೂರು : ಟಿಲ್ಲರ್ ಹಿಡಿದು ಗದ್ದೆಯಲ್ಲಿ ಉಳುಮೆ ಮಾಡುತ್ತಿರುವ ವಿಡಿಯೊವನ್ನು ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೊ ವೈರಲ್ ಆಗಿದೆ.
ತಮಿಳಿನ ಕಾರ್ತಿ ಅಭಿನಯದ ಸುಲ್ತಾನ್ ಸಿನಿಮಾದಲ್ಲಿ ರಶ್ಮಿಕಾ ನಾಯಕಿ. ಆ ಚಿತ್ರದಲ್ಲಿ ರಶ್ಮಿಕಾ ಟ್ರ್ರ್ಯಾಕ್ಟರ್‌ನಲ್ಲಿ ಗದ್ದೆ ಉಳುಮೆ ಮಾಡುವ ದೃಶ್ಯವಿದೆ. ಪಕ್ಕಾ ಹಳ್ಳಿ ಹುಡುಗಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದು ಟಿಲ್ಲರ್ ಮೂಲಕ ಗದ್ದೆ ಉಳುಮೆ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪಾತ್ರವನ್ನು ತುಂಬ ಎಂಜಾಯ್ ಮಾಡಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಪವರ್ ಟಿಲ್ಲರ್ ಹಿಡಿದು ಗದ್ದೆ ಉಳುಮೆ ಮಾಡುತ್ತಾ ಇರುವ ವಿಡೀಯೋ ನೋಡಿದ ಅಭಿಮಾನಿಗಳು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.