ಬೆಂಗಳೂರುನಲ್ಲಿ ಒಂದೇ ಕುಟುಂಬದ 7 ಮಂದಿಗೆ ಸೋಂಕು! | Janata news
ಬೆಂಗಳೂರು : ವೈಯಾಲಿಕಾವಲ್ನಲ್ಲಿ ಒಂದೇ ಮನೆಯಲ್ಲಿ 7 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಈ ಮನೆಯ ಮಹಿಳೆಯೊಬ್ಬರು ಜಯನಗರದ ಕೊರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಂದ ಮನೆ ಮಂದಿಗೆ ಸೋಂಕು ತಗುಲಿದೆ ಎನ್ನಲಾಗಿದೆ.
ಏಳು ಮಂದಿಯಲ್ಲಿ ನಾಲ್ವರು ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಮೂರು ಮಂದಿಯನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗಿದೆ.
ಮೊದಲ ಮಹಡಿಯಲ್ಲಿ ಕೊರೊನಾ ಸೋಂಕಿತರ ಮನೆ ಇದ್ದು, ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
English summary :Corona Virus in Bangalore